More

    ಇಂದು ಜಿಲ್ಲೆಗೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಬಿಡದಿಯಲ್ಲಿ ಸಮಾವೇಶ

     ರಾಮನಗರ: ಕಂದಾಯ ಸಚಿವ ಆರ್. ಅಶೋಕ್ ನೇತತ್ವದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಚನ್ನಪಟ್ಟಣದಿಂದ ಶನಿವಾರ ಆರಂಭವಾಗಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ತಿಳಿಸಿದರು.

    ರಾಮನಗರ ಜಿಲ್ಲೆಯಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆ ಬಗ್ಗೆ ರಾಮನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಮಾಹಿತಿ ನೀಡಿದ ಅವರು, ಮಾ.1ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭವಾದ ಯಾತ್ರೆ ನಾಲ್ಕು ವಿಭಾಗಗಳಲ್ಲಿ ನಡೆಯುತ್ತಿದೆ. ಮಾ.25ರಂದು ದಾವಣಗೆರೆಯಲ್ಲಿ ಯಾತ್ರೆ ಸಮಾರೋಪಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದರು.

    ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣದ ಮಳೂರಿನ ಅಪ್ರಮೇಯ ದೇವಾಲಯದಿಂದ ಶನಿವಾರ (ಮಾ.4) ಬೆಳಗ್ಗೆ 10.30ರಿಂದ ಯಾತ್ರೆ ಆರಂಭವಾಗಲಿದೆ. ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಎಂ.ಟಿ.ಬಿ. ನಾಗರಾಜ್, ಎಸ್.ಟಿ. ಸೋಮಶೇಖರ್, ವಿ. ಸೋಮಣ್ಣ, ಬಿ. ನಾಗೇಶ್, ಮುನಿರತ್ನ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.

    ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಮುಖ ಸಾಧನೆಗಳನ್ನು ಬಿಂಬಿಸುವ ಮತ್ತು ಜಿಲ್ಲೆಗೆ ಆಗಿರುವ ಅಭಿವದ್ಧಿ ಕೆಲಸಗಳ ವಾಹಿತಿಯನ್ನು ಎಲ್‌ಇಡಿ ಪ್ರಚಾರದ ವಾಹನಗಳ ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆ ವಾಡಲಾಗಿದೆ. ಯಾತ್ರೆ ಮಳೂರು, ಮಂಗಳವಾರಪೇಟೆ, ಚನ್ನಪಟ್ಟಣದ ಅಂಬೇಡ್ಕರ್ ಪುತ್ಥಳಿಗೆ ವಾಲಾರ್ಪಣೆ ವಾಡಿ, ಎಂ.ಜಿ.ರಸ್ತೆ, ಬಿ.ಎಂ.ರಸ್ತೆ ಮೂಲಕ ಸಾತನೂರು ಸರ್ಕಲ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಲಿದ್ದಾರೆ.

    ಮಧ್ಯಾಹ್ನ 1 ಗಂಟೆಗೆ ಯಾತ್ರೆ ರಾಮನಗರ ಪ್ರವೇಶಿಸಲಿದ್ದು ಅರ್ಚಕರಹಳ್ಳಿ ಮಹದೇಶ್ವರ ದೇವಾಲಯದ ಆವರಣದಿಂದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಬೈಕ್ ರ‌್ಯಾಲಿ ಮೂಲಕ ಬಿಜೆಪಿ ಮುಖಂಡ ಗೌತಮ್‌ಗೌಡ ನೇತತ್ವದಲ್ಲಿ ಯಾತ್ರೆ ಪ್ರಾರಂಭವಾಗಲಿದೆ. ಬಿ.ಎಂ.ರಸ್ತೆ, ಐಜೂರು, ಸಿಗ್ನಲ್, ಹಳೇಬಸ್ ನಿಲ್ದಾಣದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪುತ್ಥಳಿಗೆ ವಾಲಾರ್ಪಣೆ ವಾಡಿ ನಗರದ ಮುಖ್ಯರಸ್ತೆ, ಎಂ.ಜಿ.ರಸ್ತೆ, ಕಾಮನಗುಡಿ ವತ್ತದ ಮೂಲಕ ಪಿಡಬ್ಲ್ಯುಡಿ ಸರ್ಕಲ್, ವಿಜಯನಗರದ ಅಭಯ ಆಂಜನೇಯ ದೇವಾಲಯದ ಬಳಿ ಯಾತ್ರೆ ಮುಕ್ತಾಯವಾಗಲಿದೆ.

    ಸಂಜೆ 4 ಗಂಟೆಗೆ ಬಿಡದಿ ಬಾಲಗಂಗಾಧರನಾಥ ಸ್ವಾಮೀಜಿ ವತ್ತದಲ್ಲಿ ಬಹತ್ ಸವಾವೇಶ ಆಯೋಜಿಸಲಾಗಿದೆ. ಏರ್ಪಡಿಸಲಾಗಿದೆ. ರಾಮನಗರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಆಡಳಿತದಲ್ಲಿ ಅನುಷ್ಠಾನಗೊಂಡಿರುವ ಅಭಿವದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತದೆ. ಹಾಗೂ ಯಾತ್ರೆ ಸಾಗುವ ಹಾದಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಪ್ರಣಾಳಿಕೆ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಪತ್ರದ ಮೂಲಕ ಪಡೆಯಲಾಗುವುದು ಎಂದು ಅಶ್ವತ್ಥನಾರಾಯಣಗೌಡ ತಿಳಿಸಿದರು.

    ರೇಷ್ಮೆ ಅಭಿವದ್ಧಿ ನಿಗಮ ಅಧ್ಯಕ್ಷ ಗೌತಮ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು, ಪ್ರಾಧಿಕಾರ ಅಧ್ಯಕ್ಷ ಶಿವವಾದು, ವಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು, ಪ್ರಧಾನ ಕಾರ್ಯದರ್ಶಿ ರುದ್ರದೇವರು, ತಾಲೂಕು ಅಧ್ಯಕ್ಷ ಗೋಪಾಲ್, ನಗರ ಟಕ ಅಧ್ಯಕ್ಷ ಶಿವಾನಂದ, ಮುಖಂಡರಾದ ಪ್ರಸಾದ್‌ಗೌಡ, ಲೀಲಾವತಿ, ವಾಧ್ಯಮ ಪ್ರಮುಖ್ ಕೇಶವ್‌ಮೂರ್ತಿ, ದರ್ಶನ್ ರೆಡ್ಡಿ, ಬಿ. ನಾಗೇಶ್, ವಾಧ್ಯಮ ಸಂಚಾಲಕ ಚಂದ್ರಶೇಖರರೆಡ್ಡಿ, ಸುರೇಶ್, ಸಮಂತ್, ಆನಂದ್, ಕಾಳಯ್ಯ, ಮಲ್ಲೇಶ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts