More

    ಈ ಫೋಟೋದಲ್ಲಿರುವ ಬಾಲಕ ಬಾಲಿವುಡ್​ನ ಸ್ಟಾರ ನಟ: ಯಾರೆಂದು ಗುರುತಿಸುವಿರಾ?

    ಮುಂಬೈ: ಬಾಲಿವುಡ್​ ನಟ ಟೈಗರ್​ ಶ್ರಾಫ್​ ಮತ್ತು ನಟಿ ಶ್ರದ್ಧಾ ಕಪೂರ್​ ಅಭಿನಯದ ಬಾಗಿ- 3 ಚಿತ್ರ ಮುಂದಿನ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ. ಚಿತ್ರರಂಗದಲ್ಲಿ ಬೆಳವಣಿಗೆ ಕಾಣುತ್ತಿರುವ ಟೈಗರ್​ ಶ್ರಾಫ್​​ ಕುರಿತು ತಾಯಿ ಆಯೇಶಾ ಮಗನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ವಿಶೇಷವಾಗಿ ಮಗನ ಬಾಲ್ಯದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

    ಬಾಗಿ ಚಿತ್ರಕ್ಕೆ ದೇವರು ಆಶೀರ್ವದಿಸಲಿ. ಬಾಗಿ-3ನಲ್ಲಿನ ಅತ್ಯದ್ಭುತ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ನೀವು ಹೇಗೆ ಆಶೀರ್ವದಿಸುತ್ತಿದ್ದೀರಿ ಎಂದು ಹೇಳಲು ನನ್ನಲ್ಲಿ ಯಾವುದೇ ಪದಗಳಿಲ್ಲ. ಟೈಗರ್​ ಅಭಿಮಾನಿಗಳು ಮತ್ತು ಸಾಹಸ ಪ್ರಿಯರು ಹೋಗಿ ಸಿನಿಮಾ ನೋಡಿ. ಚಿತ್ರ ಖಂಡಿತ ಖುಷಿ ಕೊಡುತ್ತದೆ ಎಂದು ಆಯೇಶಾ ಅವರು ಸಾಕಷ್ಟು ಹೃದಯ ಎಮೋಜಿಯೊಂದಿಗೆ ಮಗನ ಬಾಲ್ಯದ ಫೋಟೋ ಹಾಕಿ ಟ್ವೀಟ್​ ಮಾಡಿದ್ದಾರೆ.

    ಆಯೇಶಾ ಅವರ ಟ್ವೀಟ್​​ಗೆ ಟೈಗರ್​ ಶ್ರಾಫ್​ ಅವರ ಅಸಂಖ್ಯಾತ ಅಭಿಮಾನಿಗಳು ಸಮ್ಮತಿ ಸೂಚಿಸಿದ್ದು, ಟೈಗರ್​ ಶ್ರಾಫ್​ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts