More

    ಟಿಕೆಟ್ ವಂಚಿತರು ರಾಷ್ಟ್ರಭಕ್ತರ ಬಳಗಕ್ಕೆ ಸೇರ್ಪಡೆ

    ಶಿವಮೊಗ್ಗ: ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧೆಯಿಂದ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

    ರಘುಪತಿ ಭಟ್ ಅವರು ನನ್ನ ಮತಗಳನ್ನು ಕಸಿಯುವುದಿಲ್ಲ. ನನಗೆ ಸಾಂಪ್ರದಾಯಿಕ ಮತಗಳೇ ಇವೆ. ಅವರ ಸ್ಪರ್ಧೆಯಿಂದ ಬಿಜೆಪಿಗೆ ನಷ್ಟವಾಗುತ್ತದೆಯೇ ವಿನಃ ನನಗಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಬಿಜೆಪಿಯಲ್ಲಿ ಟಿಕೆಟ್ ವಂಚಿತರೆಲ್ಲ ಇದ್ದಕ್ಕಿದ್ದಂತೆ ರಾಷ್ಟ್ರಭಕ್ತರಾಗುತ್ತಾರೆ. ಅವರನ್ನು ಈಶ್ವರಪ್ಪ ಬೆಂಬಲಿಸಿರುವುದು ಸಹಜವಾಗಿಯೇ ಇದೆ. ಅವರ ಸ್ಪರ್ಧೆಯಿಂದ ನನಗೆ ಯಾವ ರೀತಿಯ ಲಾಭ-ನಷ್ಟವೂ ಆಗುವುದಿಲ್ಲ ಎಂದರು.
    ಈಗಾಗಲೇ 10 ಸಾರ್ವತ್ರಿಕ ಚುನಾವಣೆ ಎದುರಿಸಿದ್ದೇನೆ. ಎಲ್ಲಿಯೂ ವಾಮಮಾರ್ಗದ ಮೂಲಕ ಚುನಾವಣೆ ಮಾಡಿಲ್ಲ. ಹಣ ಖರ್ಚು ಮಾಡುವವರು ಮಾಡಲಿ. ನನಗೆ ಆ ಬಗ್ಗೆ ಚಿಂತೆ ಇಲ್ಲ. ನನ್ನ ಹೋರಾಟವೇ ನನಗೆ ಸ್ಫೂರ್ತಿ ಮತ್ತು ಗೆಲುವು ತಂದುಕೊಡುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts