More

    ಸಾಮರ್ಥ್ಯ-ಸಮತೋಲನಕ್ಕೆ ಸವಾಲು, ಈ ಯೋಗಾಸನ! ಭುಜಕ್ಕೆ ಶಕ್ತಿ ನೀಡುವ ಭಂಗಿ

    ಮುಂದುವರೆದ ಮಟ್ಟದ ಯೋಗವಿನ್ಯಾಸಗಳಲ್ಲಿ ಒಂದಾದ ವಿಶಿಷ್ಟ ಆಸನವೆಂದರೆ ಪಾರ್ಶ್ವ ಭುಜ ದಂಡಾಸನ. ಇದಕ್ಕೆ ಡ್ರಾಗನ್​ ಫ್ಲೈ ಭಂಗಿ ಎಂದು ಕರೆಯಲಾಗುತ್ತದೆ. ದೇಹದ ತಿರುಚುವಿಕೆ, ಸಾಮರ್ಥ್ಯ ಮತ್ತು ಸಮತೋಲನಕ್ಕೆ ಸವಾಲು ಹಾಕುವ ಭಂಗಿ ಇದಾಗಿದೆ. ಇದನ್ನು ಬೇರೆ ಬೇರೆ ವಿಧಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ.

    ಪ್ರಯೋಜನಗಳು: ಈ ಆಸನದ ಅಭ್ಯಾಸದಿಂದ ವಿಶೇಷವಾಗಿ ಭುಜಗಳ ಶಕ್ತಿ ಹೆಚ್ಚುತ್ತದೆ. ಈ ಆಸನವನ್ನು ಯೋಗಿಗಳು ತಮ್ಮ ಆಂತರಿಕ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ದೇಹದ ಅರಿವನ್ನು ಗೌಣವಾಗಿಸಲು ಮಾಡುತ್ತಾರೆ. ಇದನ್ನು ಅತ್ಯಂತ ಸ್ವಚ್ಛಗೊಳಿಸುವ ಭಂಗಿ ಎಂದೂ ಹೇಳಲಾಗಿದೆ. ಆತ್ಮವಿಶ್ವಾಸ ಹೆಚ್ಚಿಸುತ್ತದೆ.

    ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಕಾಲು ಚಾಚಿ ಕುಳಿತುಕೊಳ್ಳುವುದು. ಕೈಗಳನ್ನು ಪಕ್ಕಕ್ಕೆ ಒತ್ತಿಟ್ಟು, ಒಂದು ಕಾಲನ್ನು ನೇರವಾಗಿ ಚಾಚಿ ಮತ್ತೊಂದು ಕಾಲನ್ನು ತೋಳಿನ ಮೇಲಿಟ್ಟು ಸಮತೋಲನ ಸಾಧಿಸುವುದು. ಸ್ವಲ್ಪ ಹೊತ್ತು ಹಾಗೇ ಇದ್ದು, ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಬರುವುದು. ನಂತರ ಕಾಲುಗಳನ್ನು ಚಾಚಿ ಕುಳಿತು ವಿಶ್ರಮಿಸುವುದು. ಈ ಆಸನವನ್ನು ಕರಗತ ಮಾಡಿಕೊಳ್ಳಲು ತಾಳ್ಮೆ ಇರಬೇಕು. ಯೋಗ ಗುರುಗಳ ಮಾರ್ಗದರ್ಶನದಲ್ಲಿ ಕಲಿತರೆ ಒಳ್ಳೆಯದು.

    ಯಾವುದೇ ಮಕ್ಕಳಿಗೆ ಶಾಲೆಯಲ್ಲಿ ಸೋಂಕು ತಗುಲಿಲ್ಲ: ಶಿಕ್ಷಣ ಸಚಿವ ನಾಗೇಶ್​

    ಕಿಬ್ಬೊಟ್ಟೆಗೆ ವ್ಯಾಯಾಮ, ಬೆನ್ನೆಲುಬಿಗೆ ಶಕ್ತಿ ನೀಡುವ ‘ಏಕಪಾದ ಕೌಂಡಿನ್ಯಾಸನ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts