More

    ಪಾಕ್‌ ಪರ ಘೋಷಣೆ ಕೂಗಿದವರು ದೇಶದ್ರೋಹಿಗಳು, ಗುಂಡಿಕ್ಕಿ ಕೊಲ್ಲಬೇಕು: ಪ್ರಮೋದ್ ಮುತಾಲಿಕ್

    ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳು ದೇಶ ದೇಶದ್ರೋಹಿಗಳು. ಇವರನ್ನು ಬಂಧಿಸಬಾರದು, ಗುಂಡಿಕ್ಕಿ ಕೊಲ್ಲಬೇಕು ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಒತ್ತಾಯಿಸಿದರು.

    ಇದನ್ನೂ ಓದಿ:ಲೋಕ ಸಮರ: ಮಾರ್ಚ್​ 10ರೊಳಗೆ ಕಾಂಗ್ರೆಸ್ ಮೊದಲ ಪಟ್ಟಿ​? ಕಾಂಗ್ರೆಸ್‌ನ ಸಂಭಾವ್ಯರ ಪಟ್ಟಿ ರೆಡಿ, ಯಾರಿಗೆಲ್ಲ ಟಿಕೆಟ್‌?

    ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ಇರುವ ಕೀಲುಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ್ರೋಹ ಕ್ಯಾನ್ಸರ್ ಇದ್ದಹಾಗೆ. ಅದಕ್ಕೆ ಔಷಧ ಇಲ್ಲ, ಮುಲಾಮಿಲ್ಲ. ಅದನ್ನು ಆಪರೇಷನ್ ಮಾಡಬೇಕು. ಇಲ್ಲವಾದರೆ ದೇಶದ ತುಂಬ ಹರಡುತ್ತದೆ ಎಂದು ಟೀಕಿಸಿದರು.

    ಮುಸ್ಲಿಂ ಸಮುದಾಯದ ಜನರಿಂದಲೇ ಗೆದ್ದಿದ್ದೇವೆ ಅನ್ನೋ ಅಹಂಕಾರದಿಂದಲೇ ಅವರು ಏನು ಬೇಕಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ 10 ಸಾವಿರ ಕೋಟಿ ಮುಸ್ಲಿಂ ಅಭಿವೃದ್ದಿಗೆ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಮುಸ್ಲಿಂ ಕುಮ್ಮುಕ್ಕು ಸಿಗುತ್ತಿರುವುದರಿಂದ ವಿಧಾನಾಸೌಧ ಒಳಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಅಹಂಕಾರ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಬಾಂಬ್ ಸ್ಫೋಟ ಪೂರ್ವ ಯೋಜಿತ: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪೂರ್ವ ಯೋಜಿತವಾಗಿದೆ. ಬಾಂಬ್ ತಯಾರಿ ಮಾಡಿರುವುದರ ಹಿಂದೆ ಒಬ್ಬ ವ್ಯಕ್ತಿ ಅಲ್ಲ, ಒಂದು ತಂಡ ಮತ್ತು ಸಂಘಟನೆಯ ಕೈವಾಡ ಇದೆ. ಸರ್ಕಾರ ಹಾಗೂ ವಿರೋಧ ಪಕ್ಷದವರು ಬಾಯಿ ಮುಚ್ಚಿಕೊಂಡಿರಿ. ಪೊಲೀಸರಿಗೆ ಮುಕ್ತ ಅವಕಾಶ ಕೊಡಿ. 24 ಗಂಟೆಯಲ್ಲಿ ಬಂಧಿಸುತ್ತಾರೆ. ಎಫ್​ಎಸ್​ಎಲ್ ವರದಿ ತಿರುಚಲಾಗುವುದಿಲ್ಲ. ಮಾದ್ಯಮದವರಿಗೆ ಸಿಕ್ಕ ಹಾಗೂ ಖಾಸಗಿ ಎಫ್​ಎಸ್​ ಎಲ್​ಗೆ ಕೊಟ್ಟರೆ ಇವರ ಸತ್ಯಾಂಶ ಹೊರ ಬರಲಿದೆ ಎಂದು ಹೇಳಿದರು.

    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ಮೋದಿ ಗೆಲ್ಲಿಸಿ ದೇಶ ಉಳಿಸಿ ಅನ್ನೋ ಅಭಿಯಾನ ರಾಜ್ಯದಲ್ಲಿ ಕೈಗೊಂಡಿದ್ದೇನೆ. ಹಾಗಾಗಿ ಇಂದು ಕೋಲಾರದಲ್ಲಿ ಅಭಿಯಾನ ಮಾಡಲಿದ್ದೇನೆ ಎಂದ ಪ್ರಮೋದ್ ಮುತಾಲಿಕ್ ಹೇಳಿದರು.

    ಮುಜರಾಯಿ ದೇಗುಲಗಳ ಹಣವನ್ನು ಬೇರೆ ಯಾರಿಗೂ ಕೊಡಲ್ಲ, ಹಿಂದೂ ದೇಗುಲಳಿಗೆ ಮಾತ್ರ ಕೊಡುವುದಾಗಿ ಇಲಾಖೆ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಎ, ಬಿ ದರ್ಜೆಯ ದೇಗುಲ ಅರ್ಚಕರಿಗೆ ತಿಂಗಳಿಗೆ 5 ಸಾವಿರ ವೇತನ ಕೊಡಲಾಗುತ್ತಿದೆ. ಈ ಹಣ ಹೂವು, ಹಣ್ಣು, ಎಣ್ಣೆ, ಬತ್ತಿ ಖರೀದಿಗೂ ಸಾಧ್ಯವಾಗುವುದಿಲ್ಲ. ಅವರ ಉಪಜೀವನ ಹೇಗೆ ಸಾಧ್ಯ? ಆದರೆ, ಒಬ್ಬ ಮೌಲ್ವಿಗೆ ಸರಕಾರ 1 ಲಕ್ಷ ಕೊಡುತ್ತಿದೆ. ಏಕಿಷ್ಟು ತಾರತಮ್ಯ ವೋಟಿಗಾಗಿ ಮುಸ್ಲಿಂ ತುಷ್ಟೀಕರಣವೇ? ದೇವಸ್ಥಾನದ ಹುಂಡಿ ಹಣ ದೇಗುಲಗಳಿಗೆ ಕೊಡುವುದನ್ನು ಬಿಟ್ಟು ಸ್ವಾರ್ಥಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

    ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts