More

    ಬಬಲೇಶ್ವರ, ತಿಕೋಟಾ ಅಭಿವೃದ್ಧಿಗೆ ಬದ್ಧ

    ತಿಕೋಟಾ: ಬಬಲೇಶ್ವರ ಹಾಗೂ ತಿಕೋಟಾವನ್ನು ರಾಜ್ಯದಲ್ಲೇ ಮಾದರಿ ತಾಲೂಕುಗಳನ್ನಾಗಿ ಮಾಡುವ ಗುರಿ ಇದೆ ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.

    ಸೋಮವಾರ ಪಟ್ಟಣದ ಕಣಬೂರ ಕಾಂಪ್ಲೆಕ್‌ನಲ್ಲಿ ನೂತನ ಉಪ ಖಜಾನೆ ಉದ್ಘಾಟಿಸಿ ಅವರು ಮಾತನಾಡಿ, ನನ್ನ ಮತ ಕ್ಷೇತ್ರದ ತಿಕೋಟಾ ಹಾಗೂ ಬಬಲೇಶ್ವರ ತಾಲೂಕುಗಳು ಎರಡು ಕಣ್ಣುಗಳಿದ್ದಂತೆ. ಹಂತ ಹಂತವಾಗಿ ಎಲ್ಲ ಸರ್ಕಾರಿ ಕಚೇರಿಗಳನ್ನು ತೆರೆಯಲಾಗುವುದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿದ ನೀರಾವರಿ ಯೋಜನೆಯಿಂದ ಇಂದು ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ಹೆಚ್ಚುವರಿಯಾಗಿ ರೈತರು ದ್ರಾಕ್ಷಿ ಹಚ್ಚಿದ್ದಾರೆ. ಸಿದ್ಧೇಶ್ವರ ಶ್ರೀಗಳ ಆಶಯದಂತೆ ಈ ಭಾಗ ಅಮೆರಿಕಾದ ಕ್ಯಾಲಿಫೋರ್ನಿಯಾ ಆಗುತ್ತಿದೆ. ಈ ಭಾಗಕ್ಕೆ ಒಂದು ಬೊಗಸೆ ಅಲ್ಲ, ಕೋಟ್ಯಂತರ ಬೊಗಸೆ ನೀರು ಹರಿದಿದೆ. ಮಹಾರಾಷ್ಟ್ರದ ಶರದ ಪವಾರ ಅವರು ಮಾಡಿದ ಮಾದರಿ ಕೆಲಸಗಳೇ ನನ್ನ ಮತಕ್ಷೇತ್ರದಲ್ಲಿ ಮಾಡುವ ಕೆಲಸಗಳಿಗೆ ಸ್ಫೂರ್ತಿ ಎಂದರು. ವಿಜಯಪುರ ಜಿಲ್ಲಾ ಖಜಾನೆ ಉಪ ನಿರ್ದೇಶಕ ವೈ.ಎಸ್. ಸೋಮನಕಟ್ಟಿ ಮಾತನಾಡಿದರು. ಉಪ ಖಜಾನೆ ಅಧಿಕಾರಿ ಅಕ್ಷತಾ ಅಕ್ಷಂತಿ ಮಾತನಾಡಿದರು.

    ತಹಸೀಲ್ದಾರ್ ಸಂತೋಷ ಮ್ಯಾಗೇರಿ, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಜಿಪಂ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ತಾಪಂ ಅಧ್ಯಕ್ಷೆ ಪ್ರಭಾವತಿ ನಾಟಿಕಾರ, ವೈ.ಜಿ. ಯರನಾಳ, ಜಗದೀಶಗೌಡ ಪಾಟೀಲ ಮತ್ತಿತರರಿದ್ದರು.
    ಚಂದ್ರಶೇಖರ ಎನ್. ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts