More

    ಮೂರು ಬಾರಿ ಹಾವಿನಿಂದ ಕಚ್ಚಿಸಿಕೊಂಡರೂ 2 ಸಾವಿರ ಹಾವುಗಳನ್ನು ರಕ್ಷಿಸಿದ ಉರಗ ಪ್ರೇಮಿ ಸುರೇಂದ್ರ!

    ಆನೇಕಲ್​: ಹಾವು ಎಂದ ಕೂಡಲೇ ಭಯದಿಂದ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ಇಲ್ಲೊಬ್ಬ ಉರಗ ಪ್ರೇಮಿ ಹಾವುಗಳ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಸ್ನೇಕ್​ ಸುರೇಂದ್ರ ಎಂದೇ ಕರೆಯುವ ಈ ಯುವಕ ಈವರೆಗೆ 2 ಸಾವಿರ ಹಾವುಗಳ ರಕ್ಷಣೆ ಮಾಡಿದ್ದಾರೆ. ಯಾರೇ ಫೋನ್ ಮಾಡಿದ್ರು ಸಹ ಅಲ್ಲಿಗೆ ತೆರಳಿ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡುವಂತ ಕೆಲಸ ಮಾಡುತ್ತಿದ್ದಾರೆ‌. ಅಲ್ಲದೆ ಜನರಿಗೆ ಜಾಗೃತಿಯನ್ನ ಮೂಡಿಸುವಂತ ಕೆಲಸ ಮಾಡುತ್ತಿದ್ದು, ಹಾವನ್ನ ಸಾಯಿಸುವುದು ಹಾಗೂ ಹಲ್ಲೆ ಮಾಡುವುದು ತಪ್ಪು ಎನ್ನುವಂತಹ ಜಾಗೃತಿ ಮೂಡಿಸುತ್ತ ಸಾವಿರಾರು ಹಾವುಗಳನ್ನ ರಕ್ಷಿಸುತ್ತಿದ್ದಾರೆ.

    ಹೌದು ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಗ್ರಾಮದ ಸುರೇಂದ್ರ ಎಂಬ ಯುವಕ ಎರಡು ಸಾವಿರಕ್ಕೂ ಅಧಿಕ ಹಾವುಗಳನ್ನ ರಕ್ಷಣೆ ಮಾಡಿದ್ದು, ಸ್ನೇಕ್ ಸೂರಿ ಎಂದೇ ಖ್ಯಾತಿಯಾಗಿದ್ದಾರೆ. ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಸ್ನೇಕ್ ಸೂರಿ ತನ್ನ 16 ನೇ ವಯಸ್ಸಿನಲ್ಲಿ ಜನರು ಹಾವುಗಳನ್ನ ಕೊಲ್ಲುತ್ತಿರುವುದನ್ನ ಕಂಡು ಹಾವುಗಳನ್ನ ರಕ್ಷಣೆ ಮಾಡಬೇಕೆನ್ನುವ ಪಣ ತೊಟ್ಟಿದ್ದ. ಮೊದಲು ಒಂದೆರಡು ಹಾವುಗಳನ್ನ ಹಿಡಿಯುವಾಗ ಬಹಳ ಭಯ ಪಟ್ಟಿದ್ದ ಸ್ನೇಕ್ ಸೂರಿ ಬಳಿಕ ಹಾವುಗಳನ್ನ ಹಿಡಿಯುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿದ್ದ. ಇಲ್ಲಿಯವರೆಗೆ ಎರಡು ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟು ಸಾಧನೆ ಮಾಡಿದ್ದಾರೆ. ಮೂರು ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಪ್ರತಿದಿನ ಹಾವುಗಳನ್ನ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಇನ್ನೂ ಆನೇಕಲ್ ತಾಲ್ಲೂಕಿನ ಹಲವು ಭಾಗಗಳಿಂದ ಪೋನ್ ಬಂದಾಗ ಕೂಡಲೇ ಕೆಲ ನಿಮಿಷಗಳ ಅಂತರದಲ್ಲಿ ತೆರಳುವ ಸ್ನೇಕ್ ಸುರೇಂದ್ರ ಜೋಪಾನವಾಗಿ ಹಾವನ್ನ ಹಿಡಿಯುತ್ತಾರೆ. ಬಳಿಕ ಪ್ಲಾಸ್ಟಿಕ್ ಡಬ್ಬಿಯೊಳಗೆ ಹಾಗೂ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಹಾಕಿಕೊಂಡು ಹೆಚ್ಚು ವಿಷಕಾರಿ ಇರುವಂತಹ ಹಾವನ್ನ ಕಾಡಿಗೆ ಬಿಡುತ್ತಾರೆ ಹೆಚ್ಚು ವಿಷಕಾರಿಯಲ್ಲದ ಹಾವುಗಳನ್ನ ಕೆರೆಗಳಲ್ಲಿ ಬಿಟ್ಟು ಬರುತ್ತಾರೆ. ಹೆಬ್ಬಾವು, ನಾಗರಹಾವು, ಕೆರೆ ಹಾವು, ಕೊಳಕು ಮಂಡಲ, ಹಸಿರು ಹಾವು ಸೇರಿದಂತೆ ವಿವಿಧ ಬಗೆಯ ಹಾವುಗಳನ್ನ ಈವರೆಗೆ ಸಂರಕ್ಷಿಸಲಾಗಿದೆ. ಹಾವುಗಳ ರಕ್ಷಣೆಗೆ ಹೋದಂತಹ ಸಂಧರ್ಭದಲ್ಲಿ ಹಾವುಗಳನ್ನ ಕೊಲ್ಲುವುದು ಹಾಗೂ ಹಲ್ಲೆ ಮಾಡುವುದು ತಪ್ಪು ಎನ್ನುವಂತಹ ಜಾಗೃತಿಯನ್ನು ಸಹ ಜನರಲ್ಲಿ ಮೂಡಿಸುತ್ತ ಬರುತ್ತಿದ್ದಾರೆ.

    ಹಾವು ಹಿಡಿಯಲು ಹೋದಂತಹ ಸಂಧರ್ಭದಲ್ಲಿ ಸ್ನೇಕ್ ಸೂರಿ ಯಾವುದೇ ಅಪೇಕ್ಷೆ ಇಲ್ಲದೆ ಹಾವನ್ನು ರಕ್ಷಣೆ ಮಾಡುತ್ತಾರೆ ಅಂತಹ ಸಂಧರ್ಭದಲ್ಲಿ ವಿಶೇಷವಾದ ಹಾವುಗಳು ಕಂಡು ಬಂದಲ್ಲಿ ಅದನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ರಕ್ಷಣೆಗೆ ನೀಡಿ ಬರುವಂತಹ ಕಾರ್ಯ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ತಾಲೂಕಿನಾದ್ಯಂತ ಎಲ್ಲಿಯಾದರೂ ಹಾವು ಕಂಡು ಬಂದ್ರು ಸಹ ಹಾವನ್ನು ಕೊಲ್ಲದೆ ಸ್ನೇಕ್ ಸೂರಿಯ 8123539585 ಕರೆ ಮಾಡಿ ರೈತನ ಮಿತ್ರ ಹಾವನ್ನು ರಕ್ಷಣೆ ಮಾಡಬೇಕೆಂಬುದು ಪರಿಸರ ಪ್ರೇಮಿ ಉರಗ ತಜ್ಞ ಸ್ನೇಕ್ ಸೂರಿಯ ಮಾತಾಗಿದ್ದು, ಅದೇ ರೀತಿ ಸುರೇಂದ್ರ ಅವರು ಸಾವಿರಾರು ಹಾವುಗಳ ರಕ್ಷಣೆ ಮಾಡುತ್ತಿದ್ದು,  ಅವರ ಕಾರ್ಯ ಇದೇ ರೀತಿ ಮುಂದುವರೆಯಲಿ ಎಂದು ಆಶಿಸೋಣ.

    ಬಾಲಿವುಡ್​ ಹಿಂದಿಕ್ಕಿದ ಕೆಜಿಎಫ್​ 2: ಈಗ ಮಾಡಿರುವ ದಾಖಲೆ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts