More

    ಸ್ಪೋಟಕ ತುಂಬಿದ ಮಾಂಸಾಹಾರ ತಿಂದ ನರಿಯ ಬಾಯಿ ಛಿದ್ರ: 12 ಮಂದಿಯ ಬಂಧನ

    ಚೆನ್ನೈ: ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಭೀಕರ ಹತ್ಯೆಯ ಬೆನ್ನಲ್ಲೇ ಆಹಾರ ಪದಾರ್ಥಗಳಲ್ಲಿ ಸ್ಟೋಟಕಗಳನ್ನಿಟ್ಟು ಪ್ರಾಣಿಗಳನ್ನು ಕೊಲ್ಲುವ ಅನೇಕ ಘಟನೆಗಳು ಬೆಳಕಿಗೆ ಬರುತ್ತಿವೆ. ದೇಶಾದ್ಯಂತ ಆಕ್ರೋಶ ವ್ಯಕ್ತವಾದರೂ ಸಹ ಕಿಡಿಗೇಡಿಗಳು ಮಾತ್ರ ಬುದ್ಧಿ ಕಲಿಯುವ ಲಕ್ಷಣಗಳು ಕಾಣುತ್ತಿಲ್ಲ.

    ಇದೀಗ ಬೆಳಕಿಗೆ ಬಂದಿರುವ ಆತಂಕಕಾರಿ ಘಟನೆಯೊಂದರಲ್ಲಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಮಾಂಸಾಹಾರದಲ್ಲಿ ಸ್ಪೋಟಕ ತುಂಬಿ ನರಿಯೊಂದನ್ನು ಅಮಾನುಷವಾಗಿ ಕೊಲ್ಲಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಿಕುವರ್​ ಎಂಬ ಬುಡಕಟ್ಟು ಜನಾಂಗದ 12 ಮಂದಿಯನ್ನು ಪೊಲೀಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಘಟನೆ ತಿರುಚನಾಪಳ್ಳಿಯ ಜೀಯಪುರಂನಲ್ಲಿ ನಡೆದಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಅನಾರೋಗ್ಯಪೀಡಿತ ಆನೆ ಪತ್ತೆ

    ಬೇಟೆಯಾಡುವುದನ್ನೇ ನಾರಿಕುವರ್ ಬುಡಕಟ್ಟು​ ಸಮುದಾಯ ಕುಲಕಸುಬಾಗಿ ಮಾಡಿಕೊಂಡಿದೆ. ಸ್ಪೋಟಕ ತುಂಬಿದ ಮಾಂಸಾಹಾರವನ್ನು ತಿಂದು ಸ್ಪೋಟಗೊಂಡು ನರಿ ಪ್ರಾಣ ಬಿಟ್ಟಿದೆ. ಸ್ಪೋಟದ ರಭಸಕ್ಕೆ ನರಿಯ ದವಡೆಗಳು ಛಿದ್ರ ಛಿದ್ರವಾಗಿದೆ.

    ಮಾಂಸ, ಹಲ್ಲುಗಳು ಮತ್ತು ಉಗುರುಗಳಿಗಾಗಿ ಆಗಾಗ ನರಿಗಳನ್ನು ಕೊಲ್ಲುವುದು ತಿರುಚನಾಪಳ್ಳಿ ಸೇರಿದಂತೆ ಹಲವೆಡೆ ಸಾಮಾನ್ಯವಾಗಿದೆ. ನರಿಯ ಮೃತದೇಹವನ್ನಿಟ್ಟುಕೊಂಡು ಅಂಗಡಿಯೊಂದರಲ್ಲಿ ಟೀ ಸವಿಯುತ್ತಿದ್ದ ವೇಳೆ ಅನುಮಾನಗೊಂಡು ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪತಿ-ಪತ್ನಿ ಇಬ್ಬರೂ ಆತ್ಮಹತ್ಯೆಗೆ ಶರಣು; ಮಕ್ಕಳಿಬ್ಬರು ಅನಾಥ

    ಆರೋಪಿಗಳನ್ನು ರಾಮರಾಜ್​ (21), ಸರವಣನ್​ (25), ಯೇಸುದಾಸ್​ (34), ಸರತ್​ ಕುಮಾರ್​ (28), ದೇವದಾಸ್​ (41), ಪಾಂಡಿಯನ್​ (31), ವಿಜಯ್​ ಕುಮಾರ್​ (38), ಸತ್ಯಮೂರ್ತಿ (36), ಸರತ್​ ಕುಮಾರ್​ (26), ರಾಜಮನಿಕಂ (70) ಮತ್ತು ಪಟಂಪಿಲೈ (78) ಎಂದು ಗುರುತಿಸಲಾಗಿದೆ. (ಏಜೆನ್ಸೀಸ್​)

    ಆನೆಗೆ ಸ್ಫೋಟಕ ತುಂಬಿದ್ದ ಅನಾನಸ್​ ತಿನ್ನಿಸಿದವರ ರಾಜ್ಯದಲ್ಲಿ ಮತ್ತೊಂದು ವಿಕೃತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts