More

    ಜನರ ಸಮಸ್ಯೆ ಆಲಿಸಲು ಪರಿವರ್ತನೆ ಪಾದಯಾತ್ರೆ

    ಆಳಂದ: ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಪರಿವರ್ತನೆ ಪಾದಯಾತ್ರೆಗೆ ಹಿರೋಳ್ಳಿಯ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕಲಬುರಗಿ, ಬೀದರ್, ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಶನಿವಾರ ಚಾಲನೆ ನೀಡಿದರು.

    ಕಳೆದ ಹಲವು ವರ್ಷಗಳಿಂದ ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಪರಿವರ್ತನೆ ಪಾದಯಾತ್ರೆ ನಡೆಯುತ್ತಿತ್ತು. ಈ ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದು, ಅವರ ಬದಲಿಗೆ ನಾನೇ ಪಾದಯಾತ್ರೆ ನಡೆಸುತ್ತಿz್ದೆÃನೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

    ಹಿರೋಳ್ಳಿಯ ಶ್ರೀ ಸೋಮೇಶ್ವರ ದೇವಾಲಯ ಆವರಣದಿಂದ ಪ್ರಾರಂಭಗೊAಡ ಪರಿವರ್ತನೆ ಪಾದಯಾತ್ರೆಯೂ ಭೀಮಪುರ, ಕಾಮನಳ್ಳಿ ಮುಖಾಂತರ ಸಕ್ಕರಗಾದಲ್ಲಿ ವಾಸ್ತವ್ಯ ಮಾಡಿತು. ಭಾನುವಾರ ಬೆಳಗ್ಗೆ ಅಂಬೇವಾಡ, ಕಿಣ್ಣಿಅಬ್ಬಾಸ್, ನಾಗಲೇಗಾಂವ್ ಮೂಲಕ ಸರಸಂಬಾ ತಲುಪಲಿದೆ. ಅ.30ರಂದು ಸಾವಳೇಶ್ವರ, ಖಾನಾಪುರ, ಜೀರಹಳ್ಳಿ, ಹೆಬಳಿ (ವಾಸ್ತವ್ಯ). ಅ.31ರಂದು ಮಟಕಿ ತಾಂಡಾ, ಬಿಜಲಿಗುಂಡ ತಾಂಡಾ, ಅಪ್ಟೆ ತಾಂಡಾ, ತೀರ್ಥ ತಾಂಡಾ, ತೀರ್ಥ, ಮಟಕಿ, ನಿರಗುಡಿ (ವಾಸ್ತವ್ಯ). ನ.1ರಂದು ಚಿಂಚೋಳಿ (ಬಿ), ಚಿಂಚೋಳಿ(ಕೆ) ಮೂಲಕ ಪಡಸಾವಳಿ ತಲುಪಿ ಸಮಾರೋಪಗೊಳ್ಳಲಿದೆ. ಪಾದಯಾತ್ರೆಯುದ್ದಕ್ಕೂ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವರಂಗ ಕಲಾ ಬಳಗದ ಕಲಾವಿದರಿಂದ ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

    ಪ್ರಮುಖರಾದ ಗುರುಲಿಂಗ ಜಂಗಮ ಪಾಟೀಲ್ ಧಂಗಾಪುರ, ದತ್ತರಾಜ ಗುತ್ತೇದಾರ್, ಈರಣ್ಣ ಝಳಕಿ, ಶರಣಬಸಪ್ಪ ಭೂಸನೂರ, ಮಲ್ಲಿನಾಥ ಪಾಟೀಲ್ ಮದಗುಣಕಿ, ವೈಜನಾಥ ಪಾಟೀಲ್, ಬಸವರಾಜ ಪವಾಡಶೆಟ್ಟಿ, ಮೋಹನಗೌಡ ಪಾಟೀಲ್, ಮಲ್ಲಪ್ಪ ಹತ್ತರಕಿ, ಸದಾಶಿವ ಬಂಗರಗಿ, ರಾಜಶೇಖರ ಯಕ್ಕಂಚಿ, ದತ್ತಾ ಕಟ್ಟಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts