More

    ಆರ್​ಸಿಬಿ ತವರು ಪಂದ್ಯಗಳ ಟಿಕೆಟ್​ ಮಾರಾಟ ಶುರು; ದುಬಾರಿ ದರಕ್ಕೆ ಬೇಸತ್ತ ಅಭಿಮಾನಿಗಳು…

    ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿರುವ ಮೊದಲ 3 ಪಂದ್ಯಗಳ ಆನ್​ಲೈನ್​ ಟಿಕೆಟ್​ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದೆ.

    ಗುರುವಾರ ರಾತ್ರಿ ಆರಂಭಗೊಂಡ ಪ್ರಕ್ರಿಯೆಗೆ ತಕ್ಷಣದಿಂದಲೇ ಭಾರಿ ಸ್ಪಂದನೆ ದೊರೆತಿದ್ದು, ಟಿಕೆಟ್​ ಖರೀದಿಗೆ ಲಾಂತರ ಅಭಿಮಾನಿಗಳು ಒಮ್ಮೆಲೆ ಮುಗಿಬಿದ್ದ ಕಾರಣ ಟಿಕೆಟ್​ ಮಾರಾಟದ ವೆಬ್​ಸೈಟ್​ ಕೆಲಕಾಲ ಕ್ರಾಷ್​ ಆಗಿತ್ತು. ನಂತರ ಅಭಿಮಾನಿಗಳು ಆನ್​ಲೈನ್​ನಲ್ಲಿ ದೊಡ್ಡ ಕ್ಯೂನಲ್ಲಿ ಹೋದರೂ, ಒಟಿಪಿ, ಸೀಟು ಸಮಸ್ಯೆಯಿಂದಾಗಿ ಟಿಕೆಟ್​ ಖರೀದಿಗೆ ಪರದಾಡುವಂತಾಯಿತು. ಇದರ ಜತೆಗೆ ಟಿಕೆಟ್​ಗಳ ದುಬಾರಿ ಬೆಲೆಯೂ ಜನಸಾಮಾನ್ಯ ಅಭಿಮಾನಿಗಳು ಬೇಸರಪಡುವಂತೆ ಮಾಡಿದೆ.

    ಮಾರ್ಚ್​ 25ಕ್ಕೆ ಪಂಜಾಬ್​ ಕಿಂಗ್ಸ್​, ಮಾರ್ಚ್​ 29ಕ್ಕೆ ಕೆಕೆಆರ್​ ಮತ್ತು ಏಪ್ರಿಲ್​ 2ಕ್ಕೆ ಲಖನೌ ಸೂಪರ್​ಜೈಂಟ್ಸ್​ ವಿರುದ್ಧ ನಡೆಯಲಿರುವ ಮೊದಲ 3 ಪಂದ್ಯಗಳ ಕನಿಷ್ಠ ಟಿಕೆಟ್​ ಬೆಲೆ 2,300 ರೂ. ಆಗಿದ್ದರೆ, ಗರಿಷ್ಠ 43,350 ರೂ. ಬೆಲೆ ಇದೆ. 16 ಆವೃತ್ತಿಗಳಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆಲ್ಲದ ತಂಡ ಇಷ್ಟೊಂದು ದುಬಾರಿ ಬೆಲೆ ನಿಗದಿಪಡಿಸಿದ್ದರೆ, 5 ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡ ತನ್ನ ತವರಿನ ಪಂದ್ಯಗಳ ಕನಿಷ್ಠ ಬೆಲೆಯ ಟಿಕೆಟ್​ಗಳನ್ನು 500 ರೂ.ಗೆ ನೀಡುತ್ತಿದೆ. ಅಭಿಮಾನಿಗಳಿಂದ ಅತಿ ಹೆಚ್ಚು ಪ್ರೀತಿ ಸಂಪಾದಿಸುವ ಆರ್​ಸಿಬಿ ತಂಡ ಅವರನ್ನೇ ಲೂಟಿ ಮಾಡಲು ಹೊರಟಿರುವ ನಡೆ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ.

    VIDEO: ಬದಲಾಗಲಿದೆ ಆರ್​ಸಿಬಿ ಹೆಸರು! ಸುಳಿವು ಬಿಟ್ಟುಕೊಟ್ಟರು ರಿಷಬ್​ ಶೆಟ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts