More

    ಮುಂಬೈ ಮೇಲಿನ ದಾಳಿಕೋರನ ಗುರುತಿಸಿದ್ದಕ್ಕೆ ಯಾರಿಗೂ ಬೇಡವಾದ!

    ಮುಂಬೈ: ಆತನ ಹೆಸರು ಹರಿಶ್ಚಂದ್ರ ಶ್ರೀವರ್ಧಂಕರ್​. ವಯಸ್ಸು 60ಕ್ಕಿಂತ ಹೆಚ್ಚು. ಬೀದಿಬದಿ ವಾಸ. ಹುಚ್ಚನಂತೆ ಅಲೆದಾಟ, ಉಪವಾಸ. ಕಾರಣ, ಮುಂಬೈ ಮೇಲಿನ ದಾಳಿಕೋರರಲ್ಲಿ ಒಬ್ಬನಾಗಿ ಜೀವಂತ ಸೆರೆಸಿಕ್ಕ ಉಗ್ರ ಅಜ್ಮಲ್​ ಕಸಬ್​ ಎಂಬ ಕ್ರಿಮಿಯನ್ನು ಗುರುತಿಸಿದ್ದು.

    26/11ರಂದು ಅಜ್ಮಲ್​ ಕಸಬ್​ ಮತ್ತು ಆತನ ಸಹಚರ ಅಬು ಇಸ್ಮಾಯಿಲ್​ ಛತ್ರಪತಿ ಶಿವಾಜಿ ಟರ್ಮಿನಲ್​ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆಸಿ ಕಾಮಾ ಆಸ್ಪತ್ರೆ ಬಳಿ ದಾಳಿ ನಡೆಸಿದಾಗ ಹರಿಶ್ಚಂದ್ರ ಶ್ರೀವರ್ಧಾಂಕರ್​ ಅವರಿಗೂ ಗುಂಡು ತಗುಲಿತ್ತು. ಆದರೂ ಅವರು ತಮ್ಮ ಕೈಯಲ್ಲಿದ್ದ ಬ್ಯಾಗ್​ನಿಂದ ಅಜ್ಮಲ್​ ಕಸಬ್​ ಮೇಲೆ ದಾಳಿ ಮಾಡಿದ್ದರು. ಗಾಯಗೊಂಡಿದ್ದ ಅವರನ್ನು ಪೊಲೀಸರು ರಕ್ಷಿಸಿ, ಅವರ ದೇಹವನ್ನು ಹೊಕ್ಕಿದ್ದ ಗುಂಡನ್ನು ಹೊರತೆಗಿಸಿದ್ದರು.

    ಇದನ್ನೂ ಓದಿ: “ನಾವು ನಿಮ್ಮ ಮಕ್ಕಳು” ಪೋಸ್ಟರ್​ ನೋಡಿ ಅಜ್ಜ ಗಳಗಳನೆ ಅತ್ತದ್ದೇಕೆ?

    ಇದಾದ ನಂತರ ಜೀವಂತ ಸೆರೆಸಿಕ್ಕಿದ್ದ ಅಜ್ಮಲ್​ ಕಸಬ್​ನನ್ನು ಗುರುತಿಸುವ ಕಾರ್ಯದಲ್ಲಿ ಹರಿಶ್ಚಂದ್ರ ಶ್ರೀವರ್ಧಾಂಕರ್​ ಪ್ರಾಮಾಣಿಕವಾಗಿ ಪೊಲೀಸರೊಂದಿಗೆ ಸಹಕರಿಸಿದ್ದರು. ಅದೇ ಅವರು ಮಾಡಿದ ಗುರುತರವಾದ ಅಪರಾಧವಾಯಿತು.

    ಉಗ್ರನೊಬ್ಬನನ್ನು ಗುರುತಿಸಿದ್ದರಿಂದ, ಉಗ್ರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಅಪಾಯ ಉಂಟಾಗುವ ಭೀತಿಯಲ್ಲಿ ಕುಟುಂಬ ವರ್ಗದವರು, ಸಂಬಂಧಿಕರು ಅವರನ್ನು ತ್ಯಜಿಸಿದರು. ಮನೆಯಿಂದ ಹೊರಹಾಕಿ ತಾವು ಬೆಚ್ಚಗೆ ಕುಳಿತರು. ಹೀಗೆ ಮನೆಯಿಂದ ಹೊರದೂಡಿಸಿಕೊಂಡ ನಂತರದಲ್ಲಿ ಉಪವಾಸ, ವನವಾಸ ಅನುಭವಿಸುತ್ತಾ ಬೀದಿಬದಿ ವಾಸಿಸಲಾರಂಭಿಸಿದ್ದರು ಹರಿಶ್ಚಂದ್ರ ಶ್ರೀವರ್ಧಾಂಕರ್.​

    ಇದನ್ನೂ ಓದಿ: ಲ್ಯಾಬ್​ನಲ್ಲಿ ಕರೊನಾವನ್ನು ಮಣಿಸಿದ ಆ್ಯಂಟಿಬಾಡಿ, ಹಾಲೆಂಡ್​ನಲ್ಲಿ ಪ್ರಯೋಗ

    ರಸ್ತೆ ಬದಿಯಲ್ಲಿ ನರಳುತ್ತಾ, ಸಂಕಟ ಪಡುತ್ತಿದ್ದ ಹಾಗೂ ಆಗಾಗ ಬಿಎಂಸಿ, ಮಹಾಲಕ್ಷ್ಮೀ ಎಂದು ಬಡಬಡಿಸುತ್ತಿದ್ದ ಹರಿಶ್ಚಂದ್ರ ಅವರನ್ನು ಮುಂಬೈನಲ್ಲಿ ಸಾತ್​ ರಾಸ್ತಾ ಎಂಬ ಅಂಗಡಿಯ ಮಾಲೀಕ ಡೀನ್​ ಡಿಸೋಜಾ ಗಮನಿಸಿದರು. ಆ ವೃದ್ಧನ ಸಂಕಷ್ಟವನ್ನು ಆಲಿಸಲು ಪ್ರಯತ್ನಿಸಿದರು. ಆದರೆ ಅವರು ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.

    ಹಾಗಾಗಿ ತಮ್ಮ ಸ್ನೇಹಿತ ಹಾಗೂ ಎನ್​ಜಿಒ ಒಂದರ ಮುಖ್ಯಸ್ಥ ಗಾಯಕ್ವಾಡ್​ ಎಂಬುವರ ಸಹಾಯದಿಂದ ಹರಿಶ್ಚಂದ್ರ ಅವರನ್ನು ರಕ್ಷಿಸಿ, ಅವರಿಗೆ ಸ್ನಾನ, ಕ್ಷೌರ ಮಾಡಿಸಿ, ಹೊಸ ಬಟ್ಟೆ ಕೊಟ್ಟು ಹೊಸ ಮನುಷ್ಯನನ್ನಾಗಿ ಮಾಡಿದರು. ಎಷ್ಟೇ ವಿಚಾರಿಸಿದರೂ ಬಿಎಂಸಿ, ಮಹಾಲಕ್ಷ್ಮೀ ಎಂಬುದನ್ನು ಬಿಟ್ಟು ಬೇರೇನೂ ಹೇಳದ್ದರಿಂದ, ಇವರು ಆ ಪ್ರದೇಶಕ್ಕೆ ಸೇರಿದವರು ಇರಬೇಕು ಇಲ್ಲವೇ ಅಲ್ಲಿ ಅವರ ಸಂಬಂಧಿಕರು ಇರಬೇಕು ಎಂದು ನಿರ್ಧರಿಸಿದ ಡಿಸೋಜಾ ಮತ್ತು ಗಾಯಕ್ವಾಡ್​ ಶೋಧ ಕಾರ್ಯಾಚರಣೆ ಆರಂಭಿಸಿದರು.

    ಇದನ್ನೂ ಓದಿ: ‘ಒಮ್ಮೆ ಹೀಗಾದರೆ…ಕರೊನಾದಿಂದ ದೇಶಕ್ಕೊಂದು ಅನುಗ್ರಹ ಸಿಕ್ಕಂತಾಗುತ್ತದೆ’: ಆರೋಗ್ಯ ಸಚಿವ ಹರ್ಷವರ್ಧನ್​

    ಬಿಎಂಸಿ ಕಾಲನಿಯಲ್ಲಿ ಒಂದು ಇಡೀ ದಿನ ಹುಡುಕಾಡಿದ ಬಳಿಕ ಹರಿಶ್ಚಂದ್ರ ಅವರ ಸಹೋದರ ಪತ್ತೆಯಾದ. ಹರಿಶ್ಚಂದ್ರ ಕಲ್ಯಾಣದ ನಿವಾಸಿಯೆಂದೂ, ಅವರು ಅಜ್ಮಲ್​ ಕಸಬ್​ನನ್ನು ಗುರುತಿಸಿದ್ದಕ್ಕಾಗಿ ಅವರನ್ನು ಮನೆಯಿಂದ ಹೊರಹಾಕಿರುವ ಕತೆ ಹೇಳಿದರು. ಜತೆಗೆ ಯಾವುದಾದರೂ ಆಶ್ರಮಕ್ಕೆ ಸೇರಿಸುವಂತೆ ಹೇಳಿ ಕೈತೊಳೆದುಕೊಂಡರು ಎಂದು ಗಾಯಕ್ವಾಡ್​ ತಿಳಿಸಿದ್ದಾರೆ.

    ದೇಶದ ಮೇಲೆ ದಾಳಿ ಮಾಡಿದ ಒಬ್ಬ ಉಗ್ರನನ್ನು ಗುರುತಿಸಲು ಸಹಕರಿಸುವ ಧೈರ್ಯ ಮಾಡಿ, ದೇಶಕ್ಕೆ ಉಪಕರಿಸಿ, ಕುಟುಂಬದಿಂದ ಪರಿತ್ಯಕ್ತರಾಗಿರುವ ವ್ಯಕ್ತಿಗೆ ಒಂದು ಶಾಶ್ವತ ನೆಲೆ ಒದಗಿಸಲು ಯಾರಾದರೂ ಮುಂದಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

    “ನಾವು ನಿಮ್ಮ ಮಕ್ಕಳು” ಪೋಸ್ಟರ್​ ನೋಡಿ ಅಜ್ಜ ಗಳಗಳನೆ ಅತ್ತದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts