More

    ಕರೊನಾ ವಿರುದ್ಧ ದೃಢ ಸಂಕಲ್ಪ : ಚುನಾವಣೆ ಎದುರಿದ್ದರೂ ಈ ಹಳ್ಳಿ ಪೂರ್ಣ ಬಂದ್ !

    ಭೋಪಾಲ್ : ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಲವಂತವಾದ ಕರ್ಫ್ಯೂ, ಲಾಕ್​ಡೌನ್​ಗಳಿಂದ ಹಿಡಿದು ಜನರೇ ಮುಂದಾಗಿ ಮಾಡಬಹುದಾದ ಜನತಾ ಕರ್ಫ್ಯೂ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಕರ್ನಾಟಕದಲ್ಲೇ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಸೇರಿದ್ದನ್ನು ನಾವು ಕಂಡಿದ್ದೇವೆ. ಉಪಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶದ ದಾಮೋಹ್ ವಿಧಾನಸಭಾ ಕ್ಷೇತ್ರದಲ್ಲಿರುವ ಒಂದು ಹಳ್ಳಿ ಈ ವಿಷಯದಲ್ಲಿ ಮಾದರಿಯಾಗಿ ನಡೆದುಕೊಳ್ಳುತ್ತಿದೆ.

    ದಾಮೋಹ್​ನಲ್ಲಿ ಇನ್ನೆರಡು ದಿನಗಳಲ್ಲಿ ಮತದಾನವಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್​ನ ಭಾರೀ ಪ್ರಚಾರ ಸಭೆಗಳು ಕ್ಷೇತ್ರದ ಎಲ್ಲೆಡೆ ನಡೆಯುತ್ತಿವೆ. ಆದರೆ, ಜಿಲ್ಲೆಯ ಹಟ್ಟ ತಹಸೀಲ್​​ ವ್ಯಾಪ್ತಿಯಲ್ಲಿರುವ ಹಿನೋಟಾ ಕಲನ್ ಎಂಬ ಗ್ರಾಮದ ಜನರು ಮಾತ್ರ ಕರೊನಾ ಸಂದರ್ಭದಲ್ಲಿ ಚುನಾವಣೆಯ ಪ್ರಚಾರದ ಬಿಸಿ ತಾಕದಂತೆ ಎಚ್ಚರ ವಹಿಸಿದ್ದಾರೆ. ಸುಮಾರು 3,500 ನಿವಾಸಿಗಳುಳ್ಳ ಈ ಹಳ್ಳಿಗೆ ಹಳ್ಳಿಯೇ ಬಾಗಿಲು ಮುಚ್ಚಿ ಕುಳಿತಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

    ಇದನ್ನೂ ಓದಿ: ‘ಮನೆಯಲ್ಲೇ ಇದ್ದರೂ ಕರೊನಾ ಸೋಂಕು ಹೇಗೆ ತಗುಲಿತು ?’ – ನಟ ರಾಹುಲ್ ರಾಯ್ ಪ್ರಶ್ನೆ!

    ರಸ್ತೆಗಳೆಲ್ಲಾ ಖಾಲಿ, ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಮತ್ತು ಗ್ರಾಮಸ್ಥರೆಲ್ಲ ಮನೆಯಲ್ಲೇ ದಿಗ್ಬಂಧನ ಮಾಡಿಕೊಂಡಿದ್ದಾರೆ. ನೆರೆಯ ಲಕ್ಷ್ಮಣ ಕೂಟಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಯುತ್ತಿದ್ದು, ಸಂಸದ ಜ್ಯೋತಿರಾದಿತ್ಯ ಸಿಂಧ್ಯ ಅವರ ಕಾರ್ಯಕ್ರಮ ನಿಗದಿಯಾಗಿವೆ. ಆದರೆ ಹಟ್ಟ ಬ್ಲಾಕ್​ನ ಬಿಜೆಪಿ ಉಪಾಧ್ಯಕ್ಷರಾಗಿರುವ ನರೇಂದ್ರ ಚೋಕರಿಯಾ ತಮ್ಮ ಹಳ್ಳಿಯಿಂದ ಜನರನ್ನು ಕರೆದುಕೊಂಡು ಹೋಗಿಲ್ಲ. “ನನ್ನ ಪಕ್ಷದ ಬಗ್ಗೆ ನನಗೆ ನಿಷ್ಠೆ ಇದೆ. ಆದರೆ, ಜನಜಂಗುಳಿಯಲ್ಲಿ ಭಾಗವಹಿಸಿ ಕರೊನಾ ಅಪಾಯಕ್ಕೆ ಒಡ್ಡಿಕೊಳ್ಳಿ ಎಂದು ನಾನು ಜನರಿಗೆ ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ. ಇದೇ ರೀತಿ ಕಾಂಗ್ರೆಸ್ ನಾಯಕರು ಕೂಡ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್ ಅವರ ಸಭೆಗಳು ಏರ್ಪಾಟಾದಾಗ ಹಿನೋಟಾ ಕಲನ್​​ನಿಂದ ಜನರನ್ನು ಕರೆದುಕೊಂಡುಹೋಗಲಿಲ್ಲ ಎನ್ನಲಾಗಿದೆ.

    ಏಪ್ರಿಲ್ 7 ಕ್ಕೆ ಮಧ್ಯಪ್ರದೇಶ ಸರ್ಕಾರ ಎಲ್ಲಾ ನಗರ ಪ್ರದೇಶಗಳಲ್ಲಿ ವೀಕೆಂಡ್ ಲಾಕ್​ಡೌನ್ ಘೋಷಿಸಿದ್ದು, ದಾಮೋಹ್​ನಲ್ಲಿ ಮಾತ್ರ ನಿರ್ಣಯವನ್ನು ಚುನಾವಣಾ ಆಯೋಗಕ್ಕೆ ಬಿಟ್ಟಿತ್ತು. ಏಪ್ರಿಲ್ 17 ರಂದು ಮತದಾನ ನಿಗದಿಯಾಗಿದ್ದು, ಚುನಾವಣಾ ಪ್ರಚಾರ ಸಭೆಗಳು ಭಾರೀ ಬಿರುಸಿನಿಂದ ಸಾಗಿವೆ. ಆದರೆ, ಗ್ರಾಮದಲ್ಲೇ ನಾಲ್ಕು ಕರೊನಾ ಸಂಬಂಧಿಸಿದ ಸಾವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಹಳ್ಳಿಯ ಮುಖಂಡ ಗಜೇಂದ್ರ ಸಿಂಗ್ ಅವರ ಮುಂದಾಳತ್ವದಲ್ಲಿ ಗ್ರಾಮಕ್ಕೆ ಗ್ರಾಮವೇ ಜನತಾ ಕರ್ಫ್ಯೂ ವಿಧಿಸಿಕೊಂಡಿದೆ! (ಏಜೆನ್ಸೀಸ್)

    ಅತಿಉದ್ದನೇ ಕೂದಲಿನ ಹಿರಿಮೆಯುಳ್ಳ ಯುವತಿಗೆ 12 ವರ್ಷಗಳಲ್ಲಿ ಮೊದಲನೇ ಹೇರ್​​ಕಟ್!

    ಇನ್ನು ರಾಜಧಾನಿಯಲ್ಲಿ ವೀಕೆಂಡ್​ ಕರ್ಫ್ಯೂ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts