More

    ಟಿಪ್ಪು ಪ್ಯಾಲೇಸ್ ಕೂಡ ದೇವಸ್ಥಾನದ ಜಾಗವೇ!; ಬೇಸಿಗೆ ಅರಮನೆ ಅತಿಕ್ರಮಣದ ನಿರ್ಮಾಣ..

    ಬೆಂಗಳೂರು: ಒಂದೆಡೆ ಕುತುಬ್ ಮಿನಾರನ್ನು ವಿಷ್ಣುಸ್ತಂಭ ಎಂದು ಮರುನಾಮಕರಣ ಮಾಡಬೇಕು ಎಂಬ ಕೂಗು. ಇನ್ನೊಂದೆಡೆ ಬಸವ ಕಲ್ಯಾಣದ ಅನುಭವ ಮಂಟಪವನ್ನೇ ಪೀರ್ ಪಾಷಾ ಬಂಗಲೆ ಆಗಿಸಲಾಗಿದೆ, ಅದನ್ನು ಮರುಸ್ಥಾಪಿಸಬೇಕು ಎಂಬ ಕೂಗು. ಈ ನಡುವೆ ಇದೀಗ ಮತ್ತೊಂದು ಕೂಗೆದ್ದಿದ್ದು, ಅದು ರಾಜ್ಯ ರಾಜಧಾನಿಯಲ್ಲೇ ಎಂಬುದು ವಿಶೇಷ.

    ಹೌದು.. ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ವಿರುದ್ಧ ಈಗ ಕೂಗೊಂದು ಎದ್ದಿದ್ದು, ಅದು ಅತಿಕ್ರಮದ ನಿರ್ಮಾಣ, ದೇವಸ್ಥಾನದ ಜಾಗ ಕಬಳಿಸಿ ಅದನ್ನು ನಿರ್ಮಾಣ ಮಾಡಲಾಗಿದೆ ಎಂಬ ತೀವ್ರ ಆಕ್ಷೇಪ ಕೂಡ ಕೇಳಿಬಂದಿದೆ.

    ಟಿಪ್ಪುವಿನ ಬೇಸಿಗೆ ಅರಮನೆ ಇರುವ ಜಾಗ ಕೋಟೆ ವೆಂಕಟರಮಣ ದೇವಸ್ಥಾನಕ್ಕೆ ಸೇರಿದ್ದು ಎಂದು ಹಿಂದು ಸಂಘಟನೆಗಳು ವಾದ ಮಂಡಿಸಿವೆ. ಕೂಡಲೇ ಆ ಜಾಗದ ಸರ್ವೇ ಮಾಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಕೂಡ ಸಲ್ಲಿಕೆಯಾಗಿದೆ.

    ದೇವಸ್ಥಾನದ ಒಟ್ಟು 264 ಎಕರೆ ಜಾಗ ಬೆಂಗಳೂರಿನಲ್ಲಿ ಒತ್ತುವರಿಯಾಗಿದೆ. ಅದರಲ್ಲಿ ಟಿಪ್ಪು ಪ್ಯಾಲೇಸ್ ಕೂಡ ಒಂದು. ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿಯ ವರದಿಯಲ್ಲಿಯೂ ಈ ಕುರಿತು ಉಲ್ಲೇಖವಿದೆ ಎನ್ನುತ್ತಾರೆ ಹಿಂದು ಜನಜಾಗೃತಿ ಸಮಿತಿಯ ಮೋಹನ್ ಗೌಡ.

    ಮತ್ತೆ ಅನುಭವ ಮಂಟಪವಾಗಲಿ ಪೀರ್​ಪಾಷಾ ಬಂಗಲೆ; ಅದಕ್ಕಾಗಿ ಜೂ. 12ರಂದು ಬಸವಕಲ್ಯಾಣ ಚಲೋ..

    ರಾತ್ರಿ ಪೂರ್ತಿ ಡಿಜೆ ಹಾಕಿ ಡ್ಯಾನ್ಸ್ ಮಾಡಿ, ನಾನಿದ್ದೇನೆ..; ಮುಸ್ಲಿಮರನ್ನು ಓಲೈಸಲು ಬಿಜೆಪಿ ಶಾಸಕರ ಅತಿರೇಕದ ಹೇಳಿಕೆಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts