ವರ್ಕ್​​​​ಔಟ್​​ ಆಯ್ತು ಸಿಎಂ ಎಚ್ಚರಿಕೆ; ರಸ್ತೆ ಗುಂಡಿ ಮುಚ್ಚಲು ಶುರು ಮಾಡಿತು ಬಿಬಿಎಂಪಿ

Pot holes
Published on

ಬೆಂಗಳೂರು: ಕಡೆಗೂ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಅದಕ್ಕೆ ಕಾರಣ, ಅದಕ್ಕೂ ಮುನ್ನ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ..! ಇಂದು ಬೆಳಿಗ್ಗೆ ಬೊಮ್ಮಾಯಿ ಎಚ್ಚರಿಕೆ ಕೊಟ್ಟಿದ್ದರ ಪರಿಣಾಮ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಬಿಬಿಎಂಪಿ ಮುಚ್ಚತೊಡಗಿದೆ.

ನಿನ್ನೆ ಕೂಡ ರಸ್ತೆ ಗುಂಡಿಯಲ್ಲಿ ವಾಹನ ಸ್ಕಿಡ್ ಆಗಿ ಒಬ್ಬರು ಮೃತಪಟ್ಟಿದ್ದರು. ಈ ಹಿಂದೆ ಕೂಡ ಹಲವು ಬಾರಿ ಬಿದ್ದು ಗಾಯಗೊಂಡಿರುವ ವಾಹನ ಸವಾರರು, ಮೃತಪಟ್ಟವರ ಸಂಖ್ಯೆ ಕಡಿಮೆಯೇನಿಲ್ಲ. ಆದರೂ, ಪಾಲಿಕೆ ಮಾತ್ರ ರಸ್ತೆ ಗುಂಡಿ ಮುಚ್ಚಲು ಮಳೆಯ ನೆಪ ಹೇಳುತ್ತಿತ್ತು. ಇಂದು ಸಿಎಂ, ಮಧ್ಯಾಹ್ನದೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಎಚ್ಚರಿಸಿದ್ದರು. ಅದರಂತೆ, ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯಕ್ಕೆ ಇಳಿದಿದೆ. ಈಗಲಾದರೂ ಗುಂಡಿ ಮುಚ್ಚುತ್ತಿದ್ದಾರೆಂದು ಜನ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net