More

    ಟಿಶ್ಯೂ ಪೇಪರ್ ತಯಾರಿಕೆಗೆ 24 ಲಕ್ಷ ಮರ ಹನನ

    ಮೂಡಿಗೆರೆ: ದೇಶದಲ್ಲಿ ಟಿಶ್ಯೂ ಪೇಪರ್ ತಯಾರಿಕೆಗೆ ವಾರ್ಷಿಕ 24 ಲಕ್ಷ ಮರ ಕತ್ತರಿಸಲಾಗುತ್ತದೆ. ಜನರ ಇತರ ಉಪಯೋಗಕ್ಕೆ ಅರಣ್ಯವನ್ನೇ ನಾಶಪಡಿಸಿ ಜೀವನ ನಡೆಸುತ್ತಿರುವುದರಿಂದ ಮಳೆ ಕೊರತೆಯಿಂದಾಗಿ ಬರಗಾಲ ಸೃಷ್ಟಿಯಾಗುತ್ತಿದೆ ಎಂದು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸದಸ್ಯ ಚಿಪ್ರಗುತ್ತಿ ಪ್ರಶಾಂತ್ ಹೇಳಿದರು.

    ಜಿ.ಹೊಸಳ್ಳಿ ದಿಣ್ಣೆಕೆರೆ ಎಂಬಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೆರೆ ಅಭಿವೃದ್ಧಿ ಸಮಿತಿಯಿಂದ ಅಭಿವೃದ್ಧಿಪಡಿಸಿದ ಗ್ರಾಮದ ಕೆರೆಯನ್ನು ಗ್ರಾಪಂಗೆ ಹಸ್ತಾಂತರಿಸಿ ಮಾತನಾಡಿ, ಮಲೆನಾಡು ಭಾಗದಲ್ಲಿ ವರ್ಷ ಕಳೆದಂತೆ ಅಂತರ್ಜಲ ಕ್ಷೀಣಿಸುತ್ತಿದೆ. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪ್ರತಿ ಕಾಫಿ ತೋಟದಲ್ಲಿ ಮೂರ್ನಾಲ್ಕು ಕೆರೆ ನಿರ್ಮಿಸಬೇಕು. ಮನೆಯಂಗಳದಲ್ಲಿ ಚಿಕ್ಕ ಕೆರೆ ನಿರ್ಮಿಸಿ ಸುತ್ತ ಹೂವಿನ ಗಿಡ ನೆಟ್ಟಲ್ಲಿ ಜನರಿಗೆ ಕುಡಿಯುವ ನೀರು ಸಿಗುವ ಜತೆಗೆ ಅಂತರ್ಜಲ ಹಾಗೂ ಜನರ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಕಾಫಿ ತೋಟವಿರುವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಅರಣ್ಯಕ್ಕೆ ಬರವಿಲ್ಲ. ಕಾ ಬೆಳೆಗಾರರು ಮತ್ತು ರೈತರಿಂದ ಅರಣ್ಯೀಕರಣ ನಡೆಯುತ್ತಿದೆ. ಆದರೂ ಬರಗಾಲ ಬಂದೆರಗಿರುವುದರಿಂದ ಜನ, ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡಬೇಕಾಗಿದೆ. ನದಿ, ಕೆರೆ, ಹಳ್ಳ, ಬಾವಿಗಳು ನೀರಿಲ್ಲದೆ ಬತ್ತಿವೆ. ಕೂಲಿ ಕಾರ್ಮಿಕರು ಸಂಜೆ ಕಿಲೋಮೀಟರ್‌ಗಟ್ಟಲೆ ದೂರ ನೀರು ಹೊತ್ತು ತರಬೇಕಾಗಿದೆ. ಪ್ರತಿ ಗ್ರಾಮದ ಕೆರೆಯನ್ನು ಅಭಿವೃದ್ಧಿಗೊಳಿಸಿ ಮಳೆ ನೀರು ಸಂಗ್ರಹಿಸಿದಲ್ಲಿ ಅಂತರ್ಜಲ ವೃದ್ಧಿಸಿ ಕುಡಿಯುವ ನೀರಿಗೆ ತೊಂದರೆ ಎದುರಾಗಲಾರದು ಎಂದು ಅಭಿಪ್ರಾಯಪಟ್ಟರು.ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್ ಮಾತನಾಡಿ, ತಾಲೂಕಿನ ಸರ್ಕಾರಿ ಕೆರೆಗಳ ಜಾಗವನ್ನು ಸ್ಥಳೀಯ ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ಒಂದೊಂದು ಕೆರೆ 10 ರಿಂದ 50 ಎಕರೆ ಜಾಗದಲ್ಲಿದೆ. ಜಾಗ ಒತ್ತುವರಿಯಾಗಿರುವುದರಿಂದ ಒಂದೆರಡು ಎಕರೆ ಮಾತ್ರ ಉಳಿದಿದೆ. ಕೆರೆ ಜಾಗ ಒತ್ತುವರಿ ಖುಲ್ಲಾಗೊಳಿಸಬೇಕು ಎಂದು ಹೇಳಿದರು. ಗೋಣಿಬೀಡು ಗ್ರಾಪಂ ವ್ಯಾಪ್ತಿಯಲ್ಲಿ 9 ಸರ್ಕಾರಿ ಕೆರೆ ಒತ್ತುವರಿಯಾಗಿದ್ದು ಅದನ್ನು ಖುಲ್ಲಾಗೊಳಿಸಲಾಗುವುದು ಎಂದು ಸರ್ಕಾರದಿಂದ ಗ್ರಾಪಂ ಕಚೇರಿಗೆ ಪತ್ರ ತಲುಪಿ ವರ್ಷಗಳೇ ಕಳೆದರೂ ತಾಲೂಕಿನ ಅಧಿಕಾರಿಗಳು ಖುಲ್ಲಾಗೊಳಿಸಿಲ್ಲ. ಕೆರೆಗಳು ಒತ್ತುವರಿಯಾಗಿರುವುದರಿಂದ ಅವುಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೆರೆಗಳಲ್ಲಿ ಹೂಳು ತುಂಬಿ ನೀರಿಲ್ಲದೆ ಬತ್ತಿ ಕುಡಿಯುವ ನೀರಿಗೆ ಸಂಚಕಾರ ಉಂಟಾಗಿದೆ. ಅಂತರ್ಜಲಕ್ಕೂ ಸಂಚಕಾರ ಬಂದಿದೆ. ಕೆರೆ ಒತ್ತುವರಿ ಖುಲ್ಲಾಗೊಳಿಸಲು ಆಯಾ ಗ್ರಾಮಸ್ಥರು ಒಟ್ಟಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದಾಗ ಮಾತ್ರ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಾರೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿತ್ರದುರ್ಗ ವಿಭಾಗೀಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಿರಣ್, ವಕೀಲ ಆದರ್ಶ, ತಾಲೂಕು ಯೋಜನಾಧಿಕಾರಿ ಪಿ.ಶಿವಾನಂದ, ದೀಪಕ್, ಗ್ರಾಪಂ ಸದಸ್ಯರಾದ ಚಂದ್ರಶೇಖರ, ಸುಧಾಮಣಿ, ಸುಪ್ರೀತಾ, ಪಿಡಿಒ ಸಿಂಚನಾ, ಮುಖಂಡರಾದ ಶಾಂತಪ್ಪ, ಪ್ರವೀಣ್ ಪೂಜಾರಿ, ಮಹೇಶ್ ಸಾಲುಮರ, ಜಗತ್, ರಂಜಿತ್, ದೀಪಕ್, ಹರೀಶ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts