More

    ಈ ಪ್ರಸಿದ್ಧ ದೇವಾಲಯದಲ್ಲಿ ಟಿಕ್​ಟಾಕ್​ ವಿಡಿಯೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತಿಲ್ಲ: ಒಂದು ವೇಳೆ ಮಾಡಿದ್ರೆ ಏನಾಗಲಿದೆ?

    ಅಮೃತಸರ(ಪಂಜಾಬ್​): ಪಂಚ ನದಿಗಳ ನಾಡು ಪಂಜಾಬ್​ನ ಅಮೃತಸರದ ಚಿನ್ನದ ದೇವಾಲಯ (ಗೋಲ್ಡನ್​ ಟೆಂಪಲ್​) ಆವರಣದಲ್ಲಿ ಟಿಕ್​ಟಾಕ್​ ವಿಡಿಯೋ ಮಾಡುವುದು ಅಥವಾ ಸೆಲ್ಫಿ ಕ್ಲಿಕ್ಕಿಸುವುದನ್ನು ನಿಷೇಧಿಸಲಾಗಿದೆ.

    ಕೆಲವು ಪ್ರವಾಸಿಗರು ವಿಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್​ ಮಾಡಿದ ಬೆನ್ನಲ್ಲೇ ದೇವಸ್ಥಾನ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಗೋಲ್ಡನ್​ ಟೆಂಪಲ್​ ಆಡಳಿತ ವಹಿಸಿಕೊಂಡಿರುವ ಶಿರೋಮಣಿ ಗುರುದ್ವಾರ ಪರ್ಬಂಧಕ್​ ಸಮಿತಿ(ಎಸ್​ಜಿಪಿಸಿ) ನೋಟಿಸ್​ ಅಂಟಿಸಿದ್ದು, ಪ್ರವಾಸಿಗರು ವಿಡಿಯೋ ಮತ್ತು ಸೆಲ್ಫಿ ತೆಗೆಯುವಂತಿಲ್ಲ ಎಂದು ಸೂಚಿಸಿದೆ.

    ನಿಯಮ ಮೀರಿಯು ವಿಡಿಯೋ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರನ್ನು ನಿಯಂತ್ರಿಸಲು ಸ್ವಯಂಸೇವಕರನ್ನು ದೇವಸ್ಥಾನದಲ್ಲಿ ನಿಯೋಜಿಸಲಾಗಿದೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮ್ಯಾನೇಜರ್​ ಜಸ್ವಿಂದರ್​ ಸಿಂಗ್, ಇಲ್ಇಗೆ ಬಂದಾಗ ಟಿಕ್​ಟಾಕ್​ ಮತ್ತು ಸೆಲ್ಫಿಯಂತಹ ಚಟುವಟಿಕೆಗಳಿಂದ ದೂರವಿಡಿ. ಇದು ಪೂಜಾ ಕಾರ್ಯ ಸಲ್ಲಿಸುವ ಪವಿತ್ರ ಸ್ಥಳವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts