More

    ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು;ಐಐಎಸ್ಸಿ ಜತೆಗೆ ಟ್ರಾಫಿಕ್ ಪೊಲೀಸ್ ಒಪ್ಪಂದ

    ಬೆಂಗಳೂರು: ರಾಜಧಾನಿಯ ಟ್ರಾಫಿಕ್ ತಗ್ಗಿಸಲು ಮತ್ತು ಸಂಚಾರ ವಿಭಾಗ ಬಲವರ್ಧನೆಗೊಳಿಸಲು ನಗರ ಸಂಚಾರ ಪೊಲೀಸ್ ವಿಭಾಗ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಒಪ್ಪಂದ ಮಾಡಿಕೊಂಡಿವೆ.

    ಒಪ್ಪಂದದ ಪ್ರಕಾರ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಸಂಚಾರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಐಐಎಸ್‌ಸಿ ಜತೆಗೆ ಹಂಚಿಕೊಳ್ಳಲಿದೆ. ಇದನ್ನು ಬಳಸಿಕೊಂಡು ಐಐಎಸ್ಸಿ ಸಂಶೋಧಕರು ಅಧ್ಯಾಯನ ನಡೆಸಿ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಸಂಚಾರ ದಟ್ಟಣೆ ಕಡಿಮೆ ಮಾಡಲು ಸಂಚಾರ ಪೊಲೀಸ್ ವಿಭಾಗಕ್ಕೆ ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ. ಅಂತೆಯೆ ರಸ್ತೆ ಸುರಕ್ಷತಾ ಆಡಿಟ್ ತರಬೇತಿ ಮತ್ತು ಇಲಾಖೆಯ ಬಲವರ್ಧನೆಗೆ ಸಹಕಾರ ನೀಡಲಿದ್ದಾರೆ.

    ಈ ಕುರಿತು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಮಾತನಾಡಿ, ಪ್ರತಿ ತಿಂಗಳು ಅಂದಾಜು 30 ಪೆಟಾಬೈಟ್ಸ್ ದತ್ತಾಂಶವನ್ನು ಸೃಜಿಸುತ್ತದೆ. ಇದನ್ನು ಐಐಎಸ್ಸಿ ವಿಶ್ಲೇಷಿಸಿ ನಗರದ ಟ್ರಾಫಿಕ್‌ಗೆ ಪರಿಹಾರವನ್ನು ಒದಗಿಸುವುದಲ್ಲದೆ, ಸುರಕ್ಷತಾ ಕ್ರಮಗಳ ಬಗ್ಗೆಯೂ ಒಳನೋಟವನ್ನು ನೀಡಲಿದೆ.

    ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ನಮ್ಮ ಸಿಬ್ಬಂದಿಯವರಿಗೆ ಅಗತ್ಯ ತರಬೇತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆಯಲು ಈ ಒಪ್ಪಂದವು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಕರ್ಯ, ಸುಸ್ಥಿರ ಸಂಚಾರ ಮತ್ತು ನಗರ ಯೋಜನೆ ಕೇಂದ್ರದ ಮುಖ್ಯಸ್ಥ ಪ್ರೊ. ಅಬ್ದುಲ್ ರಾವೂಫ್ ಪಿಂಜಾರಿ ಮಾತನಾಡಿ, ಸಂಚಾರ ಪೊಲೀಸರೊಂದಿಗೆ ಮಾಡಿಕೊಂಡ ಒಪ್ಪಂದದ ಬಗ್ಗೆ ಬಹಳ ಉತ್ಸುಕರಾಗಿದ್ದೇವೆ.

    ಮುಂದಿನ ದಿನಗಳಲ್ಲಿ ಸಂಚಾರ ಪೊಲೀಸರು ನೀಡುವ ದತ್ತಾಂಶಗಳನ್ನು ಸೂಕ್ತವಾಗಿ ವಿಶ್ಲೇಷಿಸಿ ನಗರದ ಸುಗಮ ಸಂಚಾರಕ್ಕೆ ಅಗತ್ಯವಿರುವ ಯೋಜನೆಗಳನ್ನು ನೀಡಲು ಸಹಕರಿಸಲಿದ್ದೇವೆ ಎಂದು ಭರವಸೆ ನೀಡಿದರು. ಐಐಎಸ್ಸಿ ಪ್ರೊ. ವಿಜಯ್ ವಳ್ಳಿ, ಸಂಚಾರ ವಿಭಾಗ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಐಐಎಸ್ಸಿಯ ರಕ್ಷಿತ್ ರಮೇಶ್, ಡಾ. ರಘುಕೃಷ್ಣಪುರಂ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts