More

    ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ

    ಬೈಲಹೊಂಗಲ: ಪಟ್ಟಣದ ಮಿನಿ ವಿಧಾನಸೌಧ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ ಮಿತಿ ಮೀರಿ ಭ್ರಷ್ಟಾಚಾರ ನಡೆಯುತ್ತಿದೆ ಆರೋಪಿಸಿ ರಾಜ್ಯ ರೈತ ಸಂಘದ ರೈತರು, ಸಾರ್ವಜನಿಕರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ರೈತ ಮುಖಂಡರಾದ ಎ್.ಎಸ್.ಸಿದ್ಧನಗೌಡರ, ಮಹಾಂತೇಶ ಕಮತ ಮಾತನಾಡಿ, ಉಪನೋಂದಣಿ, ಭೂಮಾಪನ, ಖಜಾನೆ, ಶಿಶು ಅಭಿವೃದ್ಧಿ, ಕಾರ್ಮಿಕ ಇಲಾಖೆ ಸೇರಿ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಹಸೀಲ್ದಾರ್ ಕಚೇರಿಯಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಎಲ್ಲ ಕಡೆ ಏಜೆಂಟರ ಹಾವಳಿ ಹೆಚ್ಚಿದೆ. ಮೇಲಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಕೆಳ ಹಂತದ ಅಧಿಕಾರಿಗಳು ಜನಸಾಮಾನ್ಯರ ಮೇಲೆ ದರ್ಪ ತೋರಿ ಪ್ರತಿಯೊಂದು ಕೆಲಸಕ್ಕೆ ಲಂಚ ಪಡೆಯುತ್ತಿದ್ದಾರೆ.

    ಲಂಚ ಕೊಡದವರ ಕೆಲಸ ಮಾಡದೆ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ಭೂಮಿ ಅಳತೆ ಮಾಡಲು ಸರ್ವೇಯರ್‌ಗಳು ರೈತರಿಂದ ಸಾವಿರಾರು ರೂ. ಲಂಚ ಪಡೆಯುತ್ತಿದ್ದಾರೆ. ಮೇಲಧಿಕಾರಿಗಳು ಕೂಡಲೇ ಭ್ರಷ್ಟಾಚಾರ ನಿಯಂತ್ರಣಕ್ಕೆ ತರಬೇಕು. ಇಲ್ಲವಾದರೆ ರೈತರಿಂದ ಬಾರಕೋಲು ಚಳವಳಿ ನಡೆಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


    ಮಿನಿ ವಿಧಾನಸೌಧ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಕಚೇರಿಯ ಮುಖ್ಯದ್ವಾರ ಬಂದ್ ಮಾಡಿ ಧರಣಿ ನಡೆಸಿ ಭಷ್ಟ್ರ ಅಧಿಕಾರಿ, ಸಿಬ್ಬಂದಿ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.


    ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ, ತಹಸೀಲ್ದಾರ್ ಸಚ್ಚಿದಾನಂದ ಕೊಚನೂರ ಪ್ರತಿಭಟನಾನಿರತರ ಸಮಸ್ಯೆ ಅಲಿಸಿದರು. ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರೈತರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕೆಲಸ ಮಾಡುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

    ಮುಖಂಡರಾದ ಸಿ.ಕೆ.ಮೆಕ್ಕೇದ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಮುರುಗೇಶ ಗುಂಡ್ಲೂರ, ವಿಜಯ ಪತ್ತಾರ, ಸುರೇಶ ವಾಲಿ, ಸುರೇಶ ಹೊಳಿ, ಉದಯ ದುಗ್ಗಾಣಿ, ಮಲ್ಲಿಕಾರ್ಜುನ ಹುಂಬಿ, ವಿಠ್ಠಲ ಒಕ್ಕುಂದ, ನಾಗಪ್ಪ ಗುಂಡ್ಲೂರ, ಗೂಳಪ್ಪ ಹೊಳಿ, ಮಡಿವಾಳಪ್ಪ ಗುಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts