More

    ಓ ಪುರುಷರೇ.. ನಿಮಗಿದು ಬ್ಯಾಡ್ ನ್ಯೂಸ್​!; ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ಕರೊನಾ ಸೋಂಕಿತರಾಗದಂತೆ ಎಚ್ಚರ ವಹಿಸಿ

    ನ್ಯೂಯಾರ್ಕ್​: ಇದು ಪುರುಷರಿಗೆ ಆತಂಕ ತರುವ ಸುದ್ದಿ. ಏಕೆಂದರೆ ಇಲ್ಲೊಂದು ಅಧ್ಯಯನ ಹೊರಹಾಕಿರುವ ಅಂಶಗಳೇ ಹಾಗಿವೆ. ಪುರುಷರಾಗಿದ್ದು, ಕೆಲವೊಂದು ಲಕ್ಷಣಗಳಿದ್ದು, ಕರೊನಾ ಸೋಂಕಿಗೆ ಒಳಗಾದರೆ ಅಂಥವರು ಕೋವಿಡ್​ನಿಂದಾಗಿ ಸಾಯುವ ಸಾಧ್ಯತೆಗಳು ಅಧಿಕ ಎಂದು ಈ ವರದಿ ಹೇಳಿದೆ.

    ಕ್ಲಿನಿಕಲ್ ಇನ್​ಫೆಕ್ಷಿಯಸ್ ಡಿಸೀಸಸ್​ ಎಂಬ ಜರ್ನಲ್​ನಲ್ಲಿ ಈ ಆತಂಕಕಾರಿ ಅಂಶಗಳಿರುವ ಅಧ್ಯಯನ ವರದಿ ಪ್ರಕಟವಾಗಿದೆ. ಕೋವಿಡ್​-19 ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿರುವ 67 ಸಾವಿರ ರೋಗಿಗಳನ್ನು ಅಧ್ಯಯನ ಮಾಡಿ ಈ ಅಂಶವನ್ನು ಕಂಡುಹಿಡಿಯಲಾಗಿದೆ ಎಂದು ವರದಿ ತಿಳಿಸಿದೆ. ಇದಕ್ಕಾಗಿ ಅದು 613 ಆಸ್ಪತ್ರೆಗಳಲ್ಲಿ ರೋಗಿಗಳ ಪರಿಶೀಲನೆ ನಡೆಸಿದೆ.

    ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಬಿಗ್​ ಶಾಕ್​! ಒಂದೇ ವಾರದಲ್ಲಿ ಶೇ. 2 ಏರಿದ ಗೋಲ್ಡ್​ ರೇಟ್​!

    ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್​-19 ರೋಗಿಗಳಲ್ಲಿ ಒಂದೇ ವಯಸ್ಸಿನ, ಒಂದೇ ಆರೋಗ್ಯ ಸ್ಥಿತಿಯ ಮಹಿಳೆಯರಿಗೆ ಹೋಲಿಸಿದರೆ ಅದೇ ವಯಸ್ಸಿನ, ಅದೇ ಆರೋಗ್ಯ ಸ್ಥಿತಿಯ ಸೋಂಕಿತ ಪುರುಷರು ಸಾಯುವ ಸಾಧ್ಯತೆ ಶೇ. 30 ಅಧಿಕ ಎಂದು ಈ ಅಧ್ಯಯನ ಹೇಳಿದೆ. ಇನ್ನು ಸೋಂಕಿತರ ಪೈಕಿ ಪುರುಷರು ಬೊಜ್ಜಿದ್ದು, ಅಧಿಕ ರಕ್ತದೊತ್ತಡ ಹೊಂದಿದ್ದು ಮಧುಮೇಹಿಗಳಾಗಿದ್ದರೆ ಅಂಥವರು ಸಾಯುವ ಸಾಧ್ಯತೆ ಅಧಿಕ ಎಂದು ಅಧ್ಯಯನ ತಿಳಿಸಿದೆ. ಯಾವ ಥರದ ಸೋಂಕಿತರು ಸಾಯುವ ಸಾಧ್ಯತೆ ಹೆಚ್ಚು ಎಂದು ತಿಳಿದಿರುವುದು ಚಿಕಿತ್ಸೆಯ ಹಂತದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಈ ಅಧ್ಯಯನ ತಂಡದ ಆ್ಯಂಟನಿ ಡಿ. ಹ್ಯಾರಿಸ್​ ಹೇಳಿದ್ದಾರೆ.

    ವಯೋವೃದ್ಧರು ಸೋಂಕಿನಿಂದಾಗಿ ಸಾವಿಗೀಡಾಗುವ ಸಾಧ್ಯತೆ ಅಧಿಕ ನಿಜ. ಆದರೆ ಯುವಕರು ಅದರಲ್ಲೂ ಒಬೆಸಿಟಿ ಹಾಗೂ ಹೈಪರ್​ಟೆನ್ಷನ್​ ಹೊಂದಿದ್ದು ಸೋಂಕಿತರಾದರೆ ಅವರು ಅವರದೇ ವಯಸ್ಸಿನ ಇತರ ಸೋಂಕಿತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಾಪಾಯ ಹೊಂದಿರುತ್ತಾರೆ ಎಂದು ಈ ಅಧ್ಯಯನ ನಡೆಸಿರುವ ಯುನಿವರ್ಸಿಟಿ ಆಫ್​ ಮೇರಿಲ್ಯಾಂಡ್​ನ ಕ್ಯಾಥರಿನ್​ ಇ. ಗುಡ್​ಮನ್ ಹೇಳಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?

    ‘ಅಯ್ಯೋ ನಿಂಗೆ ಕ್ಯಾನ್ಸರ್​ ಇದೆ! ಟ್ರೀಟ್ಮೆಂಟ್​ ತಗೊಳ್ದಿದ್ರೆ ಸತ್ತೇ ಹೋಗ್ತೀಯ’ ಅಂತ ಹೇಳುತ್ತಲೇ 1.47 ಕೋಟಿ ರೂ. ವಂಚಿಸಿದ ವೈದ್ಯೆ!

    ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

    ಕೈಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬೇಡಿ; ಸಿ.ಎಂ. ಇಬ್ರಾಹಿಂ ಮನವಿ

    ಈ ಮಹಿಳಾ ಅಭ್ಯರ್ಥಿ ಸೋತರೆ ಬೆಟರು ಅನ್ಸುತ್ತೆ!; ಗೆಲ್ಲಿಸುವುದೋ-ಸೋಲಿಸುವುದೋ ಎಂಬ ಗೊಂದಲದಲ್ಲಿ ಮತದಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts