More

    ಇಂಥ ಮದುವೆ ಇನ್ಯಾವುದೂ ಆಗೇ ಇಲ್ಲ ಅನಿಸುತ್ತೆ!: ತೋಟದಲ್ಲೇ ಲಗ್ನ, ಸೈಕಲಲ್ಲೇ ದಿಬ್ಬಣ; ಒಟ್ಟು ಖರ್ಚೆಷ್ಟು ಗೊತ್ತಾ?

    ನವದೆಹಲಿ: ಮದುವೆ ಎಂದಾಕ್ಷಣ ಆಡಂಬರದಿಂದ ಮಾಡಿದ್ರೇನೇ ವಿಶೇಷ ಎಂದುಕೊಂಡವರಿದ್ದಾರೆ. ಆದರೆ ಇಲ್ಲೊಂದು ಮದುವೆ ಸರಳವಾಗಿ ನಡೆದೂ ವಿಶೇಷ ಎನಿಸಿಕೊಂಡಿದೆ. ಆ ಮೂಲಕ ಈ ಮದುವೆ ಹಲವರ ಗಮನ ಸೆಳೆದಿದ್ದಷ್ಟೇ ಅಲ್ಲ, ಮೆಚ್ಚುಗೆಗೂ ಪಾತ್ರವಾಗಿದೆ.

    ಮಾಧುರಿ ಬಲೋಡಿ-ಆದಿತ್ಯ ಅಗರ್​ವಾಲ್​ ಎಂಬ ಈ ವಧು-ವರರು ಹದಿನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯನ್ನೂ ಅತಿ ವಿಶೇಷ ರೀತಿಯಲ್ಲಿ ಆಗಿದ್ದಾರೆ. ಹೀಗೊಂದು ಮದುವೆಯಾಗುವುದು ವಧುವಿನ ಕನಸಾಗಿದ್ದು, ಕೊನೆಗೂ ಅದು ಈಡೇರಿದೆ. ವಿಶೇಷವೆಂದರೆ ದೆಹಲಿಯಲ್ಲಿರುವ ಈಕೆಯ ಮದುವೆ ನಡೆದಿದ್ದು ಮಾವನ ತೋಟದ ಮನೆಯಲ್ಲಿ. ಇನ್ನು ಈ ಮದುವೆಗೆ ವರ ದಿಬ್ಬಣ ಬಂದಿದ್ದು ಎಲೆಕ್ಟ್ರಿಕ್​ ಸೈಕಲ್​ನಲ್ಲಿ.

    ಮದುವೆ ನಡೆಯುತ್ತಿದ್ದ ಜಾಗದಲ್ಲಿ ಹಳೇ ಬಾಟಲಿ, ಪತ್ರಿಕೆಗಳನ್ನು ಬಳಸಿಯೇ ಅಲಂಕಾರ ಮಾಡಲಾಗಿತ್ತು ಹಾಗೂ ಪರಿಸರಸ್ನೇಹಿ ವಸ್ತುಗಳನ್ನೇ ಎಲ್ಲದಕ್ಕೂ ಬಳಸಲಾಗಿತ್ತು. ಅದರಲ್ಲೂ ಪ್ಲಾಸ್ಟಿಕ್​ ವಸ್ತುಗಳನ್ನು ಸಾಧ್ಯವಾದಷ್ಟೂ ಮಟ್ಟಿಗೆ ದೂರವಿಡಲಾಗಿತ್ತು. ಇನ್ನು ಮದುವೆಗೆ ಆಹ್ವಾನ ಪತ್ರಿಕೆಯನ್ನೇ ಮುದ್ರಿಸಿಲ್ಲ, ಬದಲಿಗೆ ಇ-ಇನ್​ವೈಟ್​ಗಳ ಮೂಲಕ ಆಹ್ವಾನಿಸಲಾಗಿತ್ತು.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಇನ್ನು ವಧು-ವರರು ತುಳಸಿ ಮಾಲೆ ಬದಲಿಸಿಕೊಂಡು ವಿವಾಹವಾದರು. ಉಭಯಕುಟುಂಬಗಳ ನಡುವೆ ಯಾವುದೇ ಉಡುಗೊರೆ ವಿನಿಮಯ ಇರಲಿಲ್ಲ. ಎರಡೂ ಕಡೆಯವರು ತಲಾ ಒಂದು ಕೆ.ಜಿ. ಹಣ್ಣುಗಳನ್ನು ತಂದು ಅದನ್ನಷ್ಟೇ ಉಡುಗೊರೆ ರೀತಿ ವಿನಿಮಯಿಸಿಕೊಂಡಿದ್ದಾರೆ. ಇನ್ನು ಮದುವೆಗೆ ಆಗಮಿಸುವವರು ಸಸಿಗಳನ್ನಷ್ಟೇ ಉಡುಗೊರೆಯಾಗಿ ಕೊಡಬೇಕು ಎಂದು ಕೋರಿದ್ದರಿಂದ, ಆಹ್ವಾನಿತರು ಅದನ್ನಷ್ಟೇ ಕೊಟ್ಟರು.

    ಇನ್ನು ಮದುವೆ ಎಂದರೆ ಈಗ ಎಲ್ಲದಕ್ಕೂ ಔಟ್​ಸೋರ್ಸ್ ಸಿಗುತ್ತಿರುವ ಈ ಕಾಲದಲ್ಲಿ ಈ ಮದುವೆಯನ್ನು ಮನೆಯವರೆಲ್ಲ ಸೇರಿಯೇ ನಡೆಸಿದ್ದಾರೆ. ಸಾಮಾನ್ಯವಾಗಿ ಮದುವೆ ಎಂದರೆ ಎಲ್ಲದಕ್ಕೂ ಹೊರಗಡೆಯವರಿಗೆ ಕಾಂಟ್ರಾಕ್ಟ್​ ಕೊಡಲಾಗುತ್ತದೆ. ಸಂಬಂಧಿಕರು ಮದುವೆ ದಿನ ಅಥವಾ ಅದರ ಹಿಂದಿನ ದಿನವಷ್ಟೇ ಬರುತ್ತಾರೆ. ಆದರೆ ನಮ್ಮ ಮದುವೆಗೆ ಎಲ್ಲರೂ ಸಂಬಂಧಿಕರೇ ಓಡಾಡಿದ್ದು, ಕಸಿನ್​ ಪೌರೋಹಿತ್ಯ ನಡೆಸಿದರೆ, ಗೆಳೆಯ ಫೋಟೋಗ್ರಾಫರ್​ ಆಗಿದ್ದ. ಮದುವೆ ಅಲಂಕಾರಳನ್ನೆಲ್ಲ ಬಂಧು-ಬಳಗದವರೇ ಸೇರಿಕೊಂಡು ಮಾಡಿದ್ದಾರೆ ಎಂದಿದ್ದಾರೆ ಮಾಧುರಿ.

    ಇದನ್ನೂ ಓದಿ: ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ

    ಈ ಮದುವೆಗೆ ವಧು ಬರೀ 2,500 ರೂ. ಸೀರೆ ಖರೀದಿಸಿದ್ದರೆ, ವರ 3 ಸಾವಿರ ರೂ. ಶೇರ್ವಾಣಿ ಖರೀದಿಸಿದ್ದ. ಇನ್ನು ಪುನರ್ಬಳಕೆ ಮಾಡುವಂಥ ವಸ್ತುಗಳನ್ನೇ ಎಲ್ಲದಕ್ಕೂ ಬಳಸಲಾಗಿತ್ತು. ಒಟ್ಟಿನಲ್ಲಿ ಈ ಮದುವೆಗೆ ಎಲ್ಲ ಸೇರಿ ಖರ್ಚಾಗಿದ್ದು ಬರೀ 2 ಲಕ್ಷ ರೂಪಾಯಿ. 14 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಜನವರಿ 14ರಂದು ಮದುವೆಯಾಗಿದ್ದು, ಈ ವಿಶೇಷ ಮದುವೆ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ಈ ಮದುವೆ ಹೇಗಾಗುತ್ತದೋ ಎಂಬ ಆತಂಕ ಹಲವರಿಗಿತ್ತು, ಆದರೆ ಮದುವೆ ಮುಗಿದ ಬಳಿಕ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಮಾಧುರಿ.

    ಈ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ !

    ಕದ್ದ ಹಣ ನಿರೀಕ್ಷೆಗಿಂತ ಹೆಚ್ಚಿದ್ದಿದ್ದನ್ನು ಕಂಡು ಕಳ್ಳನಿಗೇ ಹಾರ್ಟ್​ ಅಟ್ಯಾಕ್​! ಅದೇ ದುಡ್ಡಲ್ಲೇ ಟ್ರೀಟ್ಮೆಂಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts