More

    ಆರೋಗ್ಯವಾಗಿರಲು ಸ್ವಚ್ಛತೆಗೆ ಆದ್ಯತೆ ನೀಡಿ

    ಹನುಮಸಾಗರ: ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯವಾಗಿದ್ದರೆ ಓದಿನ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ವೈದ್ಯಾಥಿಕಾರಿ ಆರ್. ಬಿ. ಹವಳದ ಹೇಳಿದರು.


    ಸಮೀಪದ ಮಿಯ್ಯಪೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಮಕ್ಕಳಲ್ಲಿ ಕಂಡುಬರುವಂತಹ ಕಿವಿ ಸೋರುವುದು, ಮೂಗಿನಲ್ಲಿ ರಕ್ತ ಬರುವುದು, ಗಂಟಲು ನೋವು, ಕಣ್ಣಿನ ಸಮಸ್ಯೆ, ಚರ್ಮ ಹಾಗೂ ಹೃದಯ ತೊಂದರೆ ಗುರುತಿಸಿ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ಪ್ರತಿಯೊಬ್ಬರೂ ಆರೋಗ್ಯವಾಗಿರಲು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.


    ಶಿಕ್ಷಕರಾದ ಸದಾಶಿವಯ್ಯ ಹಿರೇಮಠ, ನಾಗನಗೌಡ ಪೋಲಿಸ್ ಪಾಟೀಲ್, ಶಾಂತಾಬಾಯಿ ಪಟ್ಟಣಶೆಟ್ಟಿ, ಪರಶುರಾಮ ನಾಗಣ್ಣನವರ, ಅಕ್ಕಮಹಾದೇವಿ ಹಿರೇಮಠ, ಜಯಶ್ರೀ ಮದ್ಲೂರ, ಲಕ್ಷ್ಮೀ ವಾಲಿಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts