More

    ಶೌಚಗೃಹ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ

    ದೇವದುರ್ಗ: ಮನೆ ಚಿಕ್ಕದಿರಲಿ, ದೊಡ್ಡದಾಗಿರಲಿ ಮನೆಗೊಂದು ಶೌಚಗೃಹ ಇದ್ದರೆ ಉತ್ತಮ. ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಪರಿಸರವೂ ಸ್ವಚ್ಛವಾಗಿರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಹೇಳಿದರು.

    ಇದನ್ನೂ ಓದಿ: ಕೆಟ್ಟು ನಿಂತ ಇ-ಪೇ ಶೌಚಗೃಹಗಳು

    ಪಟ್ಟಣದ ಆಶ್ರಯ ಕಾಲನಿಯಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ವಿಶ್ವ ಶೌಚಗೃಹ ದಿನಾಚರಣೆ ಹಾಗೂ ಬಯಲುಮುಕ್ತ ಶೌಚ ಜಾಗೃತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

    ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ನ ನಾಗರಿಕರು ಈಗಾಗಲೇ ಸರ್ಕಾರದಿಂದ ನಿರ್ಮಾಣ ಮಾಡಿರುವ ವೈಯಕ್ತಿಕ ಹಾಗೂ ಸಾರ್ವಜನಿಕ ಶೌಚಗೃಹ ಬಳಕೆ ಮಾಡಬೇಕು.

    ಶೌಚಗೃಹ ಇಲ್ಲದವರು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿಕೊಳ್ಳಲು ಪುರಸಭೆಗೆ ಅರ್ಜಿ ಸಲ್ಲಿಸಬೇಕು. ಬಯಲುಮುಕ್ತ ಶೌಚಕ್ಕೆ ಆದ್ಯತೆ ನೀಡಬೇಕೆದಂದರು. ನೈರ್ಮಲ್ಯ ಅಧಿಕಾರಿ ರಂಗಪ್ಪ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts