More

    ದೆಹಲಿ ಸಿಎಂ ಮಗಳಿಗೆ ‘ಟೋಪಿ’ ಹಾಕಿದವರ ಬಂಧನ

    ನವದೆಹಲಿ, ಫೆ 15: ಇ ಕಾಮರ್ಸ್ ತಾಣವೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಗಳಿಗೆ ವಂಚಿಸಿದ್ದ ಮೂವರು ವಂಚಕರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಬಂಧಿತರು ಉತ್ತರ ಪ್ರದೇಶ, ಹರ್ಯಾಣ ಮೂಲದವರಾಗಿದ್ದು, ಕಪಿಲ್ ಕುಮಾರ್ (18), ವಾಜಿದ್ (26) ಹಾಗೂ ಮನ್ವಿಂದರ್ ಸಿಂಗ್ (25) ಎಂದು ಗುರುತಿಸಲಾಗಿದೆ. ಇವರು ಓಎಲ್​ಎಕ್ಸ್ ನಲ್ಲಿ ಹರ್ಷಿತಾ ಕೇಜ್ರಿವಾಲ್ ಅವರಿಗೆ 34 ಸಾವಿರ ರುಪಾಯಿ ವಂಚಿಸಿದ್ದರು.

    ಇದನ್ನೂ ಓದಿರಿ: ಓವಿಯಾ ವಿರುದ್ಧ ಸೈಬರ್​ ಕ್ರೈಂಗೆ ದೂರು ನೀಡಿದ ಬಿಜೆಪಿಯಿಂದ ಗಂಭೀರ ಆರೋಪ..!

    ಫೆಬ್ರವರಿ 7 ರಂದು ಹರ್ಷಿತಾ ಅವರು ತಾವು ಮನೆಯಲ್ಲಿ ಬಳಸಿದ ಸೋಪಾ ಒಂದನ್ನು ಮಾರಾಟ ಮಾಡುವ ಸಲುವಾಗಿ ಒಎಲ್​ಎಕ್ಸ್​ನಲ್ಲಿ ಹಾಕಿದ್ದರು. ಇದನ್ನು ನೋಡಿದ ವಂಚಕರು ಮೊದಲು ಸ್ವಲ್ಪ ಹಣವನ್ನು ಹರ್ಷಿತಾ ಖಾತೆಗೆ ನೀಡಿದ್ದರು. ನಂತರ ಹೆಚ್ಚಿನ ಹಣ ಹಾಕುತ್ತೇವೆ ಎಂದು ಕ್ಯೂಆರ್ ಕೋಡ್​ ಒಂದನ್ನು ಕಳುಹಿಸಿದ್ದರು. ಹಣ ಬರುತ್ತದೆ ಎಂದು ಹರ್ಷಿತಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ತಮ್ಮ ಖಾತೆಯಿಂದ 34 ಸಾವಿರ ರುಪಾಯಿ ಕಳೆದುಕೊಂಡಿದ್ದರು.

    ಈ ಕುರಿತು ದೆಹಲಿ ಸಿಎಂ ಕೇಜ್ರಿವಾಲ್ ಮನೆ ಸಮೀಪದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ತೆಗೆದಿರುವುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. (ಏಜೆನ್ಸೀಸ್​)

    ಮೆಷಿನ್​ಗೆ ಸಿಕ್ಕಿ ಎರಡು ತುಂಡಾದ ಕೈ! ದೇವರ ರೂಪದಲ್ಲಿ ಬಂದು ಕಾಪಾಡಿದ ವೈದ್ಯರು

    VIDEO| ಅದೃಷ್ಟ ಕೈ ಕೊಟ್ರೆ ಈ ಥರಾನೂ ಆಗುತ್ತೆ: ಈವರೆಗೂ ನೋಡಿರದ ವಿಚಿತ್ರ ರನೌಟ್ ಇದು​!

    ಸಂಸತ್ತಿನಲ್ಲೇ ಮಹಿಳೆಯನ್ನು ರೇಪ್​ ಮಾಡಲು ಯತ್ನಿಸಿದ ಸಚಿವ! ಕೇಸ್​ ಮುಚ್ಚುವ ಪ್ರಯತ್ನದಲ್ಲಿ ಪೊಲೀಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts