More

    ಭೀಕರ ಕಾರು ಅಪಘಾತ: ಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ ಸ್ಥಿತಿ ಗಂಭೀರ..!

    ಕ್ಯಾಲಿಫೋರ್ನಿಯಾ: ಕಾರು ಅಪಘಾತದಲ್ಲಿ ಪ್ರಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ (45) ಗಂಭೀರವಾಗಿ ಗಾಯಗೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಘಟನೆ ನಡೆದಿರುವುದಾಗಿ ಲಾಸ್​ ಏಂಜಲಿಸ್​ನ ಕೌಂಟಿ ಶೆರಿಫ್ಸ್​ ಇಲಾಖೆ ಮಾಹಿತಿ ನೀಡಿದೆ.

    ಟೈಗರ್​ ವುಡ್​ ಕಾಲಿಗೆ ಅನೇಕ ಗಾಯಗಳಾಗಿರುವುದಾಗಿ ಅವರ ಏಜೆಂಟ್​ ಮಾರ್ಕ್​ ಸ್ಟೈನ್​ಬರ್ಗ್​ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದ ವೇಳೆ ಕಾರಿನಲ್ಲಿ ವುಡ್ಸ್​ ಒಬ್ಬರೆ ಇಬ್ಬರು. ಅವರ ಕಾಲಿಗೆ ಅನೇಕ ಗಾಯಗಳಾಗಿವೆ. ಸದ್ಯ ಕಾಲಿಗೆ ಸರ್ಜರಿ ಮಾಡಲಾಗಿದೆ ಎಂದು ಸ್ಟೈನ್​ಬರ್ಗ್​ ತಿಳಿಸಿದ್ದಾರೆ.

    ಇದನ್ನೂ ಓದಿರಿ: ಪತ್ನಿಯ ಮೊಬೈಲ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ಅಸಹ್ಯ ಹುಟ್ಟಿದೆ- ಅವಳಿಗೆ ವಿಚ್ಛೇದನ ನೀಡಬಹುದೆ?

    ವುಡ್ಸ್​ ಅವರ ಕಾರು ಸಂಪೂರ್ಣ ಹಾನಿಯಾಗಿದೆ ಎಂದು ಲಾಸ್​ ಏಂಜಲಿಸ್​ ಕೌಂಟಿ ಶೆರಿಫ್​ ಇಲಾಖೆ ತಿಳಿಸಿದೆ. ಮುಂದುವರಿದು 2021ರ ಫೆಬ್ರವರಿ 23ರ ಬೆಳಗ್ಗೆ 7.12ರ ಸುಮಾರಿಗೆ ವುಡ್ಸ್​ ಕಾರು ಅಪಘಾತಕ್ಕೀಡಾಯಿತು. ಕಾರು ಬ್ಲ್ಯಾಕ್‌ಹಾರ್ಸ್ ರಸ್ತೆಯಲ್ಲಿರುವ ಹಾಥಾರ್ನ್ ಬೌಲೆವಾರ್ಡ್‌ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಲಾಸ್ ಏಂಜಲೀಸ್ ಕೌಂಟಿಯ ಅಗ್ನಿಶಾಮಕ ದಳ ಮತ್ತು ಅರೆವೈದ್ಯರು ವುಡ್ಸ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ಆ ಬಳಿಕ ಗಾಯಾಳು ವುಡ್ಸ್​ರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕೌಂಟಿ ಶೆರಿಫ್​ ಇಲಾಖೆ ಹೇಳಿದೆ.

    ವುಡ್ಸ್ ಅವರು ಕಾರು ಅಪಘಾತದಲ್ಲಿ ಸಿಲುಕಿರುವುದು ಇದು ಮೂರನೇ ಬಾರಿ. 2009ರಲ್ಲಿ ಇದಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿತ್ತು. ಅಂದು ಎಸ್​ಯುವಿ ಕಾರು ಮರಕ್ಕೆ ಅಪ್ಪಳಿಸಿತ್ತು. ಇದರ ಬೆನ್ನಲ್ಲೇ ವುಡ್ಸ್​ ಅನೇಕ ಮಹಿಳೆಯರೊಂದಿಗೆ ಸಂಬಂಧವಿದೆ ಮತ್ತು ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ವಿಷಯು ಬಹಿರಂಗವಾಗಿತ್ತು. (ಏಜೆನ್ಸೀಸ್​)

    ಇದನ್ನೂ ಓದಿರಿ: Web Exclusive | ಸಿಆರ್​ಝಡ್ ಕಾಯ್ದೆ ತಿದ್ದುಪಡಿಯಾಗಿ 2 ವರ್ಷವಾದರೂ ಸಿದ್ಧವಾಗದ ನಕ್ಷೆ; ಹೊಸ ಕಾಮಗಾರಿ ಜಾರಿಗೆ ಅಡಚಣೆ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಿಗ್​ಬಾಸ್​ ಆರಂಭಕ್ಕೆ ದಿನಗಣನೆ; ಮನೆಯಲ್ಲಿ ಧೂಳೆಬ್ಬಿಸ್ತಾರಾ ಈ ಸೆಲೆಬ್ರಿಟಿಗಳು?

    ಕೆಲಸಕ್ಕೆ ರಜೆ ಸಿಗಲೆಂದು ತನ್ನನ್ನು ತಾನೇ ಕಿಡ್ನಾಪ್​ ಮಾಡಿಕೊಂಡ ಖದೀಮ!

    ಉದ್ಯೋಗಿಗಳಿಗೆ ಗುಡ್​ ನ್ಯೂಸ್​! ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಲಿದೆ ವೇತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts