More

    ಸ್ತ್ರೀಯರ ಗರ್ಭಾಶಯದ ಆರೋಗ್ಯಕ್ಕೆ ಪೂರಕ; ಪುರುಷರಿಗೂ ಉಪಯುಕ್ತ – ‘ವಿಸ್ತೃತ ಪಾದಾಸನ’

    ಸ್ತ್ರೀಯರ ಗರ್ಭಾಶಯದ ಆರೋಗ್ಯಕ್ಕೆ ಪೂರಕವಾದ, ಋತುಚಕ್ರದ ದೋಷಗಳನ್ನು ನಿವಾರಣೆ ಮಾಡುವ ಯೋಗಾಸನವೆಂದರೆ, ‘ವಿಸ್ತೃತ ಪಾದಾಸನ’. ಪುರುಷರ ಜನನಾಂಗದ ಸುಸ್ಥಿತಿಗೂ ಈ ಆಸನದ ಅಭ್ಯಾಸ ಉತ್ತಮವಾದುದು.

    ಪ್ರಯೋಜನ : ಗರ್ಭಾಶಯದ ಆರೋಗ್ಯ ವೃದ್ಧಿಗೊಂಡು ಋತುಚಕ್ರದ ಏರುಪೇರು ನಿಯಂತ್ರಣ. ಉದರದ ಅಂಗಾಂಗಗಳಿಗೆ ಉತ್ತಮ ವ್ಯಾಯಾಮ ದೊರಕಿ ಉದರದ ಸ್ನಾಯುಗಳು ಬಲಿಷ್ಠಗೊಳ್ಳುತ್ತವೆ. ಬೆನ್ನಿನ ಹುರಿ ಬಲಗೊಂಡು ಬೆನ್ನು ನೇರವಾಗಿಸಲು ಸಹಾಯಕವಾಗುತ್ತದೆ. ಮಹಿಳೆಯರ ಗೈನಾಕ್​ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕರುಳು ಬಲಯುತ. ಮಲಬದ್ಧತೆ ನಿವಾರಣೆ, ತೋಳು ಭುಜ ಬಲಗೊಳ್ಳುತ್ತದೆ. ಸ್ತ್ರೀಯರ ಹಾಗೂ ಪುರುಷರ ಜನನಾಂಗಗಳ ಸುಸ್ಥಿತಿ ಉಂಟಾಗುತ್ತದೆ. ತೊಡೆಗಳ ಕೊಬ್ಬು ಕರಗುತ್ತದೆ.

    ಇದನ್ನೂ ಓದಿ: ‘ಜವಾನ್​’ ಆದ ಶಾರೂಖ್​ ಖಾನ್​; ಪುಣೆಯಲ್ಲಿ ಚಿತ್ರೀಕರಣ ಪ್ರಾರಂಭ

    ವಿಧಾನ : ಜಮಖಾನದಲ್ಲಿ ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ. ಕೈಗಳ ಸಹಾಯದಿಂದ ಕಾಲುಗಳನ್ನು ಒಳಗಡೆ ಮಡಿಚಿರಿ. ಕೈಗಳ ಬೆರಳುಗಳಿಂದ ಕಾಲಿನ ಹೆಬ್ಬೆರಳುಗಳನ್ನು ಹಿಡಿದು, ಸ್ವಲ್ಪ ಮೇಲಕ್ಕೆತ್ತಿ ವಿಸ್ತರಿಸಿ. ಬೆನ್ನನ್ನು ಆದಷ್ಟೂ ನೇರವಾಗಿಸಿ, ಕಾಲುಗಳನ್ನು ಆದಷ್ಟೂ ಅಗಲವಾಗಿಸಿ. ಈ ಸ್ಥಿತಿಯಲ್ಲಿ, ದೃಷ್ಟಿ ನೇರವಾಗಿ ಒಂದೇ ಕಡೆ ಕೇಂದ್ರೀಕರಿಸಿ, ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಿರಿ. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ. ಪ್ರಯಾಸ ಪಡಬೇಡಿ. ಎರಡು ಬಾರಿ ಅಭ್ಯಾಸ ನಡೆಸಿ. ವಿಶ್ರಾಂತಿ ಪಡೆಯಿರಿ.

    ಸ್ಲಿಪ್ ಡಿಸ್ಕ್, ಸಯಾಟಿಕ ಇರುವವರು ವಿಸ್ತೃತ ಪಾದಾಸನದ ಅಭ್ಯಾಸ ಮಾಡಬಾರದು. ಅಭ್ಯಾಸ ಮಾಡುವಾಗ ನಿಧಾನವಾಗಿ ಜಾಗರೂಕತೆಯಿಂದ ಅಭ್ಯಾಸ ನಡೆಸಬೇಕು. ಆರಂಭಿಕವಾಗಿ ಮಾಡಲು ಕಷ್ಟವಾಗುವವರು ಗೋಡೆಗೆ ಒರಗಿಕೊಂಡು ಅಭ್ಯಾಸ ನಡೆಸಬಹುದು.

    ಒತ್ತಡ ನಿಯಂತ್ರಣಕ್ಕೆ ‘ವಜ್ರಾಸನದಲ್ಲಿ ಪರ್ವತಾಸನ’ ಮಾಡಿ!

    ಭೂವಿವಾದಗಳಿಗೆ ತಲೆ ಹಾಕಬೇಡಿ: ಖಾಕಿಪಡೆಗೆ ಸಿಎಂ ಫರ್ಮಾನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts