ದಿಗ್ವಿಜಯ ನ್ಯೂಸ್​ ಆ್ಯಂಕರ್​ಗೆ ಜೀವ ಬೆದರಿಕೆ ಕರೆ: ಗೌರಿ ಮಾದರಿಯಲ್ಲಿ ಹತ್ಯೆಯ ಎಚ್ಚರಿಕೆ

blank

ಬೆಂಗಳೂರು: ಡಿಜೆ ಹಳ್ಳಿ ಗಲಭೆಯ ಬಗೆಗಿನ ಸತ್ಯಾಂಶಗಳನ್ನು ತೆರೆದಿಟ್ಟಿದ್ದಕ್ಕೆ ದಿಗ್ವಿಜಯ ನ್ಯೂಸ್​ 24X7 ವಾಹಿನಿಯ ನ್ಯೂಸ್​ ಆ್ಯಂಕರ್​ಗೆ ಜೀವ ಬೆದರಿಕೆ ಕರೆ ಬಂದಿದೆ.

blank

ಆ್ಯಂಕರ್​​ ರಕ್ಷತ್​ ಶೆಟ್ಟಿ ಅವರಿಗೆ ವಿದೇಶದಿಂದ ಪದೇಪದೆ ಕರೆ ಬರುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್​ ಮಾದರಿಯಲ್ಲಿ ಹತ್ಯೆಗೈಯುವ ಎಚ್ಚರಿಕೆ ನೀಡಿದ್ದು, ಎಸ್​ಡಿಪಿಐ ಬಗ್ಗೆ ಮಾತನಾಡದಂತೆ ಅನಾಮಧೇಯನೊಬ್ಬ ತಾಕೀತು ಮಾಡಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್, ಎಸ್​ಡಿಪಿಐ ನಡುವಿನ ರಾಜಕೀಯ ವೈಮನಸ್ಯದಿಂದ ಗಲಭೆ ನಡೆದಿದೆ: ಬಸವರಾಜ್​ ಬೊಮ್ಮಾಯಿ

ಗೊಡ್ಡು ಬೆದರಿಕೆಗೆ ಮಣಿಯಲ್ಲ
ಇಂತಹ ಅನಾಮಧೇಯರ ಗೊಡ್ಡು ಬೆದರಿಕೆಗೆ ದಿಗ್ವಿಜಯ ನ್ಯೂಸ್​ ಎಂದಿಗೂ ಮಣಿಯುವುದಿಲ್ಲ. ಸತ್ಯಾಂಶವನ್ನು ತೆರೆದಿಡಲು ನಿಷ್ಠುರವಾದ ಸುದ್ದಿಯ ಪ್ರಸಾರ ಮಾಡುವುದನ್ನು ಎಂದಿಗೂ ಬಿಡುವುದಿಲ್ಲ. ಜನರಿಗೆ ಸತ್ಯವನ್ನು ತಿಳಿಸುವುದೇ ದಿಗ್ವಿಜಯ ವಾಹಿನಿಯ ಧ್ಯೇಯವಾಗಿದ್ದು, ಯಾವುದೇ ಕಾರಣಕ್ಕೂ ಸುದ್ದಿ ನಿಲ್ಲಿಸುವ ಮಾತೇ ಇಲ್ಲ. ಇದು ಸಮಸ್ತ ವೀಕ್ಷಕ ಪ್ರಭುಗಳಿಗೆ ದಿಗ್ವಿಜಯ ನ್ಯೂಸ್​ನ ವಾಗ್ದಾನವಾಗಿದೆ.

ಎಸ್​ಡಿಪಿಐ, ಪಿಎಫ್​ಐ ನಿಷೇಧ ಆಗಲಿದೆ: ಸಚಿವ ಆರ್​. ಆಶೋಕ್​

Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank