More

    ಹೊಟ್ಟೆಯ ಕೊಬ್ಬು ಕರಗಿಸಲು ಉಪಯುಕ್ತ ಈ ಯೋಗಾಸನ! ಮಧುಮೇಹ, ಮಲಬದ್ಧತೆ ನಿಯಂತ್ರಣಕ್ಕೂ ಸಹಕಾರಿ

    ಪೂರ್ಣ ಮತ್ಸ್ಯೇಂದ್ರಾಸನವು ಬೆನ್ನುಮೂಳೆಯನ್ನು ಪೂರ್ಣವಾಗಿ ತಿರುಚುವ ಭಂಗಿಯಾಗಿದೆ. ಇದು ಅರ್ಧ ಮತ್ಸ್ಯೇಂದ್ರಾಸನದ ಆಳವಾದ ಆವೃತ್ತಿಯಾಗಿದೆ. ಇದು ಕುಳಿತುಕೊಂಡು ಮಾಡಲಾಗುವ ಯೋಗಾಸನ. ಈ ಆಸನದ ಅಭ್ಯಾಸವು ತೋಳುಗಳು, ಕಾಲುಗಳು, ಸೊಂಟ, ಹೊಟ್ಟೆ ಮತ್ತು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ. ಇದನ್ನು ಫುಲ್​ ಸ್ಪೈನಲ್ ಟ್ವಿಸ್ಟ್ ಪೋಸ್​ ಎಂದು ಕರೆಯಬಹುದು.

    ಪ್ರಯೋಜನಗಳು: ಇದು ದೇಹದ ಬಿಗಿತವನ್ನು ಕಡಿಮೆ ಮಾಡಲು ಮತ್ತು ದೇಹದ ನಮ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎದೆ, ಹೃದಯ, ಶ್ವಾಸಕೋಶದ ಸಮಸ್ತ ಭಾಗಗಳು ಬಲಿಷ್ಠವಾಗುತ್ತವೆ. ದುಂಡಗಿನ ಭುಜಗಳ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದು ಕಿಬ್ಬೊಟ್ಟೆಯ ಅಂಗಗಳಿಗೆ ಅತ್ಯುತ್ತಮ ಮಸಾಜ್​ ಒದಗಿಸುತ್ತದೆ. ಮಧುಮೇಹ, ಅಜೀರ್ಣ, ಸಂಧಿವಾತ ಮತ್ತು ಮಲಬದ್ಧತೆಯಂತಹ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಹಕಾರಿ ಎಂದು ಕಂಡುಬಂದಿದೆ.

    ಇದನ್ನೂ ಓದಿ: ಅಚ್ಚರಿಯಾಗುವಂತೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ, ಈ ಯೋಗಾಸನ!

    ಈ ಭಂಗಿಯು ಕಿಬ್ಬೊಟ್ಟೆಯ ಪ್ರದೇಶದಲ್ಲಿ ಸಾಕಷ್ಟು ತಿರುಚುವಿಕೆ ಮತ್ತು ಸಂಕುಚಿತತೆಯನ್ನು ನೀಡುತ್ತದೆ. ಭಂಗಿಯ ನಿಯಮಿತ ಅಭ್ಯಾಸವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಸನವು ಕರುಳಿಗೆ ಸಹ ಪ್ರಯೋಜನಕಾರಿಯಾಗಿದೆ. ಮೂತ್ರಜನಕಾಂಗದ ಗ್ರಂಥಿಗಳು, ಮೂತ್ರಪಿಂಡಗಳು, ಗುಲ್ಮ ಮತ್ತು ಯಕೃತ್ತಿನ ಉತ್ತಮ ಆರೋಗ್ಯಕ್ಕೆ ಇದು ಪೂರಕವಾಗಿದೆ.

    ಅಭ್ಯಾಸಕ್ರಮ: ದಂಡಾಸನದಲ್ಲಿ ಕುಳಿತು ಅರ್ಧಪದ್ಮಾಸನ ಮಾಡುವುದು. ಮೊದಲಿಗೆ ಬಲಗಾಲನ್ನು ಎಡಗಾಲಿನ ತೊಡೆಯ ಮೇಲಿರಿಸಿ. ಎಡಗಾಲನ್ನು ಬಲಮಂಡಿಯ ಪಕ್ಕದಲ್ಲಿರಿಸಬೇಕು. ಬಲಗೈಯಿಂದ ಎಡಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳುವುದು. ಎಡಗೈಯನ್ನು ಎತ್ತಿ ನೇರವಾಗಿ ಹಿಂದಕ್ಕೆ ಚಾಚಿ, ಎಡತೊಡೆಯನ್ನು ಹಿಡಿದುಕೊಳ್ಳಬೇಕು. ಕತ್ತನ್ನು ಹಿಂದಕ್ಕೆ ತಿರುಗಿಸಿ ದೃಷ್ಟಿ ನೇರವಾಗಿರಿಸುವುದು. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಕಾಲುಗಳನ್ನು ಬಿಡಿಸಿ ಸಹಜ ಸ್ಥಿತಿಗೆ ಬರುವುದು.

    ಅತಿಯಾದ ಸೊಂಟ ನೋವು ಅಥವಾ ಬೆನ್ನು ನೋವು ಇರುವವರು ಈ ಆಸನವನ್ನು ಮಾಡಬಾರದು. ಇದನ್ನು ಯೋಗಗುರುಗಳ ಮಾರ್ಗದರ್ಶನದಲ್ಲಿ ಕಲಿತು ಮಾಡುವುದು ಸೂಕ್ತ.

    ನಗರದ ವಿದ್ಯಾರ್ಥಿಗೆ ಕರೊನಾ ಪಾಸಿಟೀವ್​; ಶಾಲೆ ಭಾಗಶಃ ಬಂದ್​

    ‘ಇದು ಹೋಗುವ ವಯಸ್ಸಾಗಿರಲಿಲ್ಲ’ …ಅಪ್ಪು ಅಗಲಿಕೆಗೆ ಗಣ್ಯರ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts