More

    ಸೊಂಟ ಮತ್ತು ಬೆನ್ನು ನೋವಿಗೆ ರಾಮಬಾಣ, ಈ ಯೋಗಾಸನ!

    ಆಧುನಿಕ ಜೀವನಶೈಲಿಯಿಂದ ಉಂಟಾಗುವ ಸೊಂಟ ನೋವು, ಬೆನ್ನು ನೋವುಗಳಿಗೆ ಪರಿಹಾರ ನೀಡುವ ಯೋಗಾಸನಗಳಲ್ಲಿ ‘ಶಲಭಾಸನ’ವೂ ಒಂದು. ಈ ಆಸನದ ನಿಯಮಿತ ಅಭ್ಯಾಸದಿಂದ ಬೆನ್ನಿನ ಕೆಳಭಾಗದ ಸ್ನಾಯುಗಳು ಬಲಗೊಳ್ಳುತ್ತವೆ.

    ಪ್ರಯೋಜನಗಳು: ಬೆನ್ನಿನ ಕೆಳಭಾಗದ ಸ್ನಾಯುಗಳು ಹದಗೊಳ್ಳುತ್ತವೆ. ಬೆನ್ನು, ಸೊಂಟ ಮತ್ತು ತೊಡೆಗಳು ಬಲಗೊಳ್ಳುತ್ತವೆ. ಮಧುಮೇಹ ನಿಯಂತ್ರಣಕ್ಕೆ ಈ ಆಸನ ಸಹಕಾರಿ. ಭುಜ ಮತ್ತು ಕುತ್ತಿಗೆಯ ಸ್ನಾಯುಗಳು ಬಲಗೊಳ್ಳುತ್ತವೆ. ಮೂತ್ರಜನಕಾಂಗಗಳು ಸಚೇತನಗೊಳ್ಳುತ್ತವೆ. ಮೂಲಾಧಾರ ಮತ್ತು ಮಣಿಪುರ ಚಕ್ರಗಳ ಸುಸ್ಥಿತಿಗೆ ಇದು ಸಹಕಾರಿ.

    ಇದನ್ನೂ ಓದಿ: ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!

    ಅಭ್ಯಾಸಕ್ರಮ: ಜಮಖಾನದ ಮೇಲೆ ಮಕರಾಸನದಲ್ಲಿ ಮಲಗಬೇಕು. ಕಾಲುಗಳನ್ನು ಜೋಡಿಸಿ, ಕೈಗಳನ್ನು ಗಲ್ಲಕ್ಕೆ ಇಟ್ಟುಕೊಂಡು ಹಾಯಾಗಿರಬೇಕು. ಸೊಂಟದ ಕೆಳಭಾಗದಿಂದ ಎರಡೂ ಕಾಲುಗಳನ್ನು ಸಾಧ್ಯವಾದಷ್ಟೂ ಮಡಿಸಿ ಪೃಷ್ಠದ ಕಡೆಗೆ ತರಬೇಕು. ಹೀಗೆ ಎರಡು ಮೂರು ಬಾರಿ ಮಡಿಸುವುದು, ಚಾಚುವುದು ಮಾಡಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುತ್ತಿರಬೇಕು. ಆಮೇಲೆ ಉಸಿರನ್ನು ಬಿಡುತ್ತಾ ಮಕರಾಸನಕ್ಕೆ ಹಿಂತಿರುಗಿ ವಿರಮಿಸಬೇಕು.

    ಸೊಂಟ ಅಥವಾ ಬೆನ್ನು ನೋವು ಇರುವವರು ದಿನಕ್ಕೆ 2-3 ಬಾರಿ ಶಲಭಾಸನವನ್ನು ಅಭ್ಯಾಸ ಮಾಡಬೇಕು. ಆದರೆ ಹೃದಯದ ಸಮಸ್ಯೆ ಇರುವವರು ಈ ಆಸನ ಮಾಡಬಾರದು.

    ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ

    ತಾಲಿಬಾನ್​​ಗೆ ಶುಭಾಶಯ ಕೋರಿದ ಅಲ್​ಖೈದಾ! ಕಾಶ್ಮೀರದ ಬಗ್ಗೆ ನಾಲಿಗೆ ಹರಿಬಿಟ್ಟ ಆತಂಕವಾದಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts