More

    5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ನವದೆಹಲಿ: ಹಮಾಸ್ ಬಂದೂಕುಧಾರಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಸುಮಾರು 1,140 ಜನರು ಸಾವನ್ನಪ್ಪಿದ್ದು, ಯುದ್ಧ-ಹಾನಿಗೊಳಗಾಗಿದೆ. ಪ್ಯಾಲೆಸ್ಟೀನಿಯನ್ ಪ್ರದೇಶದ ಉತ್ತರದಲ್ಲಿ ವಾಸವಾಗಿರುವ ಮಹಿಳೆ ತನ್ನ ಮನೆಯಿಂದ ಮೈಲುಗಳಷ್ಟು ದೂರದಲ್ಲಿರುವ ದಕ್ಷಿಣ ಗಾಜಾದ ಆಸ್ಪತ್ರೆಗೆ ನಡೆದುಕೊಂಡು ಬಂದು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ.

    ಅಕ್ಟೋಬರ್ 7 ರಂದು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ಕೆಲವು ದಿನಗಳ ನಂತರ, ಯುವತಿ ತನ್ನ ಇತರ ಮೂರು ಮಕ್ಕಳೊಂದಿಗೆ ಕಾಲ್ನಡಿಗೆಯಲ್ಲಿ ಬೀಟ್ ಹನುನ್‌ನಲ್ಲಿರುವ ಕುಟುಂಬ ಮನೆಯಿಂದ ಸುರಕ್ಷತೆಗಾಗಿ ಬೇರೆ ಕಡೆ ತೆರಳುತ್ತಿತ್ತು. ಯುದ್ಧ ವೇಳೆ  ಮಹಿಳೆ ಆರು ತಿಂಗಳ ಗರ್ಭಿಣಿಯಾಗಿದ್ದಳು.

    ಇಮಾನ್ ಅಲ್-ಮಸ್ರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಮಹಿಳೆಯು ಜಬಾಲಿಯಾ ನಿರಾಶ್ರಿತರ ಶಿಬಿರಕ್ಕೆ ಐದು ಕಿಲೋಮೀಟರ್‌ ದೂರ ನಡೆದರು. ದಕ್ಷಿಣಕ್ಕೆ ದೇರ್ ಅಲ್-ಬಾಲಾಹ್‌ಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಈ ವೇಳೆ ನಡೆದುಕೊಂಡು ಹೋಗಿದ್ದಾರೆ.ಯುದ್ಧದಿಂದಾಗಿ ಇತರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸ್ಥಳಾವಕಾಶ ಕಲ್ಪಿಸಲು, ಮಹಿಳೆಯು ನವಜಾತ ಶಿಶುಗಳೊಂದಿಗೆ ಆಸ್ಪತ್ರೆಯನ್ನು ತೊರೆದಿದ್ದಾರೆ.

    ಸದ್ಯ ಇಮಾನ್‌ ಅವರು ಡೀರ್ ಅಲ್-ಬಾಲಾಹ್‌ನಲ್ಲಿ ಇಕ್ಕಟ್ಟಾದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಜನ್ಮ ನೀಡಿದ ನಾಲ್ಕರಲ್ಲಿ ಮೂರು ಮಕ್ಕಳು ಆರೋಗ್ಯವಾಗಿವೆ. ಮತ್ತೊಂದು ಮಗು ಕೇವಲ 2 kg ತೂಗುತ್ತದೆ. ಈ ಮಗು ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರಿಂದ, ಆ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಮಹಿಳೆ ಹೋಗಿದ್ದಾರೆ.

    ಅಯೋಧ್ಯೆ ಪ್ರವಾಸ; ಶ್ರೀರಾಮನನ್ನು ನೋಡಲು..ನಿಮ್ಮ ಪ್ರವಾಸವನ್ನು ಈ ರೀತಿ ಪ್ಲ್ಯಾನ್​​ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts