More

    ಕುಳ್ಳ ಅಂತ ಹುಡುಗಿಯರು ಹತ್ತಿರ ಬರಲ್ಲ; ಎತ್ತರ ಹೆಚ್ಚಿಸಿಕೊಳ್ಳಲು ರೂ. 66 ಲಕ್ಷ ರೂ. ವ್ಯಯಿಸಿದ!

    ನವದೆಹಲಿ: ಎತ್ತರ ಕಡಿಮೆ ಇರುವುದರಿಂದ ಜೀವನದಲ್ಲಿ ನಿರಂತರ ನಿರಾಕರಣೆಗಳನ್ನು ಎದುರಿಸುತ್ತಿರುವ ಜನರು ಸಾಮಾನ್ಯವಾಗಿ ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ಪರಿಸ್ಥಿತಿಗಳು ಅವರನ್ನು ಸ್ನೇಹಿತರು ಮತ್ತು ಕುಟುಂಬದಿಂದ ಪ್ರತ್ಯೇಕಿಸಿ, ಅವರ ಜೀವನವನ್ನು ಶೋಚನೀಯವಾಗಿಸುತ್ತದೆ. ಆದರೆ, 27ರ ಹರೆಯದ ಯುವಕನೊಬ್ಬ ಜಗತ್ತೇ ಬೆರಗಾಗುವಂತಹ ಕೆಲಸ ಮಾಡಿದ್ದಾನೆ.

    ಜಾರ್ಜಿಯಾದ ನೌಕಾಪಡೆಯಲ್ಲಿರುವ ಡಿನ್ಝೆಲ್​ ಸೈಗರ್ಸ್​ಗೆ 27 ವರ್ಷ. ಕುಳ್ಳನೆಂಬ ಕಾರಣಕ್ಕೆ ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟ ನಂತರ ಬೇಸತ್ತ ಜಾರ್ಜಿಯಾದ ವ್ಯಕ್ತಿ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

     ಇದನ್ನೂ ಓದಿ:  ಒಂದು ಕಾಲದ ಪ್ರಸಿದ್ಧ ಲಾವಣಿ ಕಲಾವಿದೆ ಇಂದು ಭಿಕ್ಷುಕಿ!

    ‘ಮೊದಲು 5.5 ಅಡಿ ಎತ್ತರ ಇದ್ದನು. ಈತ ಶಸ್ತ್ರಚಿಕಿತ್ಸೆ ನಂತರ 6 ಅಡಿಯಾಗಿದ್ದಾನೆ. ಇದಕ್ಕಾಗಿ ಸುಮಾರು ರೂ. 66 ಲಕ್ಷ ಹಣವನ್ನು ಖರ್ಚು ಮಾಡಿದ್ದಾನೆ. ಎರಡೂ ಕಾಲುಗಳ ಮೂಳೆಯನ್ನು ಅರ್ಧದಷ್ಟು ಕತ್ತರಿಸಿ ರಾಡ್​ ಸೇರಿಸಲಾಗಿದೆ.. 90 ದಿನಗಳಲ್ಲಿ ಹೊಸ ಮೂಳೆಯು ಬೆಳೆದ ನಂತರ ರಾಡ್​ ಅನ್ನು ತೆಗೆಯಲಾಗುತ್ತದೆ. ಒಟ್ಟಾರೆ ಈ ಚಿಕಿತ್ಸೆಯ ಅವಧಿ ಒಂದು ವರ್ಷ. ಆದರೂ ಮೊದಲಿನಂತೆ ಚಟುವಟಿಕೆಯಿಂದ ಇರಲು ಪೂರಕವಾದ ವ್ಯಾಯಾಮ ಮಾಡಬೇಕು. ಈ ಸಂಬಧಿಸಿದ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​​ ಆಗಿದೆ.

    View this post on Instagram

    A post shared by @mrbrokenbonez

    ಈ ಕುರಿತಾಗಿ ಮಾತನಾಡಿದ ಸೈಗರ್ಸ್, ನನಗಿಂತ ಎತ್ತರವಿರುವ ಹುಡುಗಿಯರಿಂದ ತಿರಸ್ಕಾರಕ್ಕೆ ಈಡಾಗಿದ್ದೇನೆ. ಕುಳ್ಳಗಿದ್ದ ನಾನು ಒಟ್ಟಾರೆ ಕೀಳರಿಮೆಯಿಂದ ಬಳಲಿದೆ.ನನ್ನ ಎತ್ತರವನ್ನು ಹೇಗಾದರೂ ಹೆಚ್ಚಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದೆ. Limb lengthening surgery (ಅಂಗವನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆ) ಶಸ್ತ್ರಚಿಕಿತ್ಸೆಯು ನನಗೆ ವರದಾನವಾಗಿದೆ​ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

    ಒಂದು ಕಾಲದ ಪ್ರಸಿದ್ಧ ಲಾವಣಿ ಕಲಾವಿದೆ ಇಂದು ಭಿಕ್ಷುಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts