More

    ಉಗ್ರಗಾಮಿ ಸಂಘಟನೆಯಲ್ಲಿ ತೀರ್ಥಹಳ್ಳಿ ಯುವಕ: ಪಾಲಕರಿಗೆ ಬರಸಿಡಿಲು

    ಶಿವಮೊಗ್ಗ/ತೀರ್ಥಹಳ್ಳಿ: ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯನಾಗಿರುವ ಇಲ್ಲಿನ ಯುವಕ ಅಬ್ದುಲ್ ಮತೀನ್ ಅಹ್ಮದ್ ತಾಹಾನ ಬದುಕಿನ ವಿವರಗಳು ಈಗ ಎಲ್ಲರಲ್ಲಿ ಕುತೂಹಲ ಕೆರಳಿಸುತ್ತಿವೆ.

    ಐಸಿಸ್ ತೀವ್ರಗಾಮಿ ಸಂಘಟನೆ ಅಲ್ ಹಿಂದ್ ಮಾಡ್ಯೂಲ್‌ನ ಬೆಂಗಳೂರು ವಿಭಾಗದ ಮೆಹಬೂಬ್ ಪಾಷಾನ ಸಹವರ್ತಿಯಾಗಿರುವ ಅಬ್ದುಲ್ ಮತೀನ್ ತೀವ್ರಗಾಮಿಯಾಗಿದ್ದಾನೆ ಎಂಬುದು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಯಿಂದ ಖಚಿತವಾಗುತ್ತಿದ್ದಂತೆ ತೀರ್ಥಹಳ್ಳಿ ಪಟ್ಟಣದಲ್ಲಿ ಸಂಚಲನ ಉಂಟಾಗಿದೆ.

    ಮತೀನ್ ಬಾಲ್ಯದಲ್ಲಿ ಸೌಮ್ಯ ಸ್ವಭಾವದವನಾಗಿದ್ದು, ಬೆಂಗಳೂರಿಗೆ ಇಂಜಿನಿಯರಿಂಗ್ ಪದವಿ ಅಭ್ಯಾಸಕ್ಕೆ ತೆರಳಿದ ನಂತರ ಬದಲಾವಣೆಯಾಗಿದ್ದಾನೆ. ಬೆಂಗಳೂರಿನಲ್ಲಿದ್ದಾಗಲೇ ಮೂಲಭೂತವಾದಿಗಳ ಸಂಪರ್ಕಕ್ಕೆ ಬಂದಿರಬಹುದು ಎಂಬುದು ಆತನ ಪಾಲಕರ ದೃಢವಾದ ನಂಬಿಕೆ.

    ಆತನ ತಂದೆ 26 ವರ್ಷ ಭಾರತೀಯ ಸೇನೆಯಲ್ಲಿ ತಾಂತ್ರಿಕ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ತಮ್ಮ ಮಗ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

    ಇದನ್ನೂ ಓದಿ   ರೈತರು, ಕಾರ್ಮಿಕರಿಗೆ ಕೇಂದ್ರದಿಂದ ಎರಡನೇ ದಿನದ ಕೊಡುಗೆ: ಯಡಿಯೂರಪ್ಪ ಏನಂತಾರೆ?

    2020ರ ಜನವರಿ ಮೊದಲ ವಾರ ಊರಿಗೆ ಬಂದುಹೋದ ನಂತರದಲ್ಲಿ ಆತನ ಸುಳಿವೇ ಸಿಗುತ್ತಿಲ್ಲ. ಸ್ವಂತ ಸೂರು, ಬೇರೆ ಆದಾಯವಿಲ್ಲದೆ ಕೇವಲ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿರುವ ನಮ್ಮ ಕುಟುಂಬಕ್ಕೆ ಮಗ ಆಧಾರ ಆಗಬಲ್ಲನೆಂದು ಭಾವಿಸಿದ್ದೆವು. ಆದರೆ ಆತ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾನೆಂದು ಊಹಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಮತೀನ್ ತಂದೆ-ತಾಯಿ ದುಃಖತಪ್ತರಾಗಿ ‘ವಿಜಯವಾಣಿ’ಗೆ ತಿಳಿಸಿದರು.

    ಬೆಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿಗೆ ಸೇರಿದ್ದ. ಆದರೆ ಈ ಸಂಘಟನೆಯ ಸಂಪರ್ಕಕ್ಕೆ ಹೋದ ನಂತರ ಅರ್ಧದಲ್ಲೇ ಓದಿಗೆ ತಿಲಾಂಜಲಿ ಹೇಳಿದ್ದಾನೆ. ಎಲ್‌ಕೆಜಿಯಿಂದ 4ನೇ ತರಗತಿವರೆಗೆ ತೀರ್ಥಹಳ್ಳಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ನಂತರದಲ್ಲಿ 7ನೇ ತರಗತಿವರೆಗೆ ಬೆಂಗಳೂರಿನ ಆರ್ಮಿ ಶಾಲೆಯೊಂದರಲ್ಲಿ, 8ರಿಂದ 10ರವರೆಗೆ ತೀರ್ಥಹಳ್ಳಿ ಖಾಸಗಿ ಪ್ರೌಢಶಾಲೆ, ಪಿಯು ತರಗತಿಯನ್ನು ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದಾನೆ.

    ಮತೀನ್ ತೀವ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ಕೆಲ ತಿಂಗಳ ಹಿಂದೆ ಎನ್‌ಐಎ ಅಧಿಕಾರಿಗಳು ಪಟ್ಟಣದ ಮೀನು ಮಾರ್ಕೆಟ್ ಬಳಿ ಇರುವ ಮನೆಗೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದರು. ಪಟ್ಟಣದ ಯುವಕನೊಬ್ಬ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಥಮವಾಗಿ ‘ವಿಜಯವಾಣಿ’ ವರದಿ ಮಾಡಿತ್ತು.

    ನಾಳೆ ಡಿಕೆಶಿ ಜನ್ಮದಿನ: ಕರೊನಾ ನಿಯಂತ್ರಣಕ್ಕಾಗಿ ಕಿಗ್ಗಾದಲ್ಲಿ ಪೂಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts