More

    ಕೆರೆಯಲ್ಲಿ ಮೀನು ಹಿಡಿಯಲು ಬಂದ್ರು ಸಾವಿರಾರು ಜನ: ಮೀನು ಸಿಗದಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?

    ಉತ್ತರಕನ್ನಡ: ಮೀನು ಹಿಡಿಯಲು ಹೋದವರಿಗೆ ಮೀನು ಸಿಗದೇ ನಿರಾಸೆಯಾದ ಘಟನೆ ನಡೆದಿದೆ. ಮೀನು ಸಿಗುತ್ತೆ ಎಂದು ಕೆರೆಯ ಬಳಿ ಹೋದವರು ಖಾಲಿ ಕೈಯಲ್ಲಿ ಬರಬೇಕಾಯಿತು.

    ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಇಲ್ಲಿನ ಕಾನಗೋಡ ಕೆರೆಯಲ್ಲಿ ಮೀನು ಹಿಡಿಯಲು ಹೋದವರಿಗೆ ಮೀನು ಸಿಗಲಿಲ್ಲ.ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿದ್ದಾರೆ.

    ಮೀನಿಗಾಗಿ ಇಷ್ಟೊಂದು ರಾದ್ಧಾಂತವಾಗಲು ಕಾರಣವೂ ಇದೆ. ಅದೇನೆಂದರೆ ಕೆರೆ ಬೇಟೆ ಸಮಿತಿ ಕೆರೆಯಲ್ಲಿ ಪ್ರತಿ ಕೂಣಿಗೆ 600 ರೂ. ವಸೂಲಿ ಮಾಡಿ, ಕೆರೆಯಲ್ಲಿ ಮೀನು ಹಿಡಿಯಲು ಅವಕಾಶ ನೀಡಿತ್ತು. ಇದನ್ನು ತಿಳಿದಿದ್ದೇ ತಡ ಸಾವಿರಾರು ಜನರು ಕೆರೆಯಲ್ಲಿ ಒಮ್ಮೆಲೇ ಮೀನು ಹಿಡಿಯಲು ಮುಗಿಬಿದ್ದಿದ್ದಾರೆ. ಬರೋಬ್ಬರಿ ಐದೂವರೆ ಸಾವಿರ ಜನರು ಕೆರೆಯಲ್ಲಿ ಮೀನು ಹಿಡಿಯಲು ಆಗಮಿಸಿದ್ದರು.

    ಕೆರೆಯ ತುಂಬೆಲ್ಲಾ ತುಂಬಿಕೊಂಡ ಜನರು ಮೀನಿಗಾಗಿ ತುಂಬಾ ಸಮಯ ಹುಡುಕಾಡಿದ್ದಾರೆ. ಆದರೆ ಯಾರಿಗೂ ಮೀನು ಸಿಗಲೇ ಇಲ್ಲ. ಕೊನೆ ಪಕ್ಷ ಹಣವಾದರೂ ಕೊಡಿ ಎಂದು ಸಮಿತಿಗೆ ಒತ್ತಾಯಿಸಿದ್ದರೂ ಕೂಡ ಹಣ ನೀಡಲು ನಿರಾಕರಿಸಿದೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಜನರು ಹಾಗೂ ಸಮಿತಿ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದ ಪೊಲೀಸರ ನಡುವೆಯೂ ಜನರು ವಾಗ್ವಾದ ನಡೆದು, ಕಲ್ಲು ತೂರಾಟ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO: ಏಕಾಏಕಿ ಅಂಗಡಿಯೊಳಗೆ ನುಗ್ಗಿತು ಕಾರು: ಇಲ್ಲಿದೆ ಬೆಚ್ಚಿ ಬೀಳಿಸುವ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts