More

    ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ವಲಸೆ ಕಾರ್ಮಿಕನನ್ನ ಮಗುವಿನಂತೆ ಆರೈಕೆ ಮಾಡ್ತಿದ್ದಾನೆ ಅಪರಿಚಿತ!

    ತ್ರಿಸ್ಸೂರ್ (ಕೇರಳ)​: ನಮ್ಮವರೇ ನಮಗಾಗದೇ ಇರುವ ಕಾಲದಲ್ಲಿ ಕಂಡವರು ನಮ್ಮ ಸಹಾಯಕ್ಕೆ ಬರುತ್ತಾರೆಯೇ ಎಂಬ ಮಾತುಗಳನ್ನಾಡುವುದನ್ನು ಕೇಳಿದ್ದೇವೆ ಮತ್ತು ಕೆಲವೊಮ್ಮೆ ನಾವೇ ಆಡಿರುತ್ತೇವೆ. ಆದರೆ, ಆ ಮಾತಿಗೆ ತದ್ವಿರುದ್ಧವಾಗಿರುವ ತ್ರಿಸ್ಸೂರ್​ ಮೂಲದ ರೈತ ಮಾನವೀಯತೆ ಏನೆಂಬುದನ್ನು ಜಗತ್ತಿಗೆ ನಿರೂಪಿಸಿದ್ದಾರೆ.

    ಅಪಘಾತಕ್ಕೀಡಾದ ವಲಸೆ ಕಾರ್ಮಿಕನನ್ನು ಉಪಚರಿಸುತ್ತಿರುವ ವಿಕ್ರಮನ್​ ಅವರು ಮಾನವೀಯತೆಯ ಪ್ರತೀಕವಾಗಿದ್ದಾರೆ. ಪಟಾಕಿ ಅವಘಡದಿಂದಾಗಿ ಜಾರ್ಖಂಡ್​ ಮೂಲದ ಅರುಣ್​ (23) ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಅರುಣ್​ ಕಳೆದ ಎರಡು ತಿಂಗಳಿಂದ ವಿಕ್ರಮನ್​ ಮನೆಯಲ್ಲಿದ್ದಾರೆ. ವಿಕ್ರಮನ್​, ಅರುಣ್​ಗೆ ಔಷಧಿ ಮತ್ತು ಆಹಾರವನ್ನು ನೀಡುವ ಮೂಲಕ ಕುಟುಂಬದ ಸದಸ್ಯನಂತೆ ರಕ್ಷಣೆ ಮಾಡುತ್ತಿದ್ದಾರೆ.

    ಇದನ್ನೂ ಓದಿರಿ: ಮೈಸೂರು ಮೇಯರ್ ಚುನಾವಣೆ : ಶಾಸಕ ತನ್ವೀರ್ ಸೇಠ್​ಗೆ ಡಿಕೆಶಿ ಬುಲಾವ್

    ವಿಕ್ರಮನ್​ ಅವರು ಕೈಪರಂಬು ಮೂಲದವರು. ಹೊಸ ವರ್ಷದ ಆಚರಣೆ ವೇಳೆ ಕಟ್ಟಡ ನಿರ್ಮಾಣ ಕಾರ್ಮಿಕ ಅರುಣ್​ರನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಹೊಸ ವರ್ಷದ ರಾತ್ರಿ ವಿಕ್ರಮನ್​ ತಮ್ಮ ಮನೆಯ ಬಳಿಕ ಜೋರಾದ ಪಟಾಕಿ ಶಬ್ದವನ್ನು ಕೇಳುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಕೆಲವು ಮಂದಿ ವಿಕ್ರಮನ್​ ಅವರ ಮನೆಯ ಬಾಗಿಲನ್ನು ಬಡಿಯುತ್ತಾರೆ.

    ಬಾಗಿಲು ತೆರೆದಾಗ ಕೆಲವು ವಲಸೆ ಕಾರ್ಮಿಕರು ನೆರವು ಕೇಳಿ ಮನೆಯ ಬಾಗಿಲಿಗೆ ಬಂದಿರುತ್ತಾರೆ. ಪಟಾಕಿ ಅವಘಡದಿಂದಾಗಿ ನಮ್ಮ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ತಕ್ಷಣ ವಿಕ್ರಮನ್​ ಘಟನಾ ಸ್ಥಳಕ್ಕೆ ಧಾವಿಸಿ ಬರುತ್ತಾರೆ. ಈ ವೇಳೆ ಅವಘಡದಿಂದಾಗಿ ಅರುಣ್​ ಕೈ ಊದಿಕೊಂಡಿರುವುದು ಅವರ​ ಗಮನಕ್ಕೆ ಬರುತ್ತದೆ. ಇದಾದ ಬಳಿಕ ಅರುಣ್​ರನ್ನು ತ್ರಿಸ್ಸೂರ್​ನ ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಲಾಗುತ್ತದೆ.

    ಆದರೆ, ಅರುಣ್​ ಸ್ನೇಹಿತರು ಮತ್ತು ಕಟ್ಟಡ ನಿರ್ಮಾಣದ ಯಜಮಾನರು ಅರುಣ್​ ಜವಬ್ದಾರಿ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅರುಣ್​ಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿ ಸುಮಾರು ಒಂದು ತಿಂಗಳು ಮೆಡಿಕಲ್​ ಕಾಲೇಜಿನಲ್ಲಿ ಚಿಕಿತ್ಸೆ ನೀಡಬೇಕಾಗಿರುತ್ತದೆ. ಈ ವೇಳೆ ಅರುಣ್​ ಬೆನ್ನಿಗೆ ನಿಂತಿದ್ದು ವಿಕ್ರಮನ್​. ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಮಾತ್ರವಲ್ಲದೆ ದಿನ ನಿತ್ಯ ಅವರನ್ನು ಉಪಚರಿಸುತ್ತಿದ್ದರು.

    ಇದನ್ನೂ ಓದಿರಿ: ಸ್ಪೋಟಕ ತುಂಬಿದ ಕಾರ್ ಪತ್ತೆ: ‘ಇದು ಟ್ರೈಲರ್ ಮಾತ್ರ, ಸಿನಿಮಾ ಬಾಕಿ ಇದೆ’ ಎಂದು ಅಂಬಾನಿಗೆ ಬೆದರಿಕೆ!

    ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ವಿಕ್ರಮನ್,​ ಅರುಣ್​ರನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಪ್ರತಿವಾರದ ಚಿಕಿತ್ಸೆಗೂ ಸಹ ಅರುಣ್​ರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ತಮ್ಮ ಮನೆಯ ಸದಸ್ಯನಂತೆ ಅರುಣ್​ರನ್ನು ನೋಡಿಕೊಳ್ಳುತ್ತಿದ್ದು, ಗುಣಮುಖನಾದ ಬಳಿಕ ಅರುಣ್​ ತನ್ನ ತವರಿಗೆ ಮರಳು ನಿರ್ಧರಿಸಿದ್ದಾರೆ.

    ಇನ್ನು ಅರುಣ್​ ಪಾಲಕರು ಜೀವಂತವಾಗಿಲ್ಲ. ಆತನ ಸಹೋದರರು ಮತ್ತು ಸಹೋದರಿಯರು ತವರಿನಲ್ಲಿ ನೆಲೆಸಿದ್ದಾರೆ. ಅವರ ಫೋನ್​ ನಂಬರ್​ ನನ್ನ ಬಳಿ ಇಲ್ಲ. ಅವರ ಫೋನ್​ ನಂಬರ್​ ನನ್ನ ಮೊಬೈಲ್​ನಲ್ಲಿ ದಾಖಲು ಮಾಡಿದ್ದೆ. ಆದರೆ, ಪಟಾಕಿ ಅವಘಡದಿಂದ ನಾಶವಾಯಿತು. ನನ್ನು ಗುರುತಿನ ಚೀಟಿಯನ್ನು ಸಹ ಕಳೆದುಕೊಂಡಿದ್ದೇನೆಂದು ಅರುಣ್​ ಹೇಳಿದ್ದಾರೆ. ಅಲ್ಲದೆ, ತನ್ನನ್ನು ರಕ್ಷಿಸಿದ ವಿಕ್ರಮನ್​ಗೆ ಕೃತಜ್ಞರಾಗಿದ್ದೇನೆ. ಅವರದ್ದು ತೀರಿಸಲಾಗದ ಋಣ ಎಂತಲೂ ಅರುಣ್​ ತಿಳಿಸಿದ್ದಾರೆ. ‘

    ಅರುಣ್​ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ನೋಡಿಕೊಳ್ಳುತ್ತೇನೆ. ಅವರು ಗುಣಮುಖರಾದ ಬಳಿಕ ತಮ್ಮ ತವರಿಗೆ ಮರಳಬಹುದು ಎಂದರು. ವಿಕ್ರಮನ್​ ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂಬುದೇ ಅನೇಕರ ಆಶಯವಾಗಿದೆ. ಅಲ್ಲದೆ, ಮೊದಲು ಮಾನವನಾಗು ಎನ್ನುವುದಕ್ಕೇ ವಿಕ್ರಮನ್​ ನಿಜವಾದ ಅರ್ಥ ನೀಡಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಶಿವರಾತ್ರಿ ಪ್ರಯುಕ್ತ ಕ್ರಿಕೆಟ್ ಟೂರ್ನಿ: ಗೆದ್ದವರಿಗೆ ಸಿಗುತ್ತೆ ಜೋಡಿಕುರಿ ಜತೆಗೆ ವಿಸ್ಕಿ ಬಾಟಲಿ…

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ವಧುವಿನ ತಂದೆಯ 11 ಲಕ್ಷ ರೂ. ವರದಕ್ಷಿಣೆ ನಿರಾಕರಿಸಿ ವರನ ತಂದೆ ಹೇಳಿದ ಮಾತಿಗೆ ಭಾರಿ ಮೆಚ್ಚುಗೆ!

    ಪಂಚರಾಜ್ಯಗಳ ಚುನಾವಣೆ ಕಹಳೆ ಮೊಳಗಿಸಿದ ಕೇಂದ್ರ ಚುನಾವಣಾ ಆಯೋಗ: ದಿನಾಂಕ ಪ್ರಕಟ

    ಮದುವೆ ಮಂಟಪವಾಗಿ ಬದಲಾದ ಜೈಲು! ವಿಚಾರಣಾಧೀನ ಖೈದಿಯ ವಧು ಯಾರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts