More

    ಸಾವಿರ ದಾಟದ ಸ್ಮಾರ್ಟ್ ಸಮೀಕ್ಷೆ !

    | ರವಿ ಗೋಸಾವಿ ಬೆಳಗಾವಿ

    ಸ್ಮಾರ್ಟ್ ಸಿಟಿಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಜನರ ಜೀವನ ಮಟ್ಟ ಹೇಗಿದೆ ಎಂಬುದನ್ನರಿಯಲು ಕೇಂದ್ರ ಸರ್ಕಾರ ನಡೆಸುತ್ತಿರುವ ಸುಲಲಿತ ಜೀವನ (ಇಒಎಲ್) ಸಮೀಕ್ಷೆಗೆ ಅಭಿಪ್ರಾಯ ನೀಡುವಲ್ಲಿ ಕುಂದಾನಗರಿ ಜನರು ನಿರಾಸಕ್ತಿ ತೋರಿದ್ದಾರೆ. ಇಲ್ಲಿಯವರೆಗೆ ಕೇವಲ 870 ಜನ ಮಾತ್ರ ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದಾರೆ.

    ರಾಜ್ಯದ ಸ್ಮಾರ್ಟ್ ಸಿಟಿಗಳ ಪೈಕಿ ತುಮಕೂರು ಜಿಲ್ಲೆ ನಿತ್ಯ ಅತಿಹೆಚ್ಚು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾ ಸಮೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದರೇ, ಬೆಳಗಾವಿ ಕೇವಲ 79 ಜನರಿಂದ ಪ್ರತಿಕ್ರಿಯೆ ಪಡೆಯುವ ಮೂಲಕ ಸಮೀಕ್ಷೆಯಲ್ಲಿ ಹಿಂದುಳಿದ ಕರ್ನಾಟಕದ ಸ್ಮಾರ್ಟ್ ಸಿಟಿಯಾಗಿದೆ. ಫೆ.1 ರಿಂದ ಇಲ್ಲಿಯವರೆಗೆ ಬೆಳಗಾವಿ 870 ಸಲಹೆ ಪಡೆದಿದ್ದರೇ, ತುಮಕೂರು 3,500 ಜನರ ಅಭಿಪ್ರಾಯ ಪಡೆದು ಮುಂಚೂಣಿಯಲ್ಲಿದೆ.

    ಸಮೀಕ್ಷೆ ಆರಂಭವಾದ ಮೂರು ದಿನಗಳ ಕಾಲ ಬೆಳಗಾವಿ ಬದಲಾಗಿ ‘ಬೆಳವಾವಿ’ ಎಂದು ನಮೂದಿಸಲಾಗಿತ್ತು. ದೆಹಲಿ ಮಟ್ಟದಲ್ಲಿ ನಡೆದ ಈ ತಾಂತ್ರಿಕ ಅಡಚಣೆಯಿಂದಾಗಿ ಮೊದ ಮೊದಲು ಫೀಡಬ್ಯಾಕ್ ನೀಡಲು ಆನ್‌ಲೈನ್‌ನಲ್ಲಿ ಬೆಳಗಾವಿ ಹುಡುಕಿದ ಜನತೆಗೆ ಲಭ್ಯ ವಾಗಿರಲಿಲ್ಲ. ಹೀಗಾಗಿಯೇ ಸಮೀಕ್ಷೆಯಲ್ಲಿ ಹಿನ್ನಡೆಯಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ವಿಜಯವಾಣಿಗೆ ತಿಳಿಸಿದ್ದಾರೆ.
    ಆರಂಭದ ನಾಲ್ಕು ದಿನದ ಅಂಕಿ- ಅಂಶ ಕೈಬಿಟ್ಟು ಉಳಿದ ದಿನಗಳ ಲೆಕ್ಕಾಚಾರದಲ್ಲೂ ತುಮಕೂರಿನ ಸಮೀಕ್ಷೆ ಅರ್ಧಕ್ಕಿಂತಲೂ ಕಡಿಮೆ ಇದೆ. ಈವರೆಗೆ ಸಂಗ್ರಹಿಸಿದ ಅಭಿಪ್ರಾಯಗಳ ಅಂಕಿ-ಅಂಶ ಗಮನಿಸಿದಾಗ 11 ದಿನಗಳಲ್ಲಿ ತುಮಕೂರು 318 ಜನರ ಸಲಹೆ ಪಡೆದಿದ್ದರೆ, ಬೆಳಗಾವಿ 7 ದಿನಗಳ ಸರಾಸರಿ ಕೇವಲ 124 ಜನರ ಸಲಹೆ ಪಡೆದಿದೆ.

    ಪ್ರತಿಕ್ರಿಯೆ ಹೆಚ್ಚಾದಷ್ಟು ಫಲಿತಾಂಶ: ಸಮೀಕ್ಷೆಯಲ್ಲಿ ನಾವು ವಿಷಯವಾರು ನೀಡುವ ಪ್ರತಿಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡು ಜೀವನ ಮಟ್ಟ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ನೂತನ ಯೋಜನೆಗಳ ರೂಪುರೇಷೆಗಳನ್ನು ನಿರ್ಮಿಸುವುದಕ್ಕೆ ಸಹಾಯವಾಗಲಿದೆ. ಸಮೀಕ್ಷೆಯಲ್ಲಿ ಅಭಿಪ್ರಾಯಗಳು ಹೆಚ್ಚಾದಷ್ಟು ವಸ್ತು ಸ್ಥಿತಿ ಅರಿಯಲು ಸಾಧ್ಯವಾಗಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಫೀಡಬ್ಯಾಕ್ ನೀಡಬೇಕು ಎನ್ನುವುದು ಪ್ರೊ. ಸಿದ್ದಲಿಂಗ ಹೂಗಾರ ಅವರ ಮಾತು.

    ಜೀವನ ಮಟ್ಟ ಸುಧಾರಣೆಗೆ ಅಭಿಪ್ರಾಯ ಸಂಗ್ರಹಣೆ

    ಕೇಂದ್ರ ಸರ್ಕಾರ ಸ್ಮಾರ್ಟ್‌ಸಿಟಿ ಮಿಷನ್ ನಗರಗಳಲ್ಲಿ ಪ್ರಮುಖ ಮೂಲ ಸೌಕರ್ಯಗಳನ್ನು ಒದಗಿಸುವ ಹಾಗೂ ನಾಗರಿಕರಿಗೆ ಯೋಗ್ಯ ಜೀವನ ಮಟ್ಟ ಕಲ್ಪಿಸುವಲ್ಲಿ ಪ್ರಸ್ತುತ ನಗರವಾಸಿಗಳ ಅಭಿಪ್ರಾಯ ಸಂಗ್ರಹಿಸಿ ಅವುಗಳನ್ನು ಆಧಾರವಾಗಿಟ್ಟುಕೊಂಡು ಭವಿಷ್ಯದಲ್ಲಿ ಯೋಜನೆ ರೂಪಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯಕ್ಕಾಗಿ ಸಾರ್ವಜನಿಕರ ಮೊರೆ ಹೋಗಿದೆ.

    ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಹೇಗೆ?

    ಸ್ವಚ್ಛ ಮತ್ತು ಸುಸ್ಥಿರ ಪರಿಸರ ಹಾಗೂ ಉತ್ತಮ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಗಳು ಸೇರಿ ಒಟ್ಟು 114 ಬೃಹತ್ ನಗರಗಳಲ್ಲಿ ಸುಲಲಿತ ಜೀವನ ಸೂಚ್ಯಂಕ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಬಾಡಿಗೆ ಮನೆ, ಶಿಕ್ಷಣ, ಉತ್ತಮ ವಾತಾವರಣ, ತ್ಯಾಜ್ಯ ಸಂಗ್ರಹಣೆ, ಆರೋಗ್ಯ, ವಸತಿ ಮತ್ತು ಆಶ್ರಯ, ಘನತ್ಯಾಜ್ಯ ವಿಲೇವಾರಿ, ಸುರಕ್ಷತೆ ಮತ್ತು ಭದ್ರತೆ, ಮನರಂಜನೆ, ಆರ್ಥಿಕ ಅಭಿವೃದ್ಧಿ ಮಟ್ಟ, ಪರಿಸರ, ಹಸಿರು ಕಟ್ಟಡ ಹಾಗೂ ನಗರ ಸ್ಥಿತಿಸ್ಥಾಪಕತ್ವ ಸೇರಿ ಒಟ್ಟು 97 ದತ್ತಾಂಶಗಳನ್ನು ಒಳಗೊಂಡಂತೆ ಗುಣಮಟ್ಟದ ಜೀವನ, ಆರ್ಥಿಕ ಸಾಮರ್ಥ್ಯ ಹಾಗೂ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದರ ಬಗ್ಗೆ ಸಾರ್ವಜನಿಕರು ಫೆ. 29ರವರೆಗೆ ಠಿಠಿ:/ಞಟ್ಝಜ್ಛಿಜಿ.ಞಟಜ್ಠ.ಜಟ.ಜ್ಞಿ ಪೋರ್ಟ್‌ಲ್, ಠಿಠಿ:/ಛಿಟ್ಝ2019.ಟ್ಟಜ/ಇಜಿಠಿಜ್ಢಿಛ್ಞ್ಛಿಛಿಛಿಚಿಚ್ಚ ಲಿಂಕ ಮೂಲಕ ಅಥವಾ ಪೇಸ್ಬುಕ್ ಬಳಕೆದಾರರು ಃಛಿಛಿಟ್ಛ್ಝಜಿಜ್ಞಿಜ2019 ಟ್ವೀಟ್ ಮಾಡುವುದಾದರೇ ಃಛಿಛಿಟ್ಛ್ಝಜಿಜ್ಞಿಜ19, ಃಟಏಖಿಅ ಹಾಗೂ ಃಖಞಚ್ಟಠಿಇಜಿಠಿಜಿಛಿಜಿಜಿಟ್ಞ ಮೂಲಕ ಜನರು ಫೀಡಬ್ಯಾಕ್ ನೀಡಬಹುದು.

    ರಾಜ್ಯದ ಉಳಿದ ನಗರಗಳಿಗೆ ಹೋಲಿಸಿದರೆ ಬೆಳಗಾವಿ ಸ್ಮಾರ್ಟ್ ಸಿಟಿಗೆ ಅತಿ ಕಡಿಮೆ ಪ್ರತಿಕ್ರಿಯೆ ಬಂದಿವೆ. ಫೇಸ್‌ಬುಕ್, ಟ್ವಿಟ್ಟರ್ ಹಾಗೂ ವೆಬ್‌ಸೈಟ್ ಮೂಲಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪ್ರತಿಕ್ರಿಯೇ ನೀಡಬೇಕು. ಅಂದಾಗ ಮಾತ್ರ ಸಮೀಕ್ಷೆ ಅರ್ಥಪೂರ್ಣವಾಗಿ, ಮುಂದಿನ ಕ್ರಮಕ್ಕೆ ಅನುಕೂಲವಾಗಲಿದೆ.
    | ಶಶಿಧರ್ ಕುರೇರ್ ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್ ಸಿಟಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts