More

    ಮಕ್ಕಳ ಕಲಿಕೆಗೆ ಪೋಷಕರು ಪ್ರೋತ್ಸಾಹಿಸಲಿ; ಪ್ರಾಚಾರ್ಯ ಪಂಪನಗೌಡ ಪೊ.ಪಾ. ಹೇಳಿಕೆ

    ಸಿಂಧನೂರು: ಭಯದಿಂದ ಪರೀಕ್ಷೆಯನ್ನು ಎದುರಿಸದೆ ವಿದ್ಯಾರ್ಥಿಗಳು, ಹಬ್ಬದಂತೆ ಆಚರಿಸಲಿ ಎಂದು ಶ್ರೀ ವಿಶ್ವನಾಥೇಶ್ವರ ಕಾಲೇಜ್ ಪ್ರಾಚಾರ್ಯ ಪಂಪನಗೌಡ ಪೊ.ಪಾ. ಹೇಳಿದರು.


    ತಿಡಿಗೋಳ ಸರ್ಕಾರ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿದರು.
    ಓದಿನ ಕಡೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಪರೀಕ್ಷೆಯನ್ನು ಹೇಗೆ ಬರೆಯಬೇಕೆಂಬ ವಿದ್ಯೆಯನ್ನು ಕಲಿಸಿಕೊಡಬೇಕಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಜ್ಞಾನವಿದ್ದು, ಪ್ರೋತ್ಸಾಹಿಸುವ ಕೆಲಸವಾಗಬೇಕು. ಪಾಲಕರು ಮಕ್ಕಳ ಶಿಕ್ಷಣದ ಕುರಿತು ಕಾಳಜಿ ವಹಿಸಬೇಕೆಂದರು.


    2021-22 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು 100 ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


    ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕಿ ಕೆ.ಪಿ.ದಿನೇಶ ಮಾತನಾಡಿದರು. ಉಪನ್ಯಾಸಕ ನಾಗರಾಜ ಹಂಪನಾಳ, ಶಿಕ್ಷಕಿ ಜಯಲಕ್ಷ್ಮೀ, ಸತ್ಯಮ್ಮ, ಬಲವಂತಗೌಡ, ಎಸ್ಡಿಎಂಸಿ ಅಧ್ಯಕ್ಷ ಪಂಪಾಪತಿ ಕಾಸರಡ್ಡಿ, ಹಳದಪ್ಪ ಗದ್ರಟಗಿ, ಈಶ್ವರ ಜಾವೂರು, ಮಲ್ಲನಗೌಡ ಕಾರ‌್ಲಕುಂಟಿ, ಉಪನ್ಯಾಸಕ ಹನುಮರಡ್ಡಿ, ಹಿರಿಯ ಕನ್ನಡ ಶಿಕ್ಷಕ ಬಸಪ್ಪ ಹ್ಯಾಟಿ, ಶಿಕ್ಷಕರಾದ ಸಂಜೀವ, ಶಿವದೇವಿ, ಅಕ್ಕಮಹಾದೇವಿ, ನೀಲನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts