More

    ಇನ್ನೂ ಸಿಗದ ಬಿಜೆಪಿ ಟಿಕೆಟ್​; ಪಕ್ಷ ಬಿಡ್ತಾರಾ ಮಾಜಿ ಸಚಿವ ರಾಮದಾಸ್?

    ಮೈಸೂರು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಮಾಜಿ ಸಚಿವ ರಾಮದಾಸ್, ಇನ್ನೂ ಟಿಕೆಟ್​ ಸಿಗದಿದ್ದರೂ ಟಿಕೆಟ್ ಸಿಕ್ಕೀತು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ಅವರು ಕಾರ್ಯಕರ್ತರಿಗೂ ಸಮಾಧಾನ ಮಾಡುತ್ತ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ನನಗೆ ಮಂತ್ರಿ ಸ್ಥಾನವನ್ನು ರಾತ್ರೋರಾತ್ರಿ ತಪ್ಪಿಸಲಾಯಿತು. ಎರಡು ಮೂರು ಬಾರಿ ನನಗೆ ಸಚಿವ ಸ್ಥಾನ ತಪ್ಪಿತು. ಪಕ್ಷ ನನಗೆ ತಾಯಿ ಸಮಾನ. ಹೀಗಾಗಿ ನಾನಾಗಲಿ ನನ್ನ ಕಾರ್ಯಕರ್ತರಾಗಲಿ ಪಕ್ಷದ ಬಗ್ಗೆ ಒಂದು ಅಪಸ್ವರ ತೆಗೆಯಲಿಲ್ಲ. ನನಗೆ ತಾಳ್ಮೆ ಇದೆ, ಸಮೀಕ್ಷೆ ನನ್ನ ಪರವಾಗಿಯೇ ಇದೆ. ನಮಗೆ ಇದು ಪರೀಕ್ಷೆ ಕಾಲ. ನನಗೆ ಕಾರ್ಯಕರ್ತರೆ ನಿರ್ಧಾರವೇ ಅಂತಿಮ ಎನ್ನುತ್ತ ಇದು ನನ್ನ ಕೊನೆಯ ಚುನಾವಣೆ ಎಂದಿದ್ದಾರೆ.

    ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನ; ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಫೈಟರ್ ರವಿ

    ಇದೊಂದು ಬಾರಿ ಚುನಾವಣೆ ಮುಗಿಸಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇರುವ ಕನಸು ಈಡೇರಿಸಿಕೊಳ್ಳುವೆ. ಕೇಂದ್ರ ಸಚಿವರ ಮುಂದೆ ನನ್ನ ಮನವಿ ಇಟ್ಟು ಬಂದಿದ್ದೇನೆ. ತಾಳ್ಮೆ ಕಳೆದು ಕೊಳ್ಳಬೇಡಿ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ಕಾರ್ಯಕರ್ತ ಮುಖ್ಯ. ಈ ಬೆಳವಣಿಗೆ ಬಗ್ಗೆ ನೋವಿದೆ. ಸ್ವಲ್ಪ ಕಾಯೋಣ. ಬೇರೆ ಪಕ್ಷದ ದೊಡ್ಡ ನಾಯಕರು ನನ್ನನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರು. ಆದರೆ ಪಕ್ಷದ ವ್ಯವಸ್ಥೆಯಿಂದ ದೂರ ಬರುವುದು ಅಷ್ಟು ಸುಲಭವಲ್ಲ. ಪಕ್ಷ ನನಗೆ ತಾಯಿ ಸಮಾನ. ಪ್ರಾಣ ಬಿಡುತ್ತೇನೆ ಹೊರತು ಪಕ್ಷ ಬಿಡಲ್ಲ. ನಾವು ಕಟ್ಟಿರುವ ಪಕ್ಷ ಇದು. ಬೇರೆಯವರು ಬಂದು ಈಗ ಸೇರಿರಬಹುದು ಎಂದು ಗದ್ಗದಿತರಾದ ರಾಮದಾಸ್, ಇದು ನನ್ನ ಕೊನೆಯ ಚುನಾವಣೆ. ಮುಂದೆ ಎಂದಿಗೂ ಚುನಾವಣೆ ನಿಲ್ಲಲ್ಲ ಎಂದಿದ್ದಾರೆ.

    ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts