More

    ‘ಬಿಜೆಪಿ ಗೆದ್ದರೆ ಇದೇ ಕೊನೆಯ ಚುನಾವಣೆ’

    ಮಡಿಕೇರಿ:

    ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಇದೆ ಕೊನೆಯ ಚುನಾವಣೆ ಆಗಲಿದ್ದು,  ಜನಸಂಘದ ಧರ್ಮ ಸಂಸತ್ತಿನ ಆಡಳಿತ ಬರಲಿದೆ ಎಂದು ಸಮಾಜ  ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು. ಮಡಿಕೇರಿಯಲ್ಲಿ ಮಂಗಳವಾರ ‌ನಡೆದ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಮಾತನಾಡಿದರು.

    ಬುದ್ಧ, ಬಸವ, ಅಂಬೇಡ್ಕರ್ ಪ್ರಜಾಪ್ರಭುತ್ವವಾದಿಗಳು‌ ಮತ್ತು ಜನಪರ ನಾಯಕರು. ಬಲಾಢ್ಯರಿಂದ ಬಲಹೀನರಿಗೆ ಶಕ್ತಿ ತುಂಬುವ ಆಡಳಿತ ವ್ಯವಸ್ಥೆಗೆ ಒತ್ತು ಕೊಟ್ಟ ನಾಯಕರು ಇವರು. ಈ ವ್ಯವಸ್ಥೆ ಹಾಳು ಮಾಡಲು ಕೋಮುಶಕ್ತಿ ಪ್ರಯತ್ನ ಮಾಡುತ್ತಿದೆ.

    ಅಂಬೇಡ್ಕರ್ ಪ್ರಪಂಚದಲ್ಲೇ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಇಂತಹ ಸಂವಿಧಾನಕ್ಕೆ ಕೋಮುವಾದ ಬಿಜೆಪಿಯಿಂದ ಅಪಾಯ ಇದೆ‌. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದೇ ಗುರಿ ಎಂದು ಇವರ ಆಡಳಿತ ನೋಡಿದರೆ ಸ್ಪಷ್ಟವಾಗುತ್ತದೆ.

    ಭಾರತ ಮೊಘಲರು, ಬ್ರಿಟಿಷರ ಅವಧಿಯಲ್ಲಿ ಮುಸ್ಲಿಮ್ ಅಥವಾ ಕ್ರೈಸ್ತ ರಾಷ್ಟ್ರವಾಗಬೇಕಿತ್ತು. ಆದರೆ  ಭಾರತ ಭಾರತವಾಗಿಯೆ ಉಳಿದಿದೆ. ವ್ಯಕ್ತಿ ಪೂಜೆ ಸರ್ವಾಧಿಕಾರಿಯನ್ನು ನಿರ್ಮಾಣ ಮಾಡುತ್ತದೆ. ಇದು ಪ್ರಜಾಪ್ರಭುತ್ವ ನಾಶಮಾಡುತ್ತದೆ. ಮೋದಿ ಮೋದಿ ಎನ್ನುವುದನ್ನು ಬಿಟ್ಟರೆ ಸರ್ಕಾರದ ಸಾಧನೆ ಇಲ್ಲ. ಸಂವಿಧಾನ ಉಳಿಯದೇ ಹೋದರೆ ನಾವು ಉಳಿಯುವುದಿಲ್ಲ. ಮನುವಾದ ನಮ್ಮನ್ನು ಗುಲಾಮಗಿರಿಗೆ ತಳ್ಳುತದೆ. ಪ್ರಜಾಪ್ರಭುತ್ವ ನಾಶದ ಅಂಚಿಗೆ ಹೋಗುತ್ತಿದೆ. ಕಾಂಗ್ರೆಸ್ ಸರ್ಕಾರ ಸಂವಿಧಾನದ ತಂಟೆಗೆ ಬಂದಿಲ್ಲ. ವಾಜಪೇಯಿ ಸಂವಿಧಾನ ಪರಾಮರ್ಶೆ ಮಾಡಬೇಕು ಎಂದಾಗ ನಾವೆಲ್ಲ ಪ್ರತಿಭಟನೆ ಮಾಡಿದೆವು.

    ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾ‌ನ ನಮ್ಮನ್ನು ರಕ್ಷಿಸುತ್ತದೆ.  ಬಿಜೆಪಿ- ಜೆಡಿಎಸ್ ಒಂದಾಗಿದ್ದಾರೆ. ಗ್ಯಾರಂಟಿ ರಾಜಕೀಯಕ್ಕೆ ಜಾರಿಗೆ ತಂದಿದ್ದಲ್ಲ‌. ಗ್ಯಾರಂಟಿ ಸಂವಿಧಾನದ ಹಕ್ಕುಗಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುತ್ತದೆ. ಇದು ಪ್ರಜಾಪ್ರಭುತ್ವ ಅಳಿವು ಉಳಿವಿನ ಚುನಾವಣೆ ಎಂದರು.

    ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಗ್ಯಾರಂಟಿಯಿಂದ ಜನರ ಬದುಕು ಸುಧಾರಿಸಿದೆ. ಬಿಜೆಪಿಗೆ 400 ಸೀಟ್ ಬಂದರೆ ಇದೇ ಕೊನೆಯ ಚುನಾವಣೆ ಆಗಲಿದೆ ಎಂದರು.

    ಕೆಪಿಸಿಸಿ ಸದಸ್ಯ ನಂದಕುಮಾರ್ ಮಾತನಾಡಿ ಸಂವಿಧಾನ ಬದಲಾದರೆ ಮನುಸ್ಮೃತಿ ಜಾರಿಗೆ ಬರುತ್ತೆ. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು ಎಂದು ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಡಿಸಿಸಿ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥಕುಮಾರ್, ಡಿಸಿಸಿ ಪ್ರಚಾರ ಸಮಿತಿ‌ ಅಧ್ಯಕ್ಷ ಟಿ.ಪಿ.ರಮೇಶ್, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts