More

    ಸಮಯ ಪ್ರಜ್ಞೆ ಜತೆಗೆ ಶಿಸ್ತು, ಸಂಯಮ ಅಗತ್ಯ

    ಕೊಪ್ಪಳ: ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಶ್ರದ್ಧೆ, ಭಕ್ತಿ, ಪ್ರಾಮಾಣಿಕತೆ ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ನಿರ್ವಹಣೆ ಮಾಡಬಹುದು ಎಂದು ಪದ್ಮಶ್ರೀ ಪುರಸ್ಕೃತೆ ಮಾತೆ ಮಂಜಮ್ಮ ಜೋಗತಿ ಹೇಳಿದರು.

    ಇದನ್ನೂ ಓದಿ:http://ಸಮಯ ಪ್ರಜ್ಞೆ ಜತೆಗೆ ಶಿಸ್ತು, ಸಂಯಮ ಅಗತ್ಯ

    ತಾಲೂಕಿನ ಚುಕ್ಕನಕಲ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಸಮಯವನ್ನು ಗೌರವಿಸುವವರ ಜೀವನ ಸುಂದರವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಜತೆಗೆ ಶಿಸ್ತು, ಶಾಂತಿ ಹಾಗೂ ಸಂಯಮ ಇರಬೇಕು. ಬಡತನದಲ್ಲಿ ಬೆಳೆದ ನನ್ನ ಜೀವನ ಇಂದು 15 ವಿಶ್ವ ವಿದ್ಯಾಲಯಗಳಿಗೆ ಪಠ್ಯವಾಗಿದೆ.

    ಕಲೆಯನ್ನೇ ನಂಬಿ ಜೀವನ ಸವೆಸಿದ್ದೇನೆ. ಅದೇ ಕಲೆ ಇಂದು ನನ್ನ ಕೈ ಹಿಡಿದು ನಡೆಸುತ್ತಿದೆ. ನಮ್ಮ ನಮ್ಮ ಕ್ಷೇತ್ರದಲ್ಲಿ ಕಷ್ಟಪಟ್ಟು ದುಡಿದರೆ ಸಾಧನೆ ಮಾಡಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts