More

    ಆರೋಗ್ಯವಾಗಿರಲು ಕ್ರೀಡೆ ಮುಖ್ಯ

    ಮೂಡಲಗಿ: ಬಾಲ್-ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ, ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳು ಸಹಕಾರಿ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಹೇಳಿದರು.

    ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ(ಬಿಪಿ.ಇಡಿ ಮತ್ತು ಎಂಪಿ.ಇಡಿ)ದ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಅಂತರ ಮಹಾವಿದ್ಯಾಲಯಗಳ ಪುರುಷರ ಬಾಲ್-ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಮನುಷ್ಯ ಆರೋಗ್ಯವಂತನಾಗಲು ಒಂದಿಲ್ಲೊಂದು ಕ್ರೀಡೆಯಲ್ಲಿ ಭಾಗವಹಿಸುವ ಹವ್ಯಾಸ ಬೆಳಿಸಿಕೊಳ್ಳಬೇಕು ಎಂದರು.

    ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ಕ್ರೀಡೆ ಶಿಸ್ತು, ಸಂಯಮ, ಸಾಂಕ ಜೀವನ ಮತ್ತು ತಾಳ್ಮೆ ಕಲಿಸುತ್ತದೆ ಎಂದರು.
    ಸಂಸ್ಥೆ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ನಿರ್ದೇಶಕ ಎ.ವಿ.ಹೊಸಕೋಟಿ, ಅನಿಲ ಸತರಡ್ಡಿ, ಡಾ.ವೈ.ಬಿ.ಮಳವಾಡ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರವಿ ಗಡದನ್ನವರ, ಪ್ರಾಚಾರ್ಯ ಡಾ.ಎಂ.ಕೆ.ಕಂಕಣವಾಡಿ, ಪತ್ರಕರ್ತ ಕಷ್ಣಪ್ಪ ಗಿರೆಣ್ಣವರ, ಉಪನ್ಯಾಸಕ ಭೀಮಶಿ ಬಡಗಣ್ಣವರ, ಪ್ರೊ.ಎ.ಎಸ್.ಮಿಸಿನಾಯಿಕ, ಡಾ.ಮಲ್ಲಪ್ಪ ಕಂಕಣವಾಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts