More

    ಬಾಕ್ಸ್​ ಆಫೀಸ್​ನಲ್ಲಿ ಸಲ್ಲು ಬಿರುಗಾಳಿ! ಎರಡೇ ದಿನಕ್ಕೆ ನೂರು ಕೋಟಿ ರೂ. ದಾಟಿದ ಟೈಗರ್​ 3 ಗಳಿಕೆ

    ಮುಂಬೈ: ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾದ ಟೈಗರ್​ 3 ಮೊದಲ ದಿನವೇ ಬಾಕ್ಸ್​​ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು, ಬಂಪರ್​ ಓಪನಿಂಗ್​ ಪಡೆದುಕೊಂಡಿದೆ. ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣದ 5ನೇ ಸ್ಪೈ ಯೂನಿವರ್ಸ್​ ಚಿತ್ರ ಇದಾಗಿದ್ದು, ಎಲ್ಲಡೆ ಪಾಸಿಟಿವ್​ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಸಲ್ಮಾನ್​ ಖಾನ್​ ಅವರನ್ನು ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಮನೀಶ್​ ಶರ್ಮ ನಿರ್ದೇಶನದ ಈ ಸಿನಿಮಾದಲ್ಲಿ ಕತ್ರಿನಾ ಕೈಫ್​ ಮತ್ತು ಇಮ್ರಾನ್​ ಹಶ್ಮಿ ಸಹ ನಟಿಸಿದ್ದು, ಮೊದಲ ದಿನವೇ 94 ಕೋಟಿ ರೂ. ಕಮಾಲ್​ ಮಾಡಿರುವ ಟೈಗರ್​ 3 ಎರಡೇ ದಿನಕ್ಕೆ 100 ಕೋಟಿಗೂ ಅಧಿಕ ಗಳಿಕೆ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್​ ಮಾಡುತ್ತಿದೆ.

    ನ. 12ರಂದು ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ 44.50 ಕೋಟಿ ರೂ. ಮತ್ತು ವಿದೇಶದಲ್ಲಿ 41.50 ಕೋಟಿ ರೂ. ಸೇರಿ ಒಟ್ಟು 94 ಕೋಟಿ ರೂ.ಗಳನ್ನು ಟೈಗರ್​ 3 ಸಿನಿಮಾ ಬಾಚಿಕೊಂಡಿದೆ. ಸ್ವತಃ ಯಶ್​ ರಾಜ್​ ನಿರ್ಮಾಣ ಸಂಸ್ಥೆಯೇ ಈ ಸುದ್ದಿಯನ್ನು ಎಕ್ಸ್​ (ಈ ಹಿಂದೆ ಟ್ವಿಟರ್​) ಖಾತೆಯ ಮೂಲಕ ಖಚಿತಪಡಿಸಿದೆ.

    ಹಿಂದಿಯಲ್ಲಿ 43 ಕೋಟಿ ರೂ. ಮತ್ತು 1.5 ಕೋಟಿ ರೂ. ಡಬ್ಬಿಂಗ್​ನಿಂದ ಬಂದಿದೆ. ಉಳಿದ ಹಣ ವಿದೇಶದಿಂದ ಬಂದಿದೆ.

    ಟೈಗರ್​-3 ದಾಖಲೆಗಳು
    * ಹಿಂದಿ ಸಿನಿಮಾ ಇತಿಹಾಸದಲ್ಲಿ ದೀಪಾವಳಿ ಹಬ್ಬದಂದು ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
    * ಟೈಗರ್​ ಸರಣಿಯ ಅತಿ ದೊಡ್ಡ ಓಪನಿಂಗ್​ ಎಂಬ ಹೆಗ್ಗಳಿಕೆ
    * ಹಿಂದಿನ ದೀಪಾವಳಿ ಕಲೆಕ್ಸನ್​ ದಾಖಲೆ ಉಡೀಸ್​

    ದೀಪಾವಳಿಯಂದು ಬಿಡುಗಡೆಯಾದ ಸಿನಿಮಾಗಳಲ್ಲಿ ಇದುವರೆಗಿನ ದಾಖಲೆ ಅಂದರೆ 22 ಕೋಟಿ ರೂಪಾಯಿ. ಅದು ಕೂಡ ಎರಡು ಸಿನಿಮಾಗಳನ್ನು ಬಾಕ್ಸ್​ಆಫೀಸ್​ ಕಲೆಕ್ಸನ್​ ಸೇರಿ. 2012ರಲ್ಲಿ ಶಾರುಖ್​ ಖಾನ್​ ನಟನೆಯ ಜಬ್​ ತಕ್​ ಹೈ ಜಾನ್​ (ಮೊದಲ ದಿನ 12.60 ಕೋಟಿ ರೂ.) ಮತ್ತು ಅಜಯ್​ ದೇವಗನ್​ ಅಭಿನಯದ ಸನ್​ ಆಫ್​​ ಸರ್ದಾರ್​ (9.30 ಕೋಟಿ ರೂ.) ಗಳಿಸಿದ್ದವು. ಇದೀಗ ಟೈಗರ್​ 3 ಒಂದೇ ಸಿನಿಮಾ ದಾಖಲೆಯನ್ನು ಮುರಿದಿದೆ. ಹೃತಿಕ್ ರೋಷನ್ ಅವರ ಕ್ರಿಶ್ 3 ಈ ಹಿಂದೆ ದೀಪಾವಳಿ ದಿನದ ಅತ್ಯಧಿಕ ಸಂಗ್ರಹದ ದಾಖಲೆಯನ್ನು ಹೊಂದಿತ್ತು. ಸೂಪರ್ ಹೀರೋ ಕತೆಯಾಧಾರಿತ ಚಿತ್ರವು ದೀಪಾವಳಿ ದಿನದಂದು 15 ಕೋಟಿ ಗಳಿಸಿತ್ತು.

    ಬಾಕ್ಸ್​ಆಫೀಸ್​ ಮೂಲಗಳ ಪ್ರಕಾರ ಎರಡನೇ ದಿನಕ್ಕೆ ಭಾರತದಲ್ಲಿ ಈ ಸಿನಿಮಾ 57.50 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಎರಡೇ ದಿನಕ್ಕೆ 100 ಕೋಟಿಗೂ ಅಧಿಕ ಸಂಪಾದನೆ ಮಾಡುವ ಮೂಲಕ ಸಲ್ಮಾನ್​ ಖಾನ್​ ಅವರು ಮತ್ತೊಮ್ಮೆ ಬಾಕ್ಸ್​ ಆಫೀಸ್​ ಸುಲ್ತಾನ್​ ಎಂಬುದನ್ನು ಸಾಬೀತು ಮಾಡಿದ್ದಾರೆ.

    ಯಶ್​ ರಾಜ್​ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್‌ನಲ್ಲಿ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್​’ ಮತ್ತು ‘ಪಠಾನ್’ ನಂತರ ಟೈಗರ್ 3 ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವಿನಾಶ್ ಮತ್ತು ಜೋಯಾ ಅವರ ಪಾತ್ರಗಳಲ್ಲಿ ನಟಿಸಿದ್ದು, ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ಅನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿದ್ದಾರೆ.

    ಈ ಚಿತ್ರಕ್ಕೆ ಪ್ರೀತಮ್ ಸೌಂಡ್​ಟ್ರ್ಯಾಕ್​ ಸಂಯೋಜಿಸಿದ್ದರೆ, ಹಿನ್ನೆಲೆ ಸಂಗೀತವನ್ನು ತನುಜ್ ಟಿಕು ಸಂಯೋಜಿಸಿದ್ದಾರೆ. ವರದಿಯ ಪ್ರಕಾರ, ‘ಟೈಗರ್ 3’ ಅನ್ನು ಅಂದಾಜು 300 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ, ಹೀಗಾಗಿ ಇದು ಯಶ್ ರಾಜ್ ಫಿಲ್ಮ್ಸ್‌ನ ಅತ್ಯಂತ ದುಬಾರಿ ಸಿನಿಮಾವಾಗಿದೆ. ಎರಡೇ ದಿನಕ್ಕೆ ಸಿನಿಮಾ 100 ಕೋಟಿ ರೂ. ದಾಟಿದ್ದು, ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಮತ್ತಷ್ಟು ಅಬ್ಬರಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಪಟಾಕಿ ಸಿಡಿಸಿದ ಅಭಿಮಾನಿಗಳು; ಹಾಗೆ ಮಾಡಬೇಡಿ ಅಂದಿದ್ಯಾಕೆ ಸಲ್ಮಾನ್ ಖಾನ್?

    ಒಟಿಟಿಗೆ ಬರಲು ಸಜ್ಜಾಯ್ತು ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್’​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts