More

    ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಕಾನೂನು: ಮೊದಲ ಹೆಜ್ಜೆ ಇಡುತ್ತಿದೆ ಈ ರಾಜ್ಯ!

    ರಾಂಚಿ: ಸದ್ಯದಲ್ಲೇ ಝಾರ್ಖಂಡ್​ ರಾಜ್ಯವು ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕಾನೂನು ತರುವ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ಈ ಉದ್ದೇಶಕ್ಕಾಗಿ, ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ‘ಮೆಡಿಕಲ್ ಪ್ರೊಟೆಕ್ಷನ್​ ಬಿಲ್’​ಅನ್ನು ರಾಜ್ಯ ಸರ್ಕಾರ ಮಂಡಿಸಲಿದೆ ಎನ್ನಲಾಗಿದೆ.

    ವೈದ್ಯರು, ನರ್ಸ್​ಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸೇವೆ ಎಷ್ಟು ಮುಖ್ಯ ಎಂಬುದು ಕರೊನಾ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅನುಭವವಾಗಿದೆ. ಆದರೆ ಇದೇ ಸಂದರ್ಭದಲ್ಲಿ ರೋಗಿಗಳ ಸಾವಿನಿಂದ ದುಃಖಿತರಾಗಿ ವೈದ್ಯಕೀಯ ಸಿಬ್ಬಂದಿ ಮೇಲೆ ಜನರು ಹಲ್ಲೆ ಮಾಡಿದ ಪ್ರಸಂಗಗಳೂ ಭಾರತದಲ್ಲಿ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯರ ಸಂಘವು ವೈದ್ಯಕೀಯ ಸಿಬ್ಬಂದಿ ರಕ್ಷಣೆ ಒದಗಿಸುವ ಪರಿಣಾಮಕಾರಿ ಕಾನೂನು ತರಲು ಸರ್ಕಾರವನ್ನು ಒತ್ತಾಯಿಸಿತ್ತು.

    ಇದನ್ನೂ ಓದಿ: ಒಲಿಂಪಿಕ್ಸ್ ಪದಕ ವಿಜೇತನಿಗೆ ಗೌರವ, ಆರ್ಮಿ ಕ್ರೀಡಾಂಗಣಕ್ಕೆ ‘ನೀರಜ್ ಚೋಪ್ರ’ ಹೆಸರು

    ಇದೀಗ ಝಾರ್ಖಂಡ್​ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. “ನಾವು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಕೋವಿಡ್​ 19 ಸಂದರ್ಭದಲ್ಲಿ ಅವರು ಅಗಾಧ ಸೇವೆ ಮಾಡಿದ್ದಾರೆ. ಅವರಿಗೆ ಸುಭದ್ರ ವಾತಾವರಣ ಒದಗಿಸಲು ಬದ್ಧರಾಗಿದ್ದೇವೆ” ಎಂದು ರಾಜ್ಯದ ಆರೋಗ್ಯ ಸಚಿವ ಬನ್ನಾ ಗುಪ್ತ ಹೇಳಿದ್ದಾರೆಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)

    Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

    ಕಾಬುಲ್​ನಿಂದ ಹೊರಟಿದೆ, 85 ಭಾರತೀಯರನ್ನು ಹೊತ್ತ ಐಎಎಫ್​​ ವಿಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts