More

    ಸಂಗಾತಿಯನ್ನು ಹುಡುಕಿಕೊಂಡು ಹುಲಿರಾಯ ಕ್ರಮಿಸಿದ ದೂರ ಕೇಳಿದ್ರೆ ಹುಬ್ಬೇರುವುದು ಗ್ಯಾರೆಂಟಿ!

    ನವದೆಹಲಿ: ಸಂಗಾತಿಯನ್ನು ಹುಡುಕಿಕೊಂಡು ಹುಲಿಯೊಂದು ಬರೋಬ್ಬರಿ 2000 ಕಿ.ಮೀ ದೂರ ಕ್ರಮಿಸಿರುವುದಾಗಿ ಭಾರತೀಯ ಅರಣ್ಯಧಿಕಾರಿ ಪರ್ವೀನ್​ ಕಾಸ್ವಾನ್​ ತಮ್ಮ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಹುಲಿ ಹಾಗೂ ಅದು ಕ್ರಮಿಸಿರುವ ದೂರದ ನಕ್ಷೆಯ ಚಿತ್ರವನ್ನು ತಮ್ಮ ಟ್ವಿಟರ್​ನಲ್ಲಿ ಪರ್ವೀನ್​ ಕಾಸ್ವನ್​ ಅಪ್​ಲೋಡ್ ಮಾಡಿದ್ದಾರೆ. ಭಾರತದ ಈ ಹುಲಿ ದಾಖಲೆಯ ದೂರವನ್ನು ನಡೆದು ಸದ್ಯ ಜ್ಞಾನಗಂಗಾ ಅರಣ್ಯದಲ್ಲಿ ನೆಲೆಸಿದೆ. ಬರೋಬ್ಬರಿ 2000 ಕಿ.ಮೀ ದೂರವನ್ನು ಕಾಲುವೆ, ಮೈದಾನ, ಅರಣ್ಯ, ರಸ್ತೆ ಮೂಲಕ ಕ್ರಮಿಸಿದೆ. ಬೆಳಗಿನ ಸಮಯದಲ್ಲಿ ವಿಶ್ರಾಂತಿ ಪಡೆದುಕೊಂಡು, ರಾತ್ರಿಯಿಡಿ ಸೂಕ್ತ ಸಂಗಾತಿಗಾಗಿ ಹುಲಿ ಹುಡುಕಾಡುತ್ತಾ ಸಾಗಿದೆ. ಅದರ ಚಲನಾವಲನವನ್ನು ಕೊನೆಯವರೆಗೂ ನಿಗಾವಹಿಸಲಾಯಿತು ಎಂದು ಕಾಸ್ವಾನ್​ ಬರೆದುಕೊಂಡಿದ್ದಾರೆ.

    ಹುಲಿಯ ಚಲನೆಯನ್ನು ಹೇಗೆ ಮ್ಯಾಪ್ ಮಾಡಿಲಾಗಿದೆ ಎಂಬುದರ ಬಗ್ಗೆಯೂ ಕಾಸ್ವಾನ್​ ಬರೆದಿದ್ದಾರೆ. ಹುಲಿಗೆ ಮಾರ್ಚ್​ 2019ರಲ್ಲಿ ರೆಡಿಯೋ ಟ್ಯಾಗ್​ ಅನ್ನು ಅಳವಡಿಸಲಾಗಿತ್ತು. ಬೇಕಾದರೆ ನೀವು ಕಾಲವಾಧಿಯನ್ನು ಲೆಕ್ಕಾ ಹಾಕಬಹುದು. ಹುಲಿಯ ಜಾಡನ್ನು ವಿಎಚ್​ಎಫ್ ರೆಡಿಯೋ ಮತ್ತು ಜಿಪಿಎಸ್​ ಮೂಲಕ ಪತ್ತೆ ಹಚ್ಚಲಾಯಿತು ಎಂದು ತಿಳಿಸಿದ್ದಾರೆ.

    ಇನ್ನು ಸಾಮಾಜಿಕ ಜಾಲತಾಣದಲ್ಲಿ ಪರ್ವೀನ್​ ಕಾಸ್ವನ್​ ಅವರ ಪೋಸ್ಟ್​ ವೈರಲ್​ ಆಗಿದೆ. ಇದೊಂದು ಎಕ್ತಾ ಟೈಗರ್ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದರೆ, ಮತ್ತೊರ್ವ ಸರ್​ ಕೊನೆಗೂ ಹುಲಿಗೆ ಸಂಗಾತಿ ಸಿಕ್ಕಿತಾ ಎಂದು ಪರ್ವೀನ್​ ಕಾಸ್ವನ್​ ಅವರನ್ನು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts