More

    ಈ ಸಲ ಶಾಲೆಗೆ ಡೊನೇಷನ್​ ನೀಡಬೇಡಿ, ಫೀಸು ಕೂಡ ಪೂರ್ತಿ ಕೊಡಬೇಡಿ..

    ಬೆಂಗಳೂರು: ಅಂತೂ ಇಂತೂ ಕೆಲವೊಂದು ತರಗತಿಗಳು ಆರಂಭಗೊಂಡಿರುವ ಬೆನ್ನಿಗೆ ಮಕ್ಕಳ ಶಾಲಾ ಶುಲ್ಕದ ಕುರಿತು ಪಾಲಕರಿಗಿರುವ ಪ್ರಮುಖ ಗೊಂದಲಕ್ಕೂ ಸ್ಪಷ್ಟನೆ ಸಿಕ್ಕಂತಾಗಿದೆ. ಅಂದರೆ ಪ್ರಸಕ್ತ ಸಾಲಿಗೆ ಶಾಲೆಯನ್ನು ಆರಂಭಿಸಿರುವ ಯಾವುದೇ ಪಠ್ಯಕ್ರಮದ ಶಿಕ್ಷಣ ಸಂಸ್ಥೆಗಳು ಕಳೆದ ಸಲಕ್ಕಿಂತ ಶೇ. 70 ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಶಿಕ್ಷಣ ಸಚಿವ ಎಸ್​.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈಗಾಗಲೇ ಕೆಲವು ಶಾಲೆಗಳಲ್ಲಿ ಶುಲ್ಕದ ವಿಚಾರದಲ್ಲಿ ವಿನಾಯಿತಿ ನೀಡಲಾಗಿದ್ದರೂ ಕೆಲವು ಪೋಷಕರು ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ಕೆಲವು ಶಾಲೆಗಳಲ್ಲಿ ಶೇ. 25ರಿಂದ 30 ಶುಲ್ಕ ವಿನಾಯಿತಿ ನೀಡಲಾಗಿದೆ. ಅದಾಗ್ಯೂ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಶೇ. 70 ಶುಲ್ಕ ಮಾತ್ರ ಪಡೆಯುವಂತೆ ಸೂಚಿಸಲು ಸರ್ಕಾರ ನಿರ್ಧರಿಸಿದ್ದು, ಆ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಈ ಬಾರಿ ಬೋಧನಾ ಶುಲ್ಕವನ್ನಷ್ಟೇ ಪಡೆಯಬೇಕು. ಅಭಿವೃದ್ಧಿ ಶುಲ್ಕ, ದೇಣಿಗೆ ಎಂದು ಹೆಚ್ಚುವರಿ ಹಣ ಪಡೆಯುವಂತಿಲ್ಲ ಎಂದೂ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಮೇ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆ?; ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಬೋಧನಾ ಶುಲ್ಕದಲ್ಲಿ ಪರೀಕ್ಷಾ ಶುಲ್ಕ, ಶಿಕ್ಷಕ ಮತ್ತು ಶಿಕ್ಷಕೇತರರ ವೇತನಾ ಶುಲ್ಕ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕ್ರೀಡಾ ಶುಲ್ಕಗಳು ಸೇರಿರುತ್ತವೆ. ಇದನ್ನು ಹೊರತು ಪಡಿಸಿ ಬೇರೆ ಶುಲ್ಕ ವಿಧಿಸುವಂತಿಲ್ಲ. ಆನ್​ಲೈನ್​ ಶಿಕ್ಷಣಕ್ಕೂ ಹೆಚ್ಚುವರಿ ಹಣ ಕೇಳುವಂತಿಲ್ಲ. ಈಗಾಗಲೇ ಶುಲ್ಕ ಕಟ್ಟಿದ್ದು, ಹೆಚ್ಚು ಹಣ ನೀಡಿದಂತಾಗಿದ್ದರೆ ಅದನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕೂಡ ಅವಕಾಶವಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.

    ಇನ್ನು ಶುಲ್ಕದ ವಿಚಾರದಲ್ಲಿ ಪಾಲಕರು ಮತ್ತು ಶಾಲಾ ಮುಖ್ಯಸ್ಥರ ಮಧ್ಯೆ ಏನಾದರೂ ತಕರಾರು ಉಂಟಾದರೆ ಅದರ ಇತ್ಯರ್ಥಕ್ಕಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಮಿತಿ ರಚಿಸಲಿದ್ದು, ಅಲ್ಲಿಗೆ ದೂರು ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ.

    ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುತ್ತಿದ್ದವರ ಮೇಲೆ ಕಲ್ಲು ತೂರಾಟ: ಪೊಲೀಸ್​ ಬಂದೋಬಸ್ತ್

    ಅಂಚೆ ಕಚೇರಿಯಲ್ಲೂ ನಿಮ್ಮ ಹಣ ಸೇಫಲ್ಲ! ಬಡವರ ಹಣ ದೋಚುತ್ತಾರೆ ಖತರ್ನಾಕ್ ಅಧಿಕಾರಿಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts