More

    ತಿರುಪತಿಯಲ್ಲಿ ಸರಸ್ವತಿ ಮಹಾಯಾಗ, ಟಿಟಿಡಿ ಸಂಸ್ಥೆ ವಿದ್ಯಾರ್ಥಿಗಳು ಭಾಗಿ

    ತಿರುಮಲ: ತಿರುಪತಿಯ ದೇಗುಲಗಳಲ್ಲಿ ಗುರುವಾರ ಸರಸ್ವತಿ ಮಹಾಮಂತ್ರ ಪ್ರತಿಧ್ವನಿಸಿತು. ಹಿಂದು ಧರ್ಮ ಪ್ರಚಾರ ಪರಿಷತ್ ವಿಭಾಗ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಗೀತಾಜಯಂತಿ ಮೈದಾನದಲ್ಲಿ ಆಯೋಜಿಸಿದ್ದ ಮಹಾಸರಸ್ವತಿಯಾಗದಲ್ಲಿ ಸಾವಿರಾರು ಮಂದಿ ಏಕಕಾಲದಲ್ಲಿ ಪಠಿಸಿದ ಸ್ವರಸ್ವತಿ ಮಹಾಮಂತ್ರ ದೇಗುಲದ ಸುತ್ತಮುತ್ತಲು ಪ್ರತಿಧ್ವನಿಸಿತು.

    ಸರಸ್ವತಿ ದೇವಿ ಆರಾಧನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಪರೀಕ್ಷೆ ಹಾಗೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಸರಸ್ವತಿ ಮಂತ್ರಪಠಣ ಸಹಕಾರಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಪೂರಕವಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ಕುಮಾರ್ ಸಿಂಗಾಲ್ ಹೇಳಿದರು.

    ಟಿಟಿಡಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಗಳು ಶಿಕ್ಷಣ ಮುಗಿದ ಬಳಿಕ ಉದ್ಯೋಗಾವಕಾಶಕ್ಕಾಗಿ ಟಿಟಿಡಿ ಎಪಿ ಕೌಶಲ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಕೌಶಲ ಅಭಿವೃದ್ಧಿ ತರಬೇತಿ ಪ್ರಾರಂಭಿಸಿದೆ ಎಂದು ಹೇಳಿದರು. ಉತ್ತಮ ಆಚಾರ ವಿಚಾರಗಳ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಭಕ್ತಿ, ಸಮರ್ಪಣೆ ಮತ್ತು ಶಿಸ್ತಿನಿಂದ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಹಿಂದೂ ಸನಾತನ ಧರ್ಮದ ಬಗೆಗಿನ ಒಲವು ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಲಿದೆ. ಈ ಮಹಾಯಾಗ ನಿಮ್ಮೆಲ್ಲ ಸಾಧನೆಗಳಿಗೆ ಪ್ರೇರಕವಾಗಲಿದೆ ಪ್ರತಿನಿತ್ಯ ಸರಸ್ವತಿ ನಾಮಸ್ಮರಣೆಯೊಂದಿಗೆ ನಿಮ್ಮ ದೈನಂದಿನ ಚಟುವಟಿಕೆ ಆರಂಭಗೊಳ್ಳಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಸರಸ್ವತಿ ದೇವಿಯ ಆಶೀರ್ವಾದದಿಂದ ಮಾನಸಿಕ ಸಾಮರ್ಥ್ಯ, ಶಾಂತಿ ಜತೆಗೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ತಿರುಪತಿ ಶಾಸಕ ಭೂಮಾನಾ ಕರುಣಾಕರ್ ರೆಡ್ಡಿ ಹೇಳಿದರು.

    ಶಿಕ್ಷಣ ಯಾವುದೇ ಶಕ್ತಿಯಿಂದಲೂ ಲೂಟಿ ಮಾಡಲಾಗದ ಏಕೈಕ ಆಸ್ತಿಯಾಗಿದೆ. ಶಿಕ್ಷಣ ಯಾವುದೇ ಅಂತ್ಯವಿಲ್ಲದ ಸಾಗರದಂತಿದೆ. ಇದು ನೈತಿಕ ಮೌಲ್ಯಗಳನ್ನು ಹೆಚ್ಚಿಸುತ್ತದೆ ಮತ್ತು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿಸುವಲ್ಲಿ ವೇದಿಕೆ ಕಲ್ಪಿಸುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts