More

    ಟಿಕ್​ಟಾಕ್​ನಲ್ಲಿ ಹಣ ಗಳಿಸುವ ಮಾರ್ಗ ಹೇಳಿಕೊಟ್ಟ ಯುವತಿಗೆ 10 ವರ್ಷ ಜೈಲುಶಿಕ್ಷೆ!

    ಕೈರೋ: ಸೋಶಿಯಲ್ ಮೀಡಿಯಾಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆಯಿಂದಿರಬೇಕು. ಒಂದು ಚೂರು ಹೆಚ್ಚು ಕಡಿಮೆಯಾದರೂ ಕಂಟಕ ಸುತ್ತಿಕೊಳ್ಳುತ್ತದೆ. ಅದೇ ರೀತಿ ಟಿಕ್​ಟಾಕ್​ ಬಳಸುತ್ತಿದ್ದ ಯುವತಿಯೊಬ್ಬಳು ಮಾಡಿದ ತಪ್ಪಿನಿಂದಾಗಿ ಆಕೆ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ.

    20 ವರ್ಷ ವಯಸ್ಸಿನ ಹನೀನ್ ಈ ರೀತಿ ಶಿಕ್ಷೆಗೆ ಗುರಿಯಾಗಿರುವ ಯುವತಿ. ಆಕೆ ಟಿಕ್​ಟಾಕ್​ನಲ್ಲಿ ಸಾಕಷ್ಟು ಆಕ್ಟಿವ್ ಇದ್ದು ಸುಮಾರು 9 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ. ಮಹಿಳೆಯರು ಹಣ ಸಂಪಾದನೆ ಮಾಡಲು ಏನು ಮಾಡಬೇಕು ಎನ್ನುವ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿರುತ್ತಿದ್ದಳು. ಯಾವ ಆ್ಯಪ್​ನಿಂದ ಎಷ್ಟು ಹಣ ಸಂಪಾದನೆ ಮಾಡುವುದರ ಬಗ್ಗೆ ಮಾಹಿತಿ ಕೊಡುತ್ತಿದ್ದಳು. ಆದರೆ ಆಕೆ ವೇಶ್ಯಾವಾಟಿಕೆಗೆ ಸಹಾಯ ಮಾಡುತ್ತಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯ ಮೇಲೆ ಈಜಿಪ್ಟ್ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು.

    ಆದರೆ ಈ ಪ್ರಕರಣದ ವಿಚಾರಣೆಗೆ ಹನೀನ್ ನ್ಯಾಯಾಲಯಕ್ಕೆ ತೆರಳಿಲ್ಲ. ಆ ಹಿನ್ನೆಲೆಯಲ್ಲಿ ಆಕೆಗೆ 10 ಲಕ್ಷ ರೂಪಾಯಿ ದಂಡದ ಜತೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆಕೆಯೊಂದಿಗೆ ಇನ್ನೂ ಮೂರು ಯುವತಿಯರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. (ಏಜೆನ್ಸೀಸ್)

    ಮಗನ ಟ್ಯೂಷನ್ ಟೀಚರ್ ಜತೆ ಅಪ್ಪನ ಲವ್ವಿ ಡವ್ವಿ! ಮದುವೆ ನಿಲ್ಲಿಸಿದ ಮಗ ಆತ್ಮಹತ್ಯೆಗೆ ಶರಣು!

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts