More

    ನಟ ಸುಶಾಂತ್​ ಸಿಂಗ್​ ರಜಪೂತ್​ ಹಾದಿ ತುಳಿದ 16 ವರ್ಷದ ಟಿಕ್​ಟಾಕ್​ ನಟಿಯ ದುರಂತ ಅಂತ್ಯ..!

    ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​, ಹಿಂದಿಯ ಜನಪ್ರಿಯ ಧಾರಾವಾಹಿ ಕ್ರೈಂ ಪಾಟ್ರೋಲ್​ ನಟಿ ಪ್ರೇಕ್ಷಾ ಮೆಹ್ತಾ ಸಾವಿನ ಬಳಿಕ, ಮತ್ತೊಬ್ಬ ನಟಿ ಸಿಯಾ ಕಕ್ಕರ್​ ಅದೇ ಹಾದಿ ತುಳಿದಿದ್ದಾಳೆ.

    ಟಿಕ್​ ಟಾಕ್​ನಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದ ನೃತ್ಯಗಾರ್ತಿ, ನಟಿ ಸಿಯಾ ಕಕ್ಕರ್​ ಗುರುವಾರ (ಜೂನ್​ 25) ಪ್ರೀತ್​ ವಿಹಾರದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಈಕೆಯ ಸಾವಿನ ವಿಷಯವನ್ನು ಮ್ಯಾನೇಜರ್​ ಅರ್ಜುನ್​ ಸರೀನ್​ ಖಚಿತಪಡಿಸಿದ್ದಾರೆ.

    ಇದನ್ನೂ ಓದಿ; ‘ಫೇರ್​ ಆ್ಯಂಡ್​ ಲವ್ಲೀ’ಯಲ್ಲಿ ಇನ್ನು ಮುಂದೆ ಇರೋದಿಲ್ಲ ಫೇರ್​; ಏನು ಹೇಳುತ್ತೆ ಕಂಪನಿ ?

    ಸಿಯಾ ಕಕ್ಕರ್​ ಆತ್ಮಹತ್ಯೆಗೆ ವೈಯಕ್ತಿಕ ವಿಚಾರಗಳೇ ಕಾರಣವಾಗಿರಬೇಕು. ಏಕೆಂದರೆ, ಕೆಲಸದ ವಿಚಾರದಲ್ಲಿ ಆಕೆ ಉತ್ತಮವಾಗಿದ್ದಳು ಎಂದು ಅರ್ಜುನ್​ ಹೇಳಿದ್ದಾರೆ. ಸಿಯಾಳ ಎಲ್ಲ ಕೆಲಸ ಹಾಗೂ ಜಾಹೀರಾತುಗಳ ನಿರ್ವಹಣೆಯನ್ನು ಅರ್ಜುನ್​ ನೋಡಿಕೊಳ್ಳುತ್ತಿದ್ದರು.
    ಹೊಸ ಯೋಜನೆಯೊಂದರ ವಿಚಾರವಾಗಿ ಆಕೆಯ ಜತೆ ಕಳೆದ ರಾತ್ರಿಯಷ್ಟೇ ಚರ್ಚಿಸಿದ್ದೆ. ಆಕೆ ಎಂದಿನಂತೆ ಸಹಜವಾಗಿಯೇ ಮಾತನಾಡಿದ್ದಳು. ಆಕೆ ಪ್ರತಿಭಾವಂತೆಯಾಗಿದ್ದಳು ಎಂದು ಅರ್ಜುನ್​ ಹೇಳಿದ್ದಾರೆ.

    ಇದನ್ನೂ ಓದಿ; ಚಹಾ ಮಾರುವವನ ಮಗಳ ಆಗಸದೆತ್ತರದ ಸಾಧನೆ; ಮನೆಗೂ ತೆರಳದೆ ದೇಶಸೇವೆಗೆ ಸಜ್ಜು

    ಸಿಯಾ ಕಕ್ಕರ್​ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಳು. ಟಿಕ್​ಟಾಕ್​, ಇನ್​ಸ್ಟಾಗ್ರಾಂ, ಸ್ನ್ಯಾಪ್​ ಚಾಟ್​ ಯೂಟ್ಯೂಬ್​ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಳು. ಟಿಕ್​ಟಾಕ್​ನಲ್ಲಿ ನೃತ್ಯದ ಮೂಲಕ ಹೆಚ್ಚು ಜನಪ್ರಿಯತೆ ಹೊಂದಿದ್ದ ಈಕೆಗೆ 11 ಲಕ್ಷ ಫಾಲೋವರ್​ಗಳಿದ್ದರು.

    ಈಕೆಯ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಕುಟುಂಬವು ಪೊಲೀಸ್​ ತನಿಖೆಗೆ ಒತ್ತಾಯಿಸಿದೆ.

    ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts