More

    Video | ಇಷ್ಟ್​ ಚಿಕ್ ಹುಡುಗ ಸಾಯಿಸ್ತೀನಿ ಅಂದಿದ್ಯಾಕೆ!; ಈ ವಿಡಿಯೋ ನೋಡಿದ್ರೆ ನೀವು ಫಿದಾ ಆಗ್ತೀರಿ!

    ಬೆಂಗಳೂರು: ಮಕ್ಕಳೇನಾದರೂ ಕೆಟ್ಟ ಮಾತಾಡಿದರೆ ದೊಡ್ಡವರು ಸಿಟ್ಟಾಗುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ಸಾಯಿಸ್ತೀನಿ ಎಂದರೂ ಯಾರೂ ಸಿಟ್ಟಾಗಲಿಲ್ಲ. ಅಷ್ಟಕ್ಕೂ ಆತ ಹೇಳಿದ್ದೆಲ್ಲ ಸೆರೆಯಾಗಿರುವ ವಿಡಿಯೋ ತುಣುಕು ನೋಡಿದವರೂ ಅದನ್ನು ಕೇಳಿ ಖುಷಿಪಟ್ಟಿದ್ದಾರೆ.

    ಹೀಗೆ ತನ್ನ ಮಾತು ಹಾಗೂ ಎಕ್ಸ್​ಪ್ರೆಷನ್​ನಿಂದಲೇ ಎಲ್ಲರನ್ನೂ ಮೋಡಿ ಮಾಡಿರುವ ಈ ಪುಟ್ಟ ಪೋರನ ಹೆಸರು ಅನುಶ್ರುತ್​. ಎದುರಿಗಿದ್ದ ವ್ಯಕ್ತಿಯನ್ನು ‘ಅರೇ ಯಾರ್.. ಏನ್​ ಮಾಡ್ತಿದಿಯಾ, ಸಾಯಿಸ್ತೀನಿ ನಿಮ್ಮನ್ನ..’ ಎಂದು ಮುಖ ಕಿವುಚಿಕೊಂಡೇ ಆವಾಜ್​ ಹಾಕಿರುವ ಈ ವಿಡಿಯೋ ಈಗಾಗಲೇ ವೈರಲ್ ಆಗಿದೆ.

    ಅಂದಹಾಗೆ.. ಈ ಪೋರ ಹೀಗೆನ್ನಲು ಕಾರಣ ಕಟಿಂಗ್. ಸಲೂನ್​ಗೆ ಕರೆದೊಯ್ದ ತಂದೆ ಕಟಿಂಗ್​ಗೆ ಕೂರಿಸಿದ್ದು, ಅಂಗಡಿಯಾತನ ಕತ್ತರಿ ಪ್ರಯೋಗದಿಂದ ಒಂಥರ ಅನುಭವಕ್ಕೆ ಒಳಗಾದ ಅನುಶ್ರುತ್​, ‘ಅರೇ ಯಾರ್.. ಏನ್​ ಮಾಡ್ತಿದಿಯಾ..?’ ಎಂದು ಮೃದುವಾಗಿಯೇ ಗದರಿದ್ದಾನೆ. ಮಾತ್ರವಲ್ಲ ‘ನಿಮ್ಮನ್ನ ಸಾಯಿಸ್ತೀನಿ..’ ಎಂದಿದ್ದಾನೆ. ಪುಟ್ಟಪೋರನ ಈ ರಿಯಾಕ್ಷನ್​ಗಳನ್ನೆಲ್ಲ ಆತನ ತಂದೆ, ನಾಗಪುರದ ನಿವಾಸಿ ಅನೂಪ್​ ವಿಡಿಯೋ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರೆಲ್ಲ ಬಾಲಕನ ಪ್ರತಿಕ್ರಿಯೆಗೆ ಮಾರುಹೋಗಿದ್ದು, ವಿಡಿಯೋ ವೈರಲ್ ಆಗಿದೆ.

    ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.facebook.com/VVani4U/videos/679951292881129

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts