More

    ಹೈಸ್ಕೂಲ್​ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಧರ್ಮಬೋಧಕ ಅರೆಸ್ಟ್​..!

    ಚೆನ್ನೈ: ವಿದ್ಯಾರ್ಥಿನಿಯರ ಜತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಹಾಗೂ ತುಂಡುಡುಗೆ ಫೋಟೋಗಳಿಗಾಗಿ ದುಂಬಾಲು ಬಿದ್ದಿದ್ದ ಧರ್ಮಬೋಧಕ ಸಾಮ್ಯುಯೆಲ್​ ಜೈಸುಂದರ್​ನನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಸಾಮ್ಯುಯೆಲ್​ ಜೈಸುಂದರ್​ ಬೈಬಲ್​ ಪ್ರಚಾರ ಮಾಡುವ ಸ್ಕ್ರಿಪ್ಚರ್​ ಯೂನಿಯನ್​ ಹೆಸರಿನ ಕ್ರಿಶ್ಚಿಯನ್​ ಸಂಘಟನೆ ಧರ್ಮಬೋಧಕ. ಈಗಾಗಲೇ ಈತನನ್ನು ಸಂಸ್ಥೆ ಅಮಾನತು ಮಾಡಿದ್ದು, ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆಯೆ ಬಂಧಿಸಲಾಗಿದೆ.

    ಜೈಸುಂದರ್​ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ಸುಮಾರು 20ಕ್ಕೂ ಹೆಚ್ಚು ಸ್ಕ್ರೀನ್​ ಶಾಟ್​ಗಳನ್ನು ಅಕ್ಟೋಬರ್​ 6ರಂದು ಟ್ವಿಟರ್​ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿತ್ತು. ವೈರಲ್​ ಕೂಡ ಆಗಿತ್ತು. ಇದರ ಬೆನ್ನಲ್ಲೇ ಆರೋಪಿ ಧರ್ಮಬೋಧಕ ಸಾಮ್ಯುವೆಲ್​ನನ್ನು ಸಂಸ್ಥೆ ಅಮಾನತು ಮಾಡಿತ್ತು. ಬಳಿಕ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ ಕೊಯಮತ್ತೂರಿನ ಪೂರ್ವ ಮಹಿಳಾ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಪೊಕ್ಸೊ ವಿಶೇಷ ನ್ಯಾಯಾಲಯದ ಎದುರು ಪ್ರಸ್ತುತಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

    ಇದನ್ನೂ ಓದಿ: ಅಶ್ಲೀಲ ಫೋಟೋಗಾಗಿ ವಿದ್ಯಾರ್ಥಿನಿಯರ ದುಂಬಾಲು ಬಿದ್ದಿದ್ದ ಧರ್ಮಬೋಧಕನಿಗೆ ಎದುರಾಯ್ತು ಕಂಟಕ!

    ಘಟನೆ ಹಿನ್ನೆಲೆ ಏನು?
    ಸಾಮ್ಯುಯೆಲ್​ ಜೈಸುಂದರ್​ರನ್ನು ಸ್ಕ್ರಿಪ್ಚರ್​ ಯೂನಿಯನ್​ ತನ್ನ ಇಂಗ್ಲಿಷ್​ ಪಬ್ಲಿಕೇಶನ್​ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. ಅ. 6ರಂದು @joelgiftson17 ಹೆಸರಿನ ಟ್ವಿಟರ್​ ಬಳಕೆದಾರ ಅನೇಕ ಸ್ಕ್ರೀನ್​ಶಾಟ್​ಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಸಾಮ್ಯುಯೆಲ್, ತುಂಡುಡುಗೆ ಧರಿಸಿರುವ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದು 10 ರಿಂದ 15 ವರ್ಷ ನಡುವಿನ ವಿದ್ಯಾರ್ಥಿನಿಯರಿಗೆ ಕೇಳಿರುವ ಆರೋಪ ಎದುರಾಗಿದೆ. ಅಲ್ಲದೆ, ಒಂದು ನಿರ್ಧಿಷ್ಟ ಸ್ಕ್ರೀನ್​ಶಾಟ್​ನಲ್ಲಿ ಹುಡುಗರಿಗೆ ಯಾವಾಗಲಾದರೂ ಕಿಸ್​ ಮಾಡಿದ್ದೀಯ? ಎಂದು ಪ್ರಶ್ನಿಸಿದ್ದಲ್ಲದೆ, ಆಕೆಯ ರಿಲೇಷನ್​ಶಿಪ್​ ಬಗ್ಗೆ ಕೇಳಿದ್ದಾರೆ. ​

    ಸಾಮ್ಯುಯೆಲ್ ಮತ್ತವರ ತಂಡ ನಿಯಮಿತವಾಗಿ ತಮಿಳುನಾಡಿನಾದ್ಯಂತ ನಡೆಯುವ ಕ್ರಿಶ್ಚಿಯನ್​ ಮಿಶನರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದರು. ದಶಕಗಳಿಂದ ವಕೇಶನಲ್​ ಬೈಬಲ್​ ಸ್ಕೂಲ್​ (ವಿಬಿಎಲ್​) ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ಅಲ್ಲದೆ, ಬೈಬಲ್​ ಅಧ್ಯಯನಕ್ಕಾಗಿ ಬೇಸಿಗೆ ಶಿಬಿರಗಳನ್ನು ಸಹ ಆಯೋಜಿಸುತ್ತಿದ್ದರು. ಕೆಲ ಯುವತಿಯರು ಸಹ ತಾವು ಅಪ್ರಾಪ್ತೆಯರಾಗಿದ್ದಾಗ ಸ್ಯಾಮೆಯೆಲ್​ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದಾರೆ.

    ಈ ಬಗ್ಗೆ ಓರ್ವ ಯುವತಿ ಮಾತನಾಡಿದ್ದು, 2016ರಲ್ಲಿ ಚೆನ್ನೈ ಶಾಲೆಯಲ್ಲಿ ಓದುತ್ತಿದ್ದಾಗ (ಆವಾಗ 15 ವರ್ಷ ವಯಸ್ಸು) ಸಾಮ್ಯುಯೆಲ್​ ಮಸೇಜ್​ ಮಾಡಿ ಒಂಟಿಯಾಗಿ ಭೇಟಿಯಾಗುವಂತೆ ಕೇಳಿದ್ದನಂತೆ. ಯೂನಿಫಾರ್ಮ್​ನಲ್ಲಿ ನೀನು ತುಂಬಾ ಚೆನ್ನಾಗಿ ಕಾಣುತ್ತೀಯ ಎಂದಿದ್ದರು. ಸಾಮನ್ಯ ಉಡುಪಿನಲ್ಲಿರುವ ನನ್ನ ಫೋಟೋಗಳನ್ನು ಕೇಳುತ್ತಿದ್ದರು. ಸ್ವಲ್ಪ ದಿನಗಳ ಬಳಿಕ ಚೆಲ್ಲಮ್​ ಮತ್ತು ತಂಗಮ್​ ಎಂದು ಸಲುಗೆಯಿಂದ ಮಾತನಾಡುತ್ತಿದ್ದರು. ಆರಂಭದಲ್ಲಿ ಎಲ್ಲವನ್ನು ನಿರ್ಲಕ್ಷಿಸಿದ್ದೆ. ಆದರೆ, ಬೇಸಿಗೆ ಶಿಬರಕ್ಕೆ ಸೇರುವಂತೆ ಬಲವಂತ ಮಾಡಿದರು. ನಾನು ನಿರಾಕರಿಸಿದೆ. ಬಳಿಕ ತಮ್ಮ ಮನೆಯ ವಿಳಾಸವನ್ನು ಕಳುಹಿಸಿ ವೈಯಕ್ತಿಕವಾಗಿ ಭೇಟಿ ಮಾಡಲು ಹೇಳಿದರು. ನನ್ನನ್ನು ತಬ್ಬಿಕೊಳ್ಳಲು ಹಾಗೂ ಇನ್ನಿತರ ಅನುಚಿತ ವಿಚಾರಗಳನ್ನು ಮಾಡಲು ಬಯಸಿರುವುದಾಗಿ ನೇರವಾಗಿ ಹೇಳಿದರು ಎಂದು ಯುವತಿ ಬಹಿರಂಗ ಪಡಿಸಿದ್ದಾಳೆ.

    ಇದನ್ನೂ ಓದಿ: ಜೀನ್ಸ್​ ಬ್ಯಾನ್​ ಮಾಡಿದ್ದಕ್ಕೆ ಲುಂಗಿ ಧರಿಸಿ ಬಂದ್ರಾ ಈ ಯುವತಿಯರು?

    ಹೀಗೆ ಅನೇಕ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾರೆ. ಕೆಲವರಿಗೆ ಫೇಸ್​ಬುಕ್​ ಮೂಲಕ ಬಟ್ಟೆಗಳ ಬಗ್ಗೆ ಕಮೆಂಟ ಮಾಡಿದ್ದಾರೆ. ಅಶ್ಲೀಲ ಸೆಲ್ಫಿ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದರು ಎಂದು ಸಾಕಷ್ಟು ಹೆಣ್ಣು ಮಕ್ಕಳು ಸ್ಯಾಮೆಯೆಲ್​ ವಿರುದ್ಧ ಆರೋಪಿಸಿದ್ದು, ಎಲ್ಲರ ಸ್ಕ್ರೀನ್​ಶಾಟ್​ಗಳನ್ನು ಸಂಗ್ರಹಿಸಿ, ಟ್ವಿಟರ್​ ಬಳಕೆದಾರರೊಬ್ಬರು ಪೋಸ್ಟ್​ ಮಾಡಿ ಧರ್ಮಬೋಧಕನ ಕರಾಳ ಮುಖವನ್ನು ಅನಾವರಣ ಮಾಡಿದ್ದಾರೆ. ಇದಾದ ಬಳಿಕ ಆತನನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ, ಚೆನ್ನೈ ಪೊಲೀಸ್​ ಠಾಣೆಯಲ್ಲಿ ಈ ಮೊದಲು ಪ್ರಕರಣವೂ ದಾಖಲಾಗಿತ್ತು. (ಏಜೆನ್ಸೀಸ್​)

    ಧರ್ಮಬೋಧಕನಿಗೆ ವಿದ್ಯಾರ್ಥಿನಿಯರೇ ಟಾರ್ಗೆಟ್​: ವೈರಲ್​ ಸ್ಕ್ರೀನ್​ಶಾಟ್​ನಲ್ಲಿವೆ ಕಾಮಪ್ರಚೋದಕ ಸಂದೇಶಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts