More

    ಅಮೆರಿಕದಲ್ಲಿನ್ನು ಡೆಮಾಕ್ರಟನ್ನರ ಆಡಳಿತ: ಅಧಿಕಾರ ಸ್ವೀಕರಿಸಿದ ಜೋ ಬೈಡೆನ್-ಕಮಲಾ ಹ್ಯಾರಿಸ್

    ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು 49ನೇ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಿದರು. ಆ ಮೂಲಕ ರಿಪಬ್ಲಿಕ್ಕನ್ನರ ಆಡಳಿತ ಕೊನೆಗೊಂಡಿದ್ದು, ಡೆಮಾಕ್ರಟನ್ನರ ಆಡಳಿತ ಶುರುವಾಗಿದೆ.

    ಕ್ಯಾಪಿಟಲ್ ಹಿಲ್​ನ ವೆಸ್ಟ್ ಫ್ರಂಟ್​ನಲ್ಲಿ ಬುಧವಾರ ಅಮೆರಿಕದ ಕಾಲಮಾನ ಮಧ್ಯಾಹ್ನ 12 ಗಂಟೆಗೆ (ಭಾರತದ ಕಾಲಮಾನ ರಾತ್ರಿ 10.30) ಪದಗ್ರಹಣ ಸಮಾರಂಭ ನಡೆಯಿತು. 56 ವರ್ಷದ ಕಮಲಾ ಹ್ಯಾರಿಸ್​ಗೆ ಸುಪ್ರೀಂಕೋರ್ಟ್​ನ ಅಸೋಸಿಯೇಟ್ ಜಸ್ಟೀಸ್ ಸೋನಿಯಾ ಸೊಟೊಮೇಯರ್ ಪ್ರಮಾಣವಚನವನ್ನು ಓಥ್ಸ್ ಆಫ್ ಆಫೀಸಿನಲ್ಲಿ ಬೋಧಿಸಿದರು. ಜೋ ಬೈಡೆನ್​ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣವಚನವನ್ನು ಯುಎಸ್ ಕ್ಯಾಪಿಟಲ್​ನ ವೆಸ್ಟ್ ಫ್ರಂಟ್​ನಲ್ಲಿ ಬೋಧಿಸಿದರು. ಇದನ್ನೂ ಓದಿರಿ ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಅಮೆರಿಕದ ಕಾಲಮಾನ ಬೆಳಗ್ಗೆ 10.30ಕ್ಕೆ ಶುರುವಾದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನೇವಿ ಸೂಟ್ ಉಡುಪು, ಅದರ ಮೇಲೆ ನೇವಿ ಓವರ್ ಕೋಟ್ ಧರಿಸಿ ಜೋ ಬೈಡೆನ್ ಆಗಮಿಸಿದ್ದರು. ಇದೇ ರೀತಿ, ಫಸ್ಟ್ ಲೇಡಿ ಡಾ.ಜಿಲ್ ಬೈಡೆನ್ ಸಾಗರ ನೀಲಿ ಬಣ್ಣದ ಉಣ್ಣೆ ಕೋಟ್ ಧರಿಸಿದ್ದರು.

    ಅಮೆರಿಕದಲ್ಲಿನ್ನು ಡೆಮಾಕ್ರಟನ್ನರ ಆಡಳಿತ: ಅಧಿಕಾರ ಸ್ವೀಕರಿಸಿದ ಜೋ ಬೈಡೆನ್-ಕಮಲಾ ಹ್ಯಾರಿಸ್

    ಕಮಲಾ ಹ್ಯಾರಿಸ್ ಅಮೆರಿಕ ದೇಶದ ಉಪಾಧ್ಯಕ್ಷ ಸ್ಥಾನದ ಹೊಣೆಗಾರಿಕೆ ಹೊರುತ್ತಿರುವ ಮೊಟ್ಟ ಮೊದಲ ಮಹಿಳೆ. ಮೊದಲ ಕಪ್ಪು ವರ್ಣೀಯ, ಮೊದಲ ದಕ್ಷಿಣ ಏಷ್ಯನ್ ಅಮೆರಿಕನ್ ಎಂಬ ಕೀರ್ತಿಗೂ 56 ವರ್ಷದ ಹ್ಯಾರಿಸ್​ ಪಾತ್ರರಾಗಿದ್ದಾರೆ. ಎಲೆಗಂಟ್ ಸಿಗ್ನೇಚರ್ ಸ್ಟೈಲ್ ಬ್ಲೇಝುರ್ಸ್ ಧರಿಸಿದ ಕಮಲಾ ಗಮನಸೆಳೆದರು.

    ಇನ್ನು ಜೋ ಬೈಡೆನ್​ ಪದಗ್ರಹಣ ಕಾರ್ಯಕ್ರಮಕ್ಕೆ ಡೊನಾಲ್ಡ್​ ಟ್ರಂಪ್ ಗೈರಾಗಿದ್ದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಪ್ರಮಾನ ವಚನ ಸ್ವೀಕಾರಕ್ಕೆ ಕೆಲವೇ ನಿಮಿಷ ಇರುವಾಗಲೇ ಶ್ವೇತಭವನಕ್ಕೆ ಟ್ರಂಪ್ ವಿದಾಯ ಹೇಳಿದ್ದರು. ಡೊನಾಲ್ಡ್ ಟ್ರಂಪ್​ ಉತ್ತರಾಧಿಕಾರಿಯಾಗಿರುವ ಬೈಡೆನ್ ಅಮೆರಿಕದ ವಯೋವೃದ್ಧ ಅಧ್ಯಕ್ಷ ಎನಿಸಿಕೊಂಡಿದ್ದಾರೆ.ಟ್ರಂಪ್​ಗೆ 74 ವರ್ಷ. ಬೈಡೆನ್​ಗೆ 78.

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts