More

    VIDEO| ಪೊಲೀಸ್​ ವ್ಯಾನ್​ ಮುಂದೆ ನಿಂತು ಟಿಕ್​ಟಾಕ್​ ವಿಡಿಯೋ ಮಾಡಿದ ಹುಡುಗರಿಗೆ ಸಿಕ್ತು ಬಂಪರ್​ ಆಫರ್​!

    ಚೆನ್ನೈ: ಪೊಲೀಸ್​ ಸಿಬ್ಬಂದಿ ಅಥವಾ ವಾಹನಗಳ ಮುಂದೆ ನಿಂತು ಟಿಕ್​ಟಾಕ್​ ವಿಡಿಯೋ ಮಾಡುವುದೆಂದರೆ ತಮಾಷೆಯಲ್ಲ. ಮೊದಲೇ ಟಿಕ್​ಟಾಕ್​ಗೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧವಿದೆ. ಈ ಹಿಂದೆ ಸರ್ಕಾರವು ಕೂಡ ಟಿಕ್​ಟಾಕ್​ನಿಂದ ಆಗುತ್ತಿರುವ ವ್ಯತ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಂತಹದರಲ್ಲಿ ಪೊಲೀಸ್​ ವಾಹನದ ಮುಂದೆಯೇ ಟಿಕ್​ಟಾಕ್​ ಮಾಡಿದ ಹುಡುಗರಿಗೆ ಏನು ತೊಂದರೆ ಕಾದಿದೆಯೋ ಎಂದು ಊಹಿಸಿದರೆ, ನಿಮ್ಮ ಊಹೆ ತಪ್ಪಾಗಲಿದೆ.

    ಹೌದು, ಪೊಲೀಸ್​ ವಾಹನದ ಮುಂದೆ ನಿಂತು ಟಿಕ್​ಟಾಕ್​ ಮಾಡಿದ ಮೂವರು ಹುಡುಗರನ್ನು ಪ್ರಶ್ನಿಸದೇ ತಮಿಳುನಾಡು ಪೊಲೀಸ್​ ಇಲಾಖೆ ತೆಗೆದುಕೊಂಡ ನಿರ್ಣಯ ಇದೀಗ ಎಲ್ಲರ ಗಮನ ಸೆಳೆದಿದೆ.

    ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಟಿಕ್​ಟಾಕ್​ ವಿಡಿಯೋವೊಂದು ವೈರಲ್​ ಆಗುತ್ತದೆ. ವಿಡಿಯೋದಲ್ಲಿ ಹುಡುಗರಿಬ್ಬರು ಪೊಲೀಸ್​ ವ್ಯಾನ್​ ಮೇಲೆ ಕುಳಿತು ಸಿನಿಮಾ ಡೈಲಾಗ್​ ಒಂದಕ್ಕೆ ಲಿಪ್​ ಸಿಂಕ್​ ಮಾಡುತ್ತಾ ಹಾಡು ಬಂದ ತಕ್ಷಣ ವ್ಯಾನ್​ನಿಂದ ಕೆಳಗಿಳಿದು ನಟನೆ ಮಾಡುತ್ತಾರೆ. ಇದನ್ನು ಮತ್ತೊಬ್ಬ ಹುಡುಗ ರೆಕಾರ್ಡ್​ ಮಾಡುತ್ತಿರುತ್ತಾನೆ.

    ಅಂದಹಾಗೆ ವಿಡಿಯೋದಲ್ಲಿರುವ ವ್ಯಾನ್​ ತೂತುಕುಡಿಯ ಜಿಲ್ಲೆಯ ಸಶಸ್ತ್ರ ಮೀಸಲು ಘಟಕಕ್ಕೆ ಸೇರಿದ್ದಾಗಿದ್ದು, ಕ್ಯಾಡ್​ವೆಲ್​ ಕಾಲನಿಯಲ್ಲಿರುವ ವರ್ಕ್​ಶಾಪ್​ನಲ್ಲಿ ಬಿಟ್ಟಿದ್ದಾಗ ಹುಡುಗರು ವಿಡಿಯೋ ಮಾಡಿದ್ದಾರೆ. ಹುಡುಗರು ಅಂದಾಜು 17 ವಯಸ್ಸಿನವರು ಎನ್ನಲಾಗಿದೆ. ಹುಡುಗರ ವಿಡಿಯೋವನ್ನು ವ್ಯಾನ್​ ಡ್ರೈವರ್​ ಗಮನಿಸಿ ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಬಳಿಕ ತೂತುಕುಡಿಯ ಡಿಎಸ್​ಪಿ ಆರ್​. ಪ್ರಕಾಶ್​ ಹುಡುಗರನ್ನು ಕರೆಯಿಸಿ ಅವರನ್ನು ಶಿಕ್ಷಿಸದೇ, ಮಾತುಕತೆ ನಡೆಸುತ್ತಾರೆ

    ಮೂವರು ಹುಡುಗರಲ್ಲಿ ಓರ್ವ ಸಾಹಿತ್ಯ, ಇನ್ನೋರ್ವ ಐಟಿ ಓದುತ್ತಿದ್ದಾನೆ. ಮತ್ತೋರ್ವ 6ನೇ ತರಗತಿಗೆ ಶಾಲೆ ಬಿಟ್ಟಿದ್ದಾನೆ. ಪೊಲೀಸ್​ ಇಲಾಖೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದಾಗ ಅವರನ್ನು ಶಿಕ್ಷಿಸುವ ಬದಲು ಪ್ರೋತ್ಸಾಹಿಸುವುದು ಉತ್ತಮವೆಂದು ನನಗೆ ಮನವರಿಕೆಯಾಯಿತು. ನಾವು ಪೊಲೀಸ್​ ಸ್ನೇಹ ಬಳಗವನ್ನು ಹೊಂದಿದ್ದೇವೆ. ಅದರಲ್ಲಿ ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳು ಕೆಲ ಸಮಯ ಸಂಚಾರಿ ಬೀಟ್​ ನಡೆಸುತ್ತಾರೆ. ಹೀಗಾಗಿ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಕಾಶ್​ ತಿಳಿಸಿದ್ದಾರೆ.

    ಈ ನಡೆಯಿಂದ ಪೊಲೀಸ್​ ಇಲಾಖೆಯನ್ನು ಧನಾತ್ಮಕ ದೃಷ್ಟಿಯಿಂದ ನೋಡುತ್ತಾರೆ ಎಂಬ ನಂಬಿಕೆಯನ್ನು ಪೊಲೀಸ್​ ಇಲಾಖೆ ಹೊಂದಿದ್ದು, ವಿದ್ಯಾರ್ಥಿಗಳು ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಇದು ಕೂಡ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಆದರೆ, ಶಾಲೆಯನ್ನು ಅರ್ಧಕ್ಕೆ ಬಿಟ್ಟ ಹುಡುಗನಿಗೆ ಈ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts